Veg lollipop recipe in Kannada | ವೆಜ್ ಲಾಲಿಪಾಪ್ ಮಾಡುವ ವಿಧಾನ
ವೆಜ್ ಲಾಲಿಪಾಪ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ದೊಡ್ಡ ಆಲೂಗಡ್ಡೆ
- 1 ಸಣ್ಣ ಕ್ಯಾರಟ್ ತುರಿದಿದ್ದು
- 1/2 ದೊಣ್ಣೆಮೆಣಸು ಸಣ್ಣಗೆ ಹೆಚ್ಚಿದ್ದು
- 1/2 ಟೀಸ್ಪೂನ್ ಜೀರಿಗೆ
- 1/2 ಈರುಳ್ಳಿ
- 1 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಶುಂಠಿ ಮತ್ತು ಬೆಳ್ಳುಳ್ಳಿ
- 1 ಟೇಬಲ್ ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
- 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
- 1/2 ಟೀಸ್ಪೂನ್ ಕೊತ್ತಂಬರಿ ಪುಡಿ
- 1/4 ಟೀಸ್ಪೂನ್ ಜೀರಿಗೆ ಪುಡಿ
- 1/4 ಟೀಸ್ಪೂನ್ ಗರಂ ಮಸಾಲಾ
- ದೊಡ್ಡ ಚಿಟಿಕೆ ಮಾವಿನಕಾಯಿ ಪುಡಿ ಅಥವಾ ಸ್ವಲ್ಪ ನಿಂಬೆ ರಸ
- ದೊಡ್ಡ ಚಿಟಿಕೆ ಅರಿಶಿನ
- ದೊಡ್ಡ ಚಿಟಿಕೆ ಚಾಟ್ ಮಸಾಲಾ
- 3 ಬ್ರೆಡ್
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಕಾಯಿಸಲು
ವೆಜ್ ಲಾಲಿಪಾಪ್ ಮಾಡುವ ವಿಧಾನ:
- ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆಯಿರಿ.
- 2 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ಜೀರಿಗೆ ಹಾಕಿ.
- ಜೀರಿಗೆ ಸಿಡಿದ ಮೇಲೆ ನುಣ್ಣಗೆ ಕತ್ತರಿಸಿದ ಶುಂಠಿ-ಬೆಳ್ಳುಳ್ಳಿ ಸೇರಿಸಿ.
- ಕೂಡಲೇ ಈರುಳ್ಳಿ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ.
- ತುರಿದ ಕ್ಯಾರಟ್ ಮತ್ತು ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸು ಸೇರಿಸಿ ಹುರಿಯಿರಿ.
- ನಂತ್ರ ಮಸಾಲೆ ಪುಡಿಗಳನ್ನು ಸೇರಿಸಿ. ನಾನು ಇಲ್ಲಿ ಅಚ್ಚಖಾರದ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಮಾವಿನಕಾಯಿ ಪುಡಿ, ಅರಿಶಿನ, ಚಾಟ್ ಮಸಾಲಾ ಮತ್ತು ಉಪ್ಪು ಸೇರಿಸಿದ್ದೇನೆ. ಸ್ಟವ್ ಆಫ್ ಮಾಡಿ.
- ಅದಕ್ಕೆ ಬೇಯಿಸಿದ ಆಲೂಗಡ್ಡೆ, ಕೊತ್ತಂಬರಿ ಸೊಪ್ಪು ಸೇರಿಸಿ.
- ಒಂದು ಬ್ರೆಡ್ ನ್ನು ನೀರಿನಲ್ಲಿ ಹಾಕಿ, ಹಿಂಡಿ ತೆಗೆದು ಸೇರಿಸಿ ಚೆನ್ನಾಗಿ ಕಲಸಿ.
- ಸಣ್ಣ ನಿಂಬೆಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ.
- ಉಳಿದ ಎರಡು ಬ್ರೆಡ್ ನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟು ಕೊಳ್ಳಿ.
- ವೆಜ್ ಲಾಲಿಪಾಪ್ ಉಂಡೆಗಳನ್ನು ಆ ಬ್ರೆಡ್ ಪುಡಿಯಲ್ಲಿ ಹೊರಳಾಡಿಸಿ.
- ಗುಳಿಯಪ್ಪ ಅಥವಾ ಪಡ್ಡು ಪಾನ್ ನ್ನು ಬಿಸಿಮಾಡಿ, ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
- ತಯಾರಿಸದ ವೆಜ್ ಲಾಲಿಪಾಪ್ ಉಂಡೆಗಳನ್ನು ಹಾಕಿ ಸಣ್ಣ ಉರಿಯಲ್ಲಿ ತಿರುವಿ ಹಾಕುತ್ತ ಬೇಯಿಸಿ. ಅಗತ್ಯವಿದ್ದಷ್ಟು ಎಣ್ಣೆ ಹಾಕಿ ಕಾಯಿಸಿ.
- ಟೂತ್ ಪಿಕ್ ಚುಚ್ಚಿ. ಬಿಸಿ ಇರುವಾಗಲೇ ಟೊಮೇಟೊ ಸಾಸ್ ನೊಂದಿಗೆ ಬಡಿಸಿ.
Super
ಪ್ರತ್ಯುತ್ತರಅಳಿಸಿ