Hagalakai pakoda recipe in kannada | ಹಾಗಲಕಾಯಿ ಪಕೋಡ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ದೊಡ್ಡಹಾಗಲಕಾಯಿ
- 3 ಟೇಬಲ್ ಚಮಚ ಕಡ್ಲೆ ಹಿಟ್ಟು
- 1 ಟೇಬಲ್ ಚಮಚ ಅಕ್ಕಿ ಹಿಟ್ಟು
- 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/4 ಟೀಸ್ಪೂನ್ ಇಂಗು
- 1/2 ಟೀಸ್ಪೂನ್ ಓಮ ಅಥವಾ ಅಜ್ವೈನ್
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಖಾಯಿಸಲು ಅಥವಾ ಕರಿಯಲು
ಹಾಗಲಕಾಯಿ ನೆನೆಸಲು ಬೇಕಾಗುವ ಪದಾರ್ಥಗಳು:
- 1/4 ಟೀಸ್ಪೂನ್ ಅರಿಶಿನ
- 1 ಟೀಸ್ಪೂನ್ಉಪ್ಪು
- ಅಗತ್ಯವಿದ್ದಷ್ಟು ನೀರು
- 1/4 ಟೀಸ್ಪೂನ್ ಅರಿಶಿನ
- 1 ಟೀಸ್ಪೂನ್ಉಪ್ಪು
- ಅಗತ್ಯವಿದ್ದಷ್ಟು ನೀರು
ಬೇಕಾಗುವ ಪದಾರ್ಥಗಳು: (ಬೇಕಾದಲ್ಲಿ)
- 1/4 ಟೀಸ್ಪೂನ್ ಓಮ ಅಥವಾ ಅಜ್ವೈನ್
- 1/4 ಟೀಸ್ಪೂನ್ ಜೀರಿಗೆ
- ದೊಡ್ಡ ಚಿಟಿಕೆ ಮಾವಿನಕಾಯಿ ಪುಡಿ
- 1/2 ಶುಂಠಿ ಬೆಳ್ಳುಳ್ಳಿ ಪೇಸ್ಟ್
ಹಾಗಲಕಾಯಿ ಪಕೋಡ ಮಾಡುವ ವಿಧಾನ:
- ಹಾಗಲಕಾಯಿಯನ್ನು ತೆಳುವಾಗಿ ಕತ್ತರಿಸಿಕೊಳ್ಳಿ.
- ಒಂದು ಪಾತ್ರೆಯಲ್ಲಿ ನೀರು, ಉಪ್ಪು ಮತ್ತು ಅರಿಶಿನ ಹಾಕಿ. ಕತ್ತರಿಸಿದ ಹಾಗಲಕಾಯಿಯನ್ನು 15 - 20 ನಿಮಿಷ ನೆನೆಸಿಡಿ.
- ನಂತ್ರ ನೀರು ಹಿಂಡಿ ತೆಗೆದಿಡಿ.
- ಇನ್ನೊಂದು ಪಾತ್ರೆಯಲ್ಲಿ ಕಡಲೆಹಿಟ್ಟು ಮತ್ತು ಅಕ್ಕಿ ಹಿಟ್ಟು ತೆಗೆದುಕೊಳ್ಳಿ.
- ಅದಕ್ಕೆ ಮೆಣಸಿನ ಪುಡಿ, ಉಪ್ಪು ಮತ್ತು ಇಂಗು ಸೇರಿಸಿ ಚೆನ್ನಾಗಿ ಕಲಸಿ. ನೀರು ಹಾಕಬೇಡಿ. ನಿಮ್ಮಿಷ್ಟದ ಬೇರೆ ಪದಾರ್ಥಗಳನ್ನು ಸೇರಿಸಬಹುದು. ಮೇಲಿನ "ಬೇಕಾದಲ್ಲಿ" ಎಂದು ನಮೂದಿಸಿದ ಪಟ್ಟಿ ನೋಡಿ.
- ನಂತರ ಕತ್ತರಿಸಿ, ನೆನೆಸಿದ ಹಾಗಲಕಾಯಿ ಹಾಕಿ.
- ಒಂದೆರಡು ಚಮಚ ನೀರು ಸಿಂಪಡಿಸಿ, ಕಲಸಿಕೊಳ್ಳಿ. ಹೆಚ್ಚು ನೀರು ಬೇಡ.
- ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿಯಾಗಲು ಇಡಿ. ಎಣ್ಣೆ ಬಿಸಿಯಾದ ಕೂಡಲೇ ಸ್ವಲ್ಪ ಸ್ವಲ್ಪವಾಗಿ ಬಿಸಿ ಎಣ್ಣೆಗೆ ಹಾಕಿ. ಒಂದರ ಮೇಲೊಂದು ಬೀಳದಂತೆ ಜಾಗ್ರತೆ ವಹಿಸಿ.
- ಸ್ವರ ಅಥವಾ ಗುಳ್ಳೆಗಳು ನಿಲ್ಲುವವರೆಗೆ ಕಾಯಿಸಿ. ಚಹಾ ಅಥವಾ ಊಟದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ