ಗುರುವಾರ, ಮೇ 26, 2022

Southekai dose recipe in Kannada | ಸೌತೆಕಾಯಿ ದೋಸೆ ಮಾಡುವ ವಿಧಾನ

 

Southekai dose recipe in Kannada

Southekai dose recipe in Kannada | ಸೌತೆಕಾಯಿ ದೋಸೆ ಮಾಡುವ ವಿಧಾನ 

ಸೌತೆಕಾಯಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ರವೆ
  2.  2 ಮಧ್ಯಮ ಗಾತ್ರದ ಸೌತೆಕಾಯಿ
  3. 1/4 ಕಪ್ ತೆಂಗಿನತುರಿ
  4. 2 ಒಣಮೆಣಸಿನಕಾಯಿ
  5. 1 ಟೀಸ್ಪೂನ್ ಕೊತ್ತಂಬರಿ ಬೀಜ
  6. 1/2 ಟೀಸ್ಪೂನ್ ಜೀರಿಗೆ
  7. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  8. ಉಪ್ಪು ರುಚಿಗೆ ತಕ್ಕಷ್ಟು.

ಸೌತೆಕಾಯಿ ದೋಸೆ ಮಾಡುವ ವಿಧಾನ:

  1. ರವೆಯನ್ನು ಒಂದು ಕಪ್ ನೀರಿನಲ್ಲಿ ಹತ್ತು ನಿಮಿಷ ನೆನೆಯಲು ಬಿಡಿ.
  2. ಸೌತೆಕಾಯಿಯನ್ನು ಕತ್ತರಿಸಿಟ್ಟುಕೊಳ್ಳಿ. ಸಿಪ್ಪೆ ತೆಗೆಯಬೇಕಾಗಿಲ್ಲ. 
  3. ನೆನೆಸಿದ ರವೆಯನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  4. ಕತ್ತರಿಸಿದ ಸೌತೆಕಾಯಿ ಸೇರಿಸಿ. 
  5. ತೆಂಗಿನತುರಿ ಮತ್ತು ಒಣಮೆಣಸಿನಕಾಯಿ ಸೇರಿಸಿ. 
  6. ಕೊತ್ತಂಬರಿ ಮತ್ತು ಜೀರಿಗೆ ಸೇರಿಸಿ. 
  7. ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ. ನೀರು ಸೇರಿಸುವ ಅಗತ್ಯ ಇಲ್ಲ. 
  8. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  9. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  10. ದೋಸೆ ಹೆಂಚನ್ನು ಬಿಸಿಮಾಡಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ, 
  11. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  12. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ.
  13. ಸಣ್ಣ ಉರಿಯಲ್ಲಿ ಗರಿಗರಿ ಆಗುವವರೆಗೆ  ಕಾಯಿಸಿ. ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಮೇ 18, 2022

Hesaru kaalu saaru recipe in Kannada | ಹೆಸರು ಕಾಳು ಸಾರು ಮಾಡುವ ವಿಧಾನ

 

Hesaru kaalu saaru recipe in Kannada

Hesaru kaalu saaru recipe in Kannada |ಹೆಸರು ಕಾಳು ಸಾರು ಮಾಡುವ ವಿಧಾನ 

ಹೆಸರು ಕಾಳು ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/2 ಕಪ್ ಹೆಸರು ಕಾಳು
  2. 1 ಟೊಮೇಟೊ
  3. 1 ಟೇಬಲ್ ಚಮಚ ಸಾರಿನ ಪುಡಿ 
  4. ದೊಡ್ಡ ಚಿಟಿಕೆ ಅರಿಶಿನ
  5. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  6. 1 ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು
  7. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  8. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಒಣಮೆಣಸಿನಕಾಯಿ
  3. ಒಂದು ಚಿಟಿಕೆ ಇಂಗು ಅಥವಾ 4 ಎಸಳು ಬೆಳ್ಳುಳ್ಳಿ
  4. 5 - 6 ಕರಿಬೇವಿನ ಎಲೆ
  5. 2 ಟೀಸ್ಪೂನ್ ಅಡುಗೆ ಎಣ್ಣೆ

ಹೆಸರು ಕಾಳು ಸಾರು ಮಾಡುವ ವಿಧಾನ:

  1. ಹೆಸರು ಕಾಳನ್ನು ತೊಳೆದು, ಅಗತ್ಯವಿದ್ದಷ್ಟು ನೀರು ಸೇರಿಸಿ, ಮೆತ್ತಗಾಗುವವರೆಗೆ ಬೇಯಿಸಿ. ನೆನೆಸಿ ಅಥವಾ ಮೊಳಕೆ ಬರಿಸಿ ಸಹ ಉಪಯೋಗಿಸಬಹುದು. 
  2. ಬೇಯಿಸಿದ ನಂತರ, ಬಸಿದು, ನೀರು ಮತ್ತು ಕಾಳನ್ನು ಬೇರ್ಪಡಿಸಿ. 
  3. ಬಸಿದ ನೀರಿಗೆ, ಕತ್ತರಿಸಿದ ಟೊಮೇಟೊ ಸೇರಿಸಿ. 
  4. ರುಚಿಗೆ ತಕ್ಕಂತೆ ಉಪ್ಪು, ಬೆಲ್ಲ ಮತ್ತು ಹುಣಿಸೇಹಣ್ಣು ಸೇರಿಸಿ. 
  5. ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  6.  ಆ ಸಮಯದಲ್ಲಿ ಎರಡರಿಂದ ಮೂರು ಸೌಟು ಬೇಯಿಸಿದ ಹೆಸರುಕಾಳನ್ನು ಅರೆದು ಬೆಂದ ಟೊಮ್ಯಾಟೊಗೆ ಸೇರಿಸಿ. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. 
  8. ಸಾರಿನ ಪುಡಿ ಮತ್ತು ಅರಿಶಿನ ಸೇರಿಸಿ. 
  9. ಕೊತ್ತಂಬರಿ ಸೊಪ್ಪು ಸೇರಿಸಿ. 
  10. ಚೆನ್ನಾಗಿ ಕುದಿಸಿ ಸ್ಟವ್ ಆಫ್ ಮಾಡಿ. 
  11. 2 ಚಮಚಎಣ್ಣೆ, 1/2 ಚಮಚ ಸಾಸಿವೆ, ಇಂಗು (ಅಥವಾ ಜಜ್ಜಿದ ಬೆಳ್ಳುಳ್ಳಿ) ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ.  ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಮೇ 11, 2022

Thuppa dose recipe in Kannada | ತುಪ್ಪ ದೋಸೆ ಮಾಡುವ ವಿಧಾನ

 

Thuppa dose recipe in Kannada

Thuppa dose recipe in Kannada | ಇಡ್ಲಿ ಅಕ್ಕಿಯಿಂದ ತುಪ್ಪ ದೋಸೆ ಮಾಡುವ ವಿಧಾನ

ತುಪ್ಪ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕುಸುಬಲಕ್ಕಿ ಅಥವಾ ಇಡ್ಲಿ ಅಕ್ಕಿ
  2. 1/4 ಕಪ್ ಉದ್ದಿನ ಬೇಳೆ
  3. 1/2 ಟೀಸ್ಪೂನ್ ಮೆಂತೆ
  4. 1/2 ಕಪ್ ಅವಲಕ್ಕಿ 
  5. ಉಪ್ಪು ನಿಮ್ಮ ರುಚಿ ಪ್ರಕಾರ
  6. ತುಪ್ಪ ದೋಸೆ ಮಾಡಲು


ತುಪ್ಪ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಸಿಡಿ.
  2. ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು ಬೇರೆ ಪಾತ್ರೆಯಲ್ಲಿ 4 - 5 ಗಂಟೆಗಳ ಕಾಲ ನೆನೆಸಿಡಿ. 
  3. ಅರೆಯುವ ಮುನ್ನ ಅವಲಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೆನೆಸಿಡಿ. 
  4. ನೆನೆಸಿದ ನಂತರ ಮೊದಲಿಗೆ ಉದ್ದಿನಬೇಳೆ ಮತ್ತು ಮೆಂತೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆದು ಒಂದು ಪಾತ್ರೆಗೆ ಬಗ್ಗಿಸಿ. ಅರೆಯಲು ನೆನೆಸಿದ ನೀರು ಉಪಯೋಗಿಸಬಹುದು. 
  5. ಅವಲಕ್ಕಿಯನ್ನು ಅರೆದು ಅದೇ ಪಾತ್ರೆಗೆ ಹಾಕಿ. 
  6. ನೆನೆಸಿದ ಅಕ್ಕಿಯ ನೀರು ಬಸಿದು, ನುಣ್ಣಗೆ ಅರೆದು, ಅದೇ ಪಾತ್ರೆಗೆ ಬಗ್ಗಿಸಿ. ಸ್ವಲ್ಪ ತರಿ ತರಿ ಇದ್ದರೆ ಪರವಾಗಿಲ್ಲ.
  7. ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ 7 - 8 ಗಂಟೆಗಳ ಕಾಲ ಹುದುಗಲು ಬಿಡಿ. ಚಳಿಗಾಲ ಸಮಯ ಆದಲ್ಲಿ ಸುಮಾರು 12 ಗಂಟೆ ಬೇಕಾಗಬಹುದು. 
  8. ಹುದುಗುವಿಕೆಯ ನಂತರ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  9. ದೋಸೆ ಹೆಂಚನ್ನು ಬಿಸಿ ಮಾಡಿ. ಸ್ವಲ್ಪ ಹಿಟ್ಟು ತೆಗೆದುಕೊಂಡು ದೋಸೆ ಮಾಡಿ. 
  10. ಮುಚ್ಚಳ ಮುಚ್ಚಿ ಕಾಯಿಸಿ.
  11. ಮೇಲಿನಿಂದ ತುಪ್ಪ ಹಾಕಿ ಕಾಯಿಸಿ.  
  12. ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ. 

ಸೋಮವಾರ, ಮೇ 2, 2022

Sabbakki rotti recipe Kannada | ಸಬ್ಬಕ್ಕಿ ರೊಟ್ಟಿ ಮಾಡುವ ವಿಧಾನ

 

Sabbakki rotti recipe Kannada |  ಸಬ್ಬಕ್ಕಿ ರೊಟ್ಟಿ ಮಾಡುವ ವಿಧಾನ

ಸಬ್ಬಕ್ಕಿ ರೊಟ್ಟಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಸಬ್ಬಕ್ಕಿ
  2. 1/4 ಕಪ್ ಅಕ್ಕಿಹಿಟ್ಟು
  3. 1 ದೊಡ್ಡ ಆಲೂಗಡ್ಡೆ, ಬೇಯಿಸಿ ಸಿಪ್ಪೆ ತೆಗೆದಿದ್ದು
  4. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  5. 1 ಟೇಬಲ್ ಸ್ಪೂನ್ ಹೆಚ್ಚಿದ ಕರಿಬೇವಿನ ಎಲೆ
  6. 2 ಹಸಿಮೆಣಸಿನಕಾಯಿ
  7. 1/2 ಟೀಸ್ಪೂನ್ ಜೀರಿಗೆ
  8. 2 ಟೇಬಲ್ ಚಮಚ ಹುರಿದು ಸಿಪ್ಪೆ ತೆಗೆದ ಶೇಂಗಾ ಅಥವಾ ಕಡ್ಲೆಕಾಯಿ
  9. 2 - 3  ಟೇಬಲ್ ಚಮಚ ನೀರು (ಬೇಕಾದಲ್ಲಿ)
  10. ಉಪ್ಪು ರುಚಿಗೆ ತಕ್ಕಷ್ಟು
  11. ರೊಟ್ಟಿ ಮಾಡಲು ಎಣ್ಣೆ
  12. 15x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ

ಮಸಾಲೆ ಅವಲಕ್ಕಿ ರೊಟ್ಟಿ ಮಾಡುವ ವಿಧಾನ:

  1. ಸಬ್ಬಕ್ಕಿಯನ್ನು ಸುಮಾರು ಎರಡು ಘಂಟೆಗಳ ಕಾಲ ನೆನೆಸಿ ಅಥವಾ ಸಬ್ಬಕ್ಕಿಯನ್ನು ಬೆರಳುಗಳಲ್ಲಿ ಪುಡಿ ಮಾಡಲು ಆಗುವಷ್ಟು ಹೊತ್ತು ನೆನೆಸಿರಬೇಕು. 
  2. ನೆನೆಸಿದ ನಂತರ ನೀರು ಬಗ್ಗಿಸಿಕೊಳ್ಳಿ. 
  3. ಅದಕ್ಕೆ ಕತ್ತರಿಸಿದ ಈರುಳ್ಳಿ , ಕರಿಬೇವಿನ ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಜೀರಿಗೆ ಸೇರಿಸಿ. 
  4. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  5. ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಸಿ. 
  6. ಬೇಕಾದಲ್ಲಿ ಹುರಿದು ಸಿಪ್ಪೆ ತೆಗೆದ ಶೇಂಗಾ ಅಥವಾ ಕಡ್ಲೆಕಾಯಿಯನ್ನು ಸೇರಿಸಿ. 
  7. ಅಗತ್ಯವಿದ್ದಲ್ಲಿ ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
  8. ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟು ಇರಿಸಿ.
  9. ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ತಟ್ಟುತ್ತಾ ವೃತ್ತಾಕಾರದ ರೊಟ್ಟಿಯನ್ನುಮಾಡಿ.
  10. ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ ಮೇಲೆ ಹಾಕಿ. ಬಾಳೆ ಎಲೆಯಲ್ಲಿ ಮಾಡಿದರೆ ಕೆಲಸ ಸುಲಭವಾಗುವುದು. ಮೇಲೆ ಹಾಕಿದ ವಿಡಿಯೋ ನೋಡಿ. 
  11. ಮೇಲಿನಿಂದ ಎಣ್ಣೆ ಹಾಕಿ ಕಾಯಿಸಿ. ರೊಟ್ಟಿಯನ್ನು ತಿರುವಿ ಹಾಕಿ ಇನ್ನೊಂದು ಬದಿಯೂ ಕಾಯಿಸಿ. 
  12. ಚಟ್ನಿ ಅಥವಾ ಅಥವಾ ಹಾಗೆ ಬಡಿಸಿ.

Related Posts Plugin for WordPress, Blogger...