ಶುಕ್ರವಾರ, ಮಾರ್ಚ್ 25, 2022

Ragi uttappa recipe in Kannada | ರಾಗಿ ಉತ್ತಪ್ಪ ಮಾಡುವ ವಿಧಾನ

 

Ragi uttappa recipe in Kannada

Ragi uttappa recipe in Kannada | ರಾಗಿ ಉತ್ತಪ್ಪ ಮಾಡುವ ವಿಧಾನ

ರಾಗಿ ಉತ್ತಪ್ಪ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 3/4 ಕಪ್ ರಾಗಿ 
  2. 1/4 ಕಪ್ ದೋಸೆ ಅಕ್ಕಿ
  3. 1/4 ಕಪ್ ಉದ್ದಿನಬೇಳೆ
  4. 1 ಟೀಸ್ಪೂನ್ ಮೆಂತ್ಯ
  5. 1/4 - 1/2 ಕಪ್ ತೆಳು ಅವಲಕ್ಕಿ
  6. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  7. ಉಪ್ಪು ರುಚಿಗೆ ತಕ್ಕಷ್ಟು.

ಮೇಲಿನಿಂದ ಹಾಕಲು ಬೇಕಾಗುವ ಪದಾರ್ಥಗಳು:

  1. 2 - 3 ಈರುಳ್ಳಿ
  2. 2 ಟೇಬಲ್ ಚಮಚ ಕರಿಬೇವು 
  3. 2 - 3 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  4. 2 - 3 ಹಸಿಮೆಣಸಿನಕಾಯಿ
  5. ಉಪ್ಪು ರುಚಿಗೆ ತಕ್ಕಷ್ಟು.

ರಾಗಿ ಉತ್ತಪ್ಪ ಮಾಡುವ ವಿಧಾನ:

  1. ರಾಗಿ, ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 4-5 ಗಂಟೆಗಳ ಕಾಲ ನೆನೆಯಲು ಬಿಡಿ. ರಾಗಿ ಹಿಟ್ಟು ಬಳಸುತ್ತೀರಾದಲ್ಲಿ ಅಕ್ಕಿ ಮತ್ತು ಉದ್ದಿನಬೇಳೆ ನೆನೆಸಿ, ಅರೆದ ಮೇಲೆ ಸೇರಿಸಬಹುದು. 
  2. ನೆನೆಸಿದ ನಂತರ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  3. ಅವಲಕ್ಕಿ ತೊಳೆದು ಸೇರಿಸಿ. ಗಟ್ಟಿ ಅವಲಕ್ಕಿ ಆದಲ್ಲಿ, 10 ನಿಮಿಷ ನೆನೆಸಿ ಸೇರಿಸಿ. 
  4. ಎಲ್ಲವನ್ನು ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  5. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  6. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  7. ಮೇಲಿನಿಂದ ಹಾಕಲು ಸಣ್ಣಗೆ ಹೆಚ್ಚಿದ ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು,  ಹಸಿಮೆಣಸಿನಕಾಯಿ ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಕಲಸಿಟ್ಟು ಕೊಳ್ಳಿ. 
  8. ದೋಸೆ ಹೆಂಚನ್ನು ಬಿಸಿಮಾಡಿ. ಹಿಟ್ಟು ಸುರಿದು, ದಪ್ಪ ದೋಸೆ ಮಾಡಿ.
  9. ಮೇಲಿನಿಂದ ಈರುಳ್ಳಿ ಮಿಶ್ರಣ ಹಾಕಿ. 
  10. ಮುಚ್ಚಳವನ್ನು ಮುಚ್ಚಿ ಮಾಧ್ಯಮ ಉರಿಯಲ್ಲಿ ಬೇಯಿಸಿ.
  11. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ ಇನ್ನೊಂದು ಬದಿ ಕಾಯಿಸಿ. ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...