Hurigadale masale vade (ambode) recipe in Kannada | ಹುರಿಗಡಲೆ ಮಸಾಲೆ ವಡೆ (ಆಂಬೊಡೆ) ಮಾಡುವ ವಿಧಾನ
Hurigadale masale vade video
ಹುರಿಗಡಲೆ ಮಸಾಲೆವಡೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್)
- 1 ಕಪ್ ಹುರಿಗಡಲೆ
- 1 ಒಣಮೆಣಸಿನಕಾಯಿ
- 1/2 ಟೀಸ್ಪೂನ್ ಕೊತ್ತಂಬರಿ ಬೀಜ
- 1 - 2 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
- 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ
- 5 - 6 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಸಣ್ಣಗೆ ಹೆಚ್ಚಿದ ಈರುಳ್ಳಿ
- 2 ಟೇಬಲ್ ಚಮಚ ಸಬ್ಬಸಿಗೆ ಸೊಪ್ಪು
- ನಿಮ್ಮ ರುಚಿ ಪ್ರಕಾರ ಉಪ್ಪು
ಹುರಿಗಡಲೆ ಮಸಾಲೆ ವಡೆ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಹೆಚ್ಚಿದ ಹಸಿರುಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಶುಂಠಿ ತೆಗೆದುಕೊಳ್ಳಿ.
- ನಂತರ ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ.
- ಆಮೇಲೆ ಕತ್ತರಿಸಿದ ಈರುಳ್ಳಿ ಸೇರಿಸಿ.
- ಕತ್ತರಿಸಿದ ಸಬ್ಬಸ್ಸಿಗೆ ಸೊಪ್ಪನ್ನು ಸೇರಿಸಿ.
- ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ ಕಲಸಿ.
- ನಂತರ ಒಂದು ಮಿಕ್ಸಿಜಾರಿನಲ್ಲಿ ಹುರಿಗಡಲೆ, ಒಣಮೆಣಸಿನಕಾಯಿ ಮತ್ತು ಕೊತ್ತಂಬರಿ ಬೀಜ ತೆಗೆದುಕೊಂಡು ಪುಡಿಮಾಡಿ. ಪುಡಿ ಸ್ವಲ್ಪ ತರಿತರಿಯಾಗಿರಲಿ.
- ಅದನ್ನು ಕಲಸಿಟ್ಟ ಬೇರೆ ಪದಾರ್ಥಗಳೊಂದಿಗೆ ಸೇರಿಸಿ ಕಲಸಿ.
- ನಿಂಬೆಹಣ್ಣಿನ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಅಂಗೈನಿಂದ ಒತ್ತಿ ವಡೆಗಳನ್ನು ಮಾಡಿ, ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕಾಯಿಸಿ.
- ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಕಾಯಿಸಿ. ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ