Eerulli thambli recipe in kannada | ಈರುಳ್ಳಿ ತಂಬ್ಳಿ ಮಾಡುವ ವಿಧಾನ
ಈರುಳ್ಳಿ ತಂಬ್ಳಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಮಧ್ಯಮ ಗಾತ್ರದ ಈರುಳ್ಳಿ
- 1/2 ಕಪ್ ತೆಂಗಿನತುರಿ
- 1/2 ಕಪ್ ಮೊಸರು ಅಥವಾ 3/4 ಕಪ್ ಮಜ್ಜಿಗೆ
- 1 ಒಣ ಮೆಣಸಿನಕಾಯಿ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 2 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ
- 1/2 ಒಣ ಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- 3 - 4 ಕರಿಬೇವಿನ ಎಲೆ
ಈರುಳ್ಳಿ ತಂಬ್ಳಿ ಮಾಡುವ ವಿಧಾನ:
- ಈರುಳ್ಳಿಯನ್ನು ಸಿಪ್ಪೆ ತೆಗೆದು ಕತ್ತರಿಸಿ.
- ಕತ್ತರಿಸಿದ ಈರುಳ್ಳಿ, ತೆಂಗಿನತುರಿ ಮತ್ತು ಒಣಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ಒಂದು ಪಾತ್ರೆಗೆ ಬಗ್ಗಿಸಿ.
- ಒಂದು ಚಮಚ ಅಥವಾ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಸುಮಾರು ಅರ್ಧ ಕಪ್ ನಷ್ಟು ನೀರು ಸೇರಿಸಿ.
- ಮೊಸರು ಅಥವಾ ಮಜ್ಜಿಗೆ ಸೇರಿಸಿ.
- ಎಣ್ಣೆ, ಒಣಮೆಣಸು, ಕರಿಬೇವು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ರುಚಿಕರ-ಸುಲಭ
ಪ್ರತ್ಯುತ್ತರಅಳಿಸಿ