ಮರಿಗೆ ಗೊಜ್ಜು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 3 - 4 ಒಣ ಮೆಣಸಿನಕಾಯಿ
- 3 ಟೀಸ್ಪೂನ್ ಉದ್ದಿನಬೇಳೆ
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 1 ಟೀಸ್ಪೂನ್ ಎಳ್ಳು
- 1/2 ಟೀಸ್ಪೂನ್ ಸಾಸಿವೆ
- 4 - 5 ಎಸಳು ಬೆಳ್ಳುಳ್ಳಿ ಅಥವಾ ದೊಡ್ಡ ಚಿಟಿಕೆ ಇಂಗು
- 1/2 ಕಪ್ ಮೊಸರು
- 1 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- ಸ್ವಲ್ಪ ಕರಿಬೇವು
- 1 ಟೀಸ್ಪೂನ್ ಅಡುಗೆ ಎಣ್ಣೆ
ಮರಿಗೆ ಗೊಜ್ಜು ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ ಮೊದಲಿಗೆ ಒಣ ಮೆಣಸಿನಕಾಯಿಯನ್ನು ಹುರಿಯಿರಿ.
- ನಂತರ ಉದ್ದಿನಬೇಳೆ ಮತ್ತು ಕೊತ್ತಂಬರಿ ಬೀಜ ಸೇರಿಸಿ ಉದ್ದಿನಬೇಳೆ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಆಮೇಲೆ ಎಳ್ಳು ಮತ್ತು ಸಾಸಿವೆ ಸೇರಿಸಿ, ಸಾಸಿವೆ ಸಿಡಿಯುವವರೆಗೆ ಹುರಿಯಿರಿ.
- ಕೊನೆಯಲ್ಲಿ ಇಂಗು ಅಥವಾ ಬೆಳ್ಳುಳ್ಳಿಯನ್ನು ಸೇರಿಸಿ ಹುರಿಯಿರಿ (ನಾನು ಇಂಗು ಹಾಕಿದ್ದೆ).
- ಉಪ್ಪು ಸೇರಿಸಿ, ಒಂದು ಸುತ್ತು ಮಗುಚಿ ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ಮಿಕ್ಸಿ ಜಾರ್ನಲ್ಲಿ ಹುರಿದ ಪದಾರ್ಥಗಳನ್ನು ತೆಗೆದುಕೊಂಡು, ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
- ಕೊನೆಯಲ್ಲಿ ಮೊಸರು ಸೇರಿಸಿ ಒಂದೆರಡು ಸುತ್ತು ಅರೆಯಿರಿ.
- ಒಂದು ಪಾತ್ರೆಗೆ ಬಗ್ಗಿಸಿ. ಈ ಗೊಜ್ಜಿಗೆ ಒಗ್ಗರಣೆ ಹಾಕಬೇಕಾಗಿಲ್ಲ. ಬೇಕಾದಲ್ಲಿ ಸಾಸಿವೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ