Nellikai pudi and thambli recipe in kannada | ನೆಲ್ಲಿಕಾಯಿ ಪುಡಿ ಮತ್ತು ತಂಬ್ಳಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- ನೆಲ್ಲಿಕಾಯಿ ನಿಮ್ಮ ಅಗತ್ಯಕ್ಕೆ ತಕ್ಕಂತೆ
- 1/4 ಕಪ್ ತೆಂಗಿನತುರಿ
- 1/2 ಕಪ್ ಮೊಸರು
- ಅಗತ್ಯವಿದ್ದಷ್ಟು ನೀರು
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 2 ಟೀಸ್ಪೂನ್ ಅಡುಗೆ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
ನೆಲ್ಲಿಕಾಯಿ ಪುಡಿ ಮತ್ತು ತಂಬ್ಳಿ ಮಾಡುವ ವಿಧಾನ:
- ನೆಲ್ಲಿಕಾಯಿಯನ್ನು ತೊಳೆದು, ಎರಡು ದಿನ ಬಿಸಿಲಿನಲ್ಲಿ ಒಣಗಿಸಿ.
- ಅದು ಮೆತ್ತಗಾದ ಮೇಲೆ, ಕತ್ತರಿಸಿ, ಬೀಜ ತೆಗೆಯಿರಿ.
- ಪುನಃ ಒಂದು ದಿನ ಒಣಗಿಸಿ, ಕಂದು ಬಣ್ಣಕ್ಕೆ ತಿರುಗಿದ ಮೇಲೆ, ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿ.
- ಪುನಃ ಗರಿಗರಿಯಾಗುವವರೆಗೆ ಒಣಗಿಸಿ.
- ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ.
- ಗಾಳಿಯಾಡದ ಡಬ್ಬಕ್ಕೆ ಹಾಕಿ ಎತ್ತಿಡಿ.
- ತಂಬ್ಳಿ ಮಾಡಲು, ತೆಂಗಿನ ತುರಿ ಮತ್ತು ೧ - ೨ ಚಮಚ ನೆಲ್ಲಿಕಾಯಿ ಪುಡಿಯನ್ನು ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಹಾಕಿ ನುಣ್ಣನೆ ಅರೆಯಿರಿ.
- ಉಪ್ಪು ಮತ್ತು ಮಜ್ಜಿಗೆ (ಅಥವಾ ಮೊಸರು) ಸೇರಿಸಿ.
- ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ