Ranjaka recipe in Kannada | ರಂಜಕ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 kg ಕೆಂಪು ಹಣ್ಣುಮೆಣಸಿನಕಾಯಿ
- 1/4 ಕಪ್ ಉಪ್ಪು ಅಥವಾ ನಿಮ್ಮ ರುಚಿಗೆ ತಕ್ಕಂತೆ
- 4 ನಿಂಬೆಹಣ್ಣು
- 2 ಟೇಬಲ್ ಚಮಚ ಎಣ್ಣೆ
- 1 ಚಮಚ ಸಾಸಿವೆ
- 2 ಚಮಚ ಮೆಂತೆ
- 1 ಚಮಚ ಇಂಗು
ರಂಜಕ ಮಾಡುವ ವಿಧಾನ:
- ಕೆಂಪು ಹಣ್ಣುಮೆಣಸಿನಕಾಯಿಯನ್ನು ತೊಳೆದು, ತೊಟ್ಟು ತೆಗೆದು ನೀರಾರಿಸಿ.
- ಒಂದು ಪ್ಯಾನ್ ಗೆ ಎಣ್ಣೆ ಹಾಕಿ ,ಅದರಲ್ಲಿ ಸಾಸಿವೆ ,ಇಂಗು ,ಮೆಂತೆಕಾಳು ಹಾಕಿ ಒಗ್ಗರಣೆ ಮಾಡಿ ತಣ್ಣಗಾಗಲು ಬಿಡಿ.
- ನಿಂಬೆಹಣ್ಣು ಕತ್ತರಿಸಿ ರಸ ತೆಗೆದಿಟ್ಟುಕೊಳ್ಳಿ.
- ಮೆಣಸಿನಕಾಯಿಯನ್ನು 3 - 4 ತುಂಡು ಮಾಡಿಟ್ಟುಕೊಳ್ಳಿ.
- ಮಿಕ್ಸಿ ಅಥವಾ ಗ್ರೈಂಡರ್ ಗೆ ಕತ್ತರಿಸಿದ ಹಣ್ಣುಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಅರೆಯಿರಿ.
- ಅರೆಯುವಾಗ ಬೇಕಾದಲ್ಲಿ ನಿಂಬೆರಸ ಸೇರಿಸಿ. ಆದರೆ ನೀರು ಸೇರಿಸಬೇಡಿ.
- ಕೊನೆಯಲ್ಲಿ ಒಗ್ಗರಣೆ ಸೇರಿಸಿ ಪುನಃ ಅರೆಯಿರಿ.
- ಒಂದು ಗಾಜಿನ ಬಾಟಲಿ ಗೆ ಹಾಕಿ ಫ್ರಿಡ್ಜ್ ನಲ್ಲಿ ಇಡಿ.
- 4-5 ದಿನ ಬಿಟ್ಟು ಚಪಾತಿ, ರೊಟ್ಟಿ ಅಥವಾ ಅನ್ನದೊಂದಿಗೆ ಸವಿಯಿರಿ.
ರೆಸಿಪಿ ತುಂಬಾ ಸರಳವಾಗಿದೆ ..ರಂಜಕ ನಮಗೆಲ್ಲ ತುಂಬಾ ಇಷ್ಟ ...ಮಾಡ ಬೇಕು
ಪ್ರತ್ಯುತ್ತರಅಳಿಸಿ