Kayi haalina pulao recipe in Kannada | ಕಾಯಿ ಹಾಲಿನ ಅನ್ನ ಮಾಡುವ ವಿಧಾನ
ಕಾಯಿ ಹಾಲಿನ ಪುಲಾವ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಬಾಸಮತಿ ಅಕ್ಕಿ
- 1 ಕಪ್ ತೆಂಗಿನಕಾಯಿ ಹಾಲು
- 1 ಕಪ್ ನೀರು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 2 ಟೇಬಲ್ ಚಮಚ ತುಪ್ಪ
- 1 ಸಣ್ಣ ಪುಲಾವ್ ಎಲೆ
- 5 - 6 ಲವಂಗ
- 1/2 ಬೆರಳುದ್ದ ಚಕ್ಕೆ
- 1 ಟೀಸ್ಪೂನ್ ಜೀರಿಗೆ
- 2 ಏಲಕ್ಕಿ
- 1 ಚಕ್ರ ಮೊಗ್ಗು
- 1/2 ಟೀಸ್ಪೂನ್ ಸೋಂಪು
- 1 ಟೀಸ್ಪೂನ್ ಜಜ್ಜಿದ ಕರಿಮೆಣಸು
- 2 ಟೇಬಲ್ ಚಮಚ ಗೋಡಂಬಿ
- 1 ಈರುಳ್ಳಿ ಉದ್ದವಾಗಿ ಸೀಳಿದ್ದು
- 1 - 2 ಹಸಿಮೆಣಸಿನಕಾಯಿ
- 1 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅಥವಾ ಸಣ್ಣದಾಗಿ ಕತ್ತರಿಸಿದ್ದು
- 7 - 8 ಬೀನ್ಸ್
- 1 ಕ್ಯಾರಟ್
- 1 ಆಲೂಗಡ್ಡೆ
- 1/2 ದೊಣ್ಣೆ ಮೆಣಸಿನಕಾಯಿ
ಕಾಯಿ ಹಾಲಿನ ಅನ್ನ ಮಾಡುವ ವಿಧಾನ:
- ಅಕ್ಕಿ ತೊಳೆದು, ನೀರು ಬಗ್ಗಿಸಿ ಪಕ್ಕಕ್ಕಿಡಿ.
- ಕುಕ್ಕರ್ ನಲ್ಲಿ ತುಪ್ಪ ತೆಗೆದುಕೊಂಡು ಬಿಸಿ ಮಾಡಿ.
- ಅದಕ್ಕೆ ಪುಲಾವ್ ಎಲೆ, ಚಕ್ಕೆ, ಲವಂಗ, ಚಕ್ರ ಮೊಗ್ಗು, ಜೀರಿಗೆ, ಏಲಕ್ಕಿ, ಸೋಂಪು ಮತ್ತು ಕರಿಮೆಣಸು ಸೇರಿಸಿ.
- ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
- ನಂತರ ಕತ್ತರಿಸಿದ ಈರುಳ್ಳಿ. ಗೋಡಂಬಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ.
- ಈರುಳ್ಳಿ ಬಾಡುವವರೆಗೆ ಹುರಿಯಿರಿ.
- ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅಥವಾ ಕತ್ತರಿಸಿದ ಶುಂಠಿ ಬೆಳ್ಳುಳ್ಳಿ ಹಾಕಿ ಹುರಿಯಿರಿ.
- ಕತ್ತರಿಸಿದ ತರಕಾರಿ ಹಾಕಿ ಮಧ್ಯಮ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ.
- ನಂತರ ತೊಳೆದಿಟ್ಟ ಅಕ್ಕಿ ಹಾಕಿ.
- ತೆಂಗಿನಕಾಯಿ ಹಾಲು ಸೇರಿಸಿ.
- ನೀರು ಹಾಕಿ.
- ಉಪ್ಪು ಸೇರಿಸಿ ಮಗುಚಿ.
- ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
- ಒತ್ತಡ ಇಳಿದ ಕೂಡಲೇ ಒಂದು ಫೋರ್ಕ್ ತೆಗೆದುಕೊಂಡು ಮೆಲ್ಲಗೆ ಕೆದಕಿ.
- ದಾಲ್, ಮೊಸರುಬಜ್ಜಿ, ಟೊಮೆಟೊ ಸಾಸ್ ಅಥವಾ ಉಪ್ಪಿನಕಾಯಿ ಜೊತೆ ಬಡಿಸಿ.