Halasina hannina panaka or changuli recipe in Kannada | ಹಲಸಿನ ಹಣ್ಣಿನ ಪಾನಕ ಅಥವಾ ಚಂಗುಳಿ ಮಾಡುವ ವಿಧಾನ
ಚಂಗುಳಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 - 3/4 ಕಪ್ ಹಲಸಿನ ಹಣ್ಣು
- ನಿಂಬೆ ಹಣ್ಣಿನ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- 1/4 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- 1/4 - 1/2 ಟೀಸ್ಪೂನ್ ಕಾಳುಮೆಣಸಿನ ಪುಡಿ
- 1 ಏಲಕ್ಕಿ (ಬೇಕಾದಲ್ಲಿ)
ಹಲಸಿನ ಹಣ್ಣಿನ ಪಾನಕ ಅಥವಾ ಚಂಗುಳಿ ಮಾಡುವ ವಿಧಾನ:
- ಹಲಸಿನ ಹಣ್ಣನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ.
- ಒಂದು ಪಾತ್ರೆಯಲ್ಲಿ ಹೆಚ್ಚಿದ ಹಲಸಿನ ಹಣ್ಣು, ಒಂದು ಕಪ್ ನೀರು, ಉಪ್ಪು ಮತ್ತು ಬೆಲ್ಲ ತೆಗೆದುಕೊಳ್ಳಿ.
- ಹಲಸಿನ ಹಣ್ಣು ಮೆತ್ತಗೆ ಬೇಯುವವರೆಗೆ ಅಥವಾ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
- ಕೊನೆಯಲ್ಲಿ ಜಜ್ಜಿದ ಕಾಳುಮೆಣಸು ಮತ್ತು ಏಲಕ್ಕಿ ಸೇರಿಸಿ ಕುದಿಸಿ. ಉಪ್ಪು, ಸಿಹಿ ಮತ್ತು ಖಾರ ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ.
- ಒಂದು ನಿಮಿಷದ ನಂತರ ಸ್ಟವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ