Hesaru bele dose recipe in kannada | ಹೆಸರು ಬೇಳೆ ದೋಸೆ ಮಾಡುವ ವಿಧಾನ
ಹೆಸರು ಬೇಳೆ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಹೆಸರು ಬೇಳೆ
- 1/4 ಕಪ್ ಅಕ್ಕಿ ಹಿಟ್ಟು
- 1/4 ಕಪ್ ತೆಂಗಿನ ತುರಿ
- 2 - 3 ಒಣಮೆಣಸಿನಕಾಯಿ
- ಸಣ್ಣ ತುಂಡು ಶುಂಠಿ
- 1 ಚಮಚ ಜೀರಿಗೆ
- ದೊಡ್ಡ ಚಿಟಿಕೆ ಇಂಗು
- ಉಪ್ಪು ರುಚಿಗೆ ತಕ್ಕಷ್ಟು.
ಹೆಸರು ಬೇಳೆ ದೋಸೆ ಮಾಡುವ ವಿಧಾನ:
- ಹೆಸರು ಬೇಳೆಯನ್ನು ತೊಳೆದು ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಯಲು ಬಿಡಿ.
- 15 ನಿಮಿಷದ ನಂತರ ನೀರು ಬಗ್ಗಿಸಿ ಅಕ್ಕಿ ಹಿಟ್ಟು, ತೆಂಗಿನ ತುರಿ, ಒಣಮೆಣಸಿನಕಾಯಿ, ಶುಂಠಿ, ಮತ್ತು ಜೀರಿಗೆ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಹಾಕಿ ನಯವಾಗಿ ಅರೆಯಿರಿ.
- ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಬಗ್ಗಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇಂಗು ಸೇರಿಸಿ.
- ಚೆನ್ನಾಗಿ ಕಲಸಿ, ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ.
- ಕೂಡಲೇ ದೋಸೆ ಮಾಡಿ.
- ದೋಸೆ ಮಾಡಲು ಹೆಂಚನ್ನು ಬಿಸಿಮಾಡಿ ಕೊಳ್ಳಿ.
- ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ, ಮುಚ್ಚಳ ಮುಚ್ಚಿ ಬೇಯಿಸಿ.
- ಮೇಲಿನಿಂದ ತುಪ್ಪ ಅಥವಾ ಎಣ್ಣೆ ಹಾಕಿ.
- ಬಿಸಿ ಬಿಸಿ ದೋಸೆಯನ್ನು ಚಟ್ನಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ