Eerulli bonda recipe in kannada | ಈರುಳ್ಳಿ ಬೋಂಡಾ ಮಾಡುವ ವಿಧಾನ
ಈರುಳ್ಳಿ ಬೋಂಡಾ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 4 ಮಧ್ಯಮ ಗಾತ್ರದ ಈರುಳ್ಳಿ
- 1 ಕಪ್ ಕಡ್ಲೆ ಹಿಟ್ಟು
- 1/4 ಕಪ್ ಅಕ್ಕಿ ಹಿಟ್ಟು
- 1 - 2 ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ
- 2 ಟೇಬಲ್ ಚಮಚ ಹೆಚ್ಚಿದ ಕರಿಬೇವು
- 4 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1 ಟೀಸ್ಪೂನ್ ಶುಂಠಿ
- 1/2 ಟೀಸ್ಪೂನ್ ಓಮ ಅಥವಾ ಅಜ್ವೈನ್
- 1/2 ಟೀಸ್ಪೂನ್ ಜೀರಿಗೆ
- 1/2 ಟೀಸ್ಪೂನ್ ಬಡೆಸೊಂಪು
- 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/4 ಟೀಸ್ಪೂನ್ ಅರಿಶಿನ
- ಚಿಟಿಕೆ ಇಂಗು
- ಚಿಟಿಕೆ ಸೋಡಾ
- ಉಪ್ಪು ರುಚಿಗೆ ತಕ್ಕಷ್ಟು
- 2 ಟೇಬಲ್ ಚಮಚ ಬಿಸಿ ಎಣ್ಣೆ
- ಎಣ್ಣೆ ಖಾಯಿಸಲು ಅಥವಾ ಕರಿಯಲು
ಈರುಳ್ಳಿ ಬೋಂಡಾ ಮಾಡುವ ವಿಧಾನ:
- ಈರುಳ್ಳಿ ಉದ್ದನಾಗಿ ತೆಳುವಾಗಿ ಕತ್ತರಿಸಿಕೊಳ್ಳಿ.
- ಅದಕ್ಕೆ ಕತ್ತರಿಸಿದ ಹಸಿರು ಮೆಣಸಿನಕಾಯಿ , ಶುಂಠಿ, ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 5 ನಿಮಿಷ ಹಾಗೆ ಬಿಡಿ. ಹೀಗೆ ಮಾಡುವುದರಿಂದ ಈರುಳ್ಳಿ ನೀರು ಬಿಡುತ್ತದೆ.
- ಇನ್ನೊಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಓಮ, ಜೀರಿಗೆ, ಸೋಂಪು, ಮೆಣಸಿನ ಪುಡಿ, ಸೋಡಾ, ಅರಿಶಿನ ಮತ್ತು ಇಂಗು ಸೇರಿಸಿ ಚೆನ್ನಾಗಿ ಕಲಸಿ.
- 2 ಟೇಬಲ್ ಚಮಚ ಬಿಸಿ ಎಣ್ಣೆ ಸೇರಿಸಿ ಮತ್ತೆ ಚೆನ್ನಾಗಿ ಕಲಸಿ.
- ಈ ಹಿಟ್ಟನ್ನು ಈರುಳ್ಳಿ ಇರುವ ಪಾತ್ರೆಗೆ ಹಾಕಿ.
- ಬೇಕಾದಲ್ಲಿ ಸ್ವಲ್ಪ ನೀರು ಸಿಂಪಡಿಸಿ ಚೆನ್ನಾಗಿ ಕಲಸಿ.
- ಕೈಗೆ ಅಂಟುವಂತ ಮೆತ್ತಗಿನ ಹಿಟ್ಟು ತಯಾರಿಸಿಕೊಳ್ಳಿ.
- ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿ.
- ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿಯಾಗಲು ಇಡಿ. ಎಣ್ಣೆ ಬಿಸಿಯಾದ ಕೂಡಲೇ ಉಂಡೆಗಳನ್ನ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ.
- ಗುಳ್ಳೆಗಳು ಕಡಿಮೆ ಆಗಿ, ಹೊಂಬಣ್ಣಕ್ಕೆ ಬಂದ ಕೂಡಲೇ ತೆಗೆಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ