Benne kadubu recipe in Kannada | ಬೆಣ್ಣೆ ಕಡುಬು ಮಾಡುವ ವಿಧಾನ
ಬೆಣ್ಣೆ ಕಡುಬು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ದೋಸೆ ಅಕ್ಕಿ
- 1/2 ಕಪ್ ತೆಂಗಿನ ತುರಿ
- ಅಗತ್ಯವಿದ್ದಷ್ಟು ನೀರು
- ಉಪ್ಪು ರುಚಿಗೆ ತಕ್ಕಷ್ಟು
- 1 ಟೇಬಲ್ ಚಮಚ ಬೆಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಟೇಬಲ್ ಚಮಚ ಎಣ್ಣೆ
- 2 ಟೇಬಲ್ ಚಮಚ ನೆಲಗಡಲೆ
- 1/2 ಚಮಚ ಸಾಸಿವೆ
- 1 ಚಮಚ ಕಡ್ಲೆಬೇಳೆ
- 1 ಚಮಚ ಉದ್ದಿನಬೇಳೆ
- 1 - 2 ಹಸಿಮೆಣಸಿನಕಾಯಿ ಅಥವಾ ಒಣಮೆಣಸು ಅಥವಾ ಕರಿಮೆಣಸು
- ಸ್ವಲ್ಪ ಕರಿಬೇವು
- 1/4 ಕಪ್ ತೆಂಗಿನ ತುರಿ
- ಸ್ವಲ್ಪ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
ಬೆಣ್ಣೆ ಕಡುಬು ಮಾಡುವ ವಿಧಾನ:
- ಅಕ್ಕಿಯನ್ನು 4 - 5 ಘಂಟೆಗಳ ಕಾಲ ನೆನೆಸಿಡಿ.
- ಅಕ್ಕಿ ನೆನೆದ ನಂತ್ರ ನೀರು ಬಗ್ಗಿಸಿ. ನೆನೆಸಿದ ಅಕ್ಕಿಯನ್ನು ತೆಂಗಿನತುರಿ ಮತ್ತು ಉಪ್ಪಿನೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ.
- ಅರೆದ ಹಿಟ್ಟನ್ನು ಒಂದು ದಪ್ಪ ತಳದ ಬಾಣಲೆಯಲ್ಲಿ ತೆಗೆದುಕೊಳ್ಳಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ, ನೀರು ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ.
- ಬೆಣ್ಣೆಯನ್ನು ಸೇರಿಸಿ.
- ಸ್ಟವ್ ಹಚ್ಚಿ ಮಧ್ಯಮ ಉರಿಯಲ್ಲಿ ಮಗುಚಿ.
- ಗಟ್ಟಿಯಾದ ಮೇಲೆ ಸ್ಟವ್ ಆಫ್ ಮಾಡಿ. ಗಟ್ಟಿಯಾದರೂ ಹಿಟ್ಟು ಮೆತ್ತಗಿರಬೇಕು. ತುಂಬ ಗಟ್ಟಿ ಎನಿಸಿದರೆ ಸ್ವಲ್ಪ ನೀರು ಸೇರಿಸಿ ಮೆತ್ತಗಿನ ಹಿಟ್ಟು ತಯಾರಿಸಿಕೊಳ್ಳಿ.
- ಸ್ವಲ್ಪ ಬಿಸಿ ಆರಿದ ಮೇಲೆ, ಕೈಗೆ ನೀರು ಮುಟ್ಟಿಸಿಕೊಂಡು, ನೆಲ್ಲಿಕಾಯಿ ಗಾತ್ರದ ಉಂಡೆಗಳನ್ನು ಮಾಡಿ.
- ಇಡ್ಲಿ ಪ್ಲೇಟ್ ನಲ್ಲಿಟ್ಟು, ಸೆಕೆಯಲ್ಲಿ (ಆವಿಯಲ್ಲಿ) 10 - 15 ನಿಮಿಷ ಬೇಯಿಸಿ.. ಚಟ್ನಿ, ಸಾಂಬಾರ್ ಅಥವಾ ಸಾರಿನಿಂದಿಗೆ ಸವಿದು ಆನಂದಿಸಿ.
- ಅಥವಾ ಒಗ್ಗರಣೆ ಮಾಡಿ ತಿನ್ನಬಹುದು. ಒಂದು ಬಾಣಲೆಯಲ್ಲಿ ಎಣ್ಣೆ, ನೆಲಗಡಲೆ, ಸಾಸಿವೆ, ಕಡ್ಲೆಬೇಳೆ ಮತ್ತು ಉದ್ದಿನಬೇಳೆಯ ಒಗ್ಗರಣೆ ಮಾಡಿ.
- ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ.
- ಸೀಳಿದ ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ, ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
- ಆಮೇಲೆ ಬೇಯಿಸದ ಉಂಡೆಗಳು ಮತ್ತು ಕಾಯಿ ತುರಿ ಹಾಕಿ, ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. ಬೇಕಾದಲ್ಲಿ ಉಪ್ಪು ಸೇರಿಸಿ.
- ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ, ಚಟ್ನಿ, ಸಾಂಬಾರ್ ಅಥವಾ ಸಾರಿನಿಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ