ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)
- 1/4 kg ಹಸಿಮೆಣಸಿನಕಾಯಿ
- 1/4 ಟೀಸ್ಪೂನ್ ಇಂಗು
- 2.5 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
- 1/2 ಕಪ್ ಹುಳಿ ಮಜ್ಜಿಗೆ
ಸಂಡಿಗೆ ಮೆಣಸು ಮಾಡುವ ವಿಧಾನ:
- ಹಸಿಮೆಣಸಿನಕಾಯಿಯನ್ನು ತೊಳೆದು, ತೊಟ್ಟನ್ನು ತೆಗೆದು, ಸಣ್ಣದಾಗಿ ಸೀಳಿ.
- ಒಂದು ಪಾತ್ರೆಯಲ್ಲಿ ನೀರು ಮತ್ತು ಎರಡು ಚಮಚದಷ್ಟು ಉಪ್ಪು ಹಾಕಿ ಉಪ್ಪು ಹಾಕಿ ಕುದಿಸಿ.
- ಕುದಿಯುವ ನೀರಿಗೆ ಸೀಳಿದ ಹಸಿಮೆಣಸಿನಕಾಯಿ ಹಾಕಿ, ಒಮ್ಮೆ ಮಗುಚಿ, ಸ್ಟವ್ ಆಫ್ ಮಾಡಿ.
- ಸುಮಾರು ಐದು ನಿಮಿಷದ ನಂತರ, ನೀರನ್ನು ಬಸಿದು ತೆಗೆಯಿರಿ.
- ಬಿಸಿಲಿನಲ್ಲಿ ಸುಮಾರು ಮೂರು ದಿನಗಳ ಕಾಲ ಚೆನ್ನಾಗಿ ಒಣಗಿಸಿ.
- ನಂತರ ಒಂದು ಪಾತ್ರೆಯಲ್ಲಿ, ಹುಳಿ ಮಜ್ಜಿಗೆ, ಅರ್ಧ ಚಮಚ ಉಪ್ಪು ಮತ್ತು ಇಂಗನ್ನು ಹಾಕಿ ಕಲಸಿ.
- ಒಣಗಿಸಿದ ಹಸಿಮೆಣಸಿನಕಾಯಿ ಹಾಕಿ, ರಾತ್ರೆಯಿಡೀ ನೆನೆಯಲು ಬಿಡಿ. ಒಂದೆರಡು ಬಾರಿ ಮಗುಚಿ.
- ಮರುದಿವಸ ಪುನಃ ಮಗುಚಿ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು ಅಥವಾ ಒಗ್ಗರಣೆಗೂ ಹಾಕಬಹುದು.
Super,easy method..
ಪ್ರತ್ಯುತ್ತರಅಳಿಸಿSuper,easy method..
ಪ್ರತ್ಯುತ್ತರಅಳಿಸಿ