Mavina hannina sasive recipe in kannada | ಮಾವಿನ ಹಣ್ಣಿನ ಸಾಸಿವೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 4 - 5 ಮಾವಿನಹಣ್ಣು (ಗಾತ್ರ ಅವಲಂಬಿಸಿದೆ)
- 1/4 - 1/2 ಕಪ್ ಬೆಲ್ಲ (ಮಾವಿನ ಹುಳಿ ಅವಲಂಬಿಸಿ)
- ಉಪ್ಪು ರುಚಿಗೆ ತಕ್ಕಷ್ಟು.
ಅರೆಯಲು ಬೇಕಾಗುವ ಪದಾರ್ಥಗಳು:
- 1/4 ಟೀಸ್ಪೂನ್ ಸಾಸಿವೆ
- 2 - 4 ಒಣಮೆಣಸಿನಕಾಯಿ
- 1/2 ಕಪ್ ತೆಂಗಿನತುರಿ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 2 ಟೀಸ್ಪೂನ್ ಅಡುಗೆ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
ಮಾವಿನ ಹಣ್ಣಿನ ಸಾಸಿವೆ ಮಾಡುವ ವಿಧಾನ:
- ಮಾವಿನಹಣ್ಣು ತೊಳೆದು, ಸಿಪ್ಪೆ ಸುಲಿಯಿರಿ.
- ಆಮೇಲೆ ಕಿವುಚಿ, ರಸ ತೆಗೆದಿಟ್ಟುಕೊಳ್ಳಿ. ಗೊರಟು ಬೇಕಾದರೆ ಹಾಕಬಹುದು.
- ನಂತ್ರ ಒಂದು ಪಾತ್ರೆಯಲ್ಲಿ ಬೆಲ್ಲ ಪುಡಿ ಮಾಡಿ, ಅದಕ್ಕೆ ತೆಗೆದಿಟ್ಟ ಮಾವಿನ ರಸ ಹಾಕಿ.
- ಸಾಸಿವೆ, ಒಣಮೆಣಸಿನಕಾಯಿ ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ.
- ಅರೆದ ಮಿಶ್ರಣವನ್ನು ಮಾವಿನರಸ ಮತ್ತು ಬೆಲ್ಲ ಇರುವ ಪಾತ್ರೆಗೆ ಹಾಕಿ.
- ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಚೆನ್ನಾಗಿ ಕಲಸಿ.
- ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ