ಬುಧವಾರ, ಸೆಪ್ಟೆಂಬರ್ 18, 2019

Dideer tomato rave dose recipe in Kannada | ದಿಢೀರ್ ಟೊಮೇಟೊ ರವೇ ದೋಸೆ ಮಾಡುವ ವಿಧಾನ

Dideer tomato rave dose recipe in Kannada

Dideer tomato rave dose recipe in Kannada |  ದಿಢೀರ್ ಟೊಮೇಟೊ ರವೇ ದೋಸೆ ಮಾಡುವ ವಿಧಾನ


ದಿಢೀರ್ ಟೊಮೇಟೊ ರವೇ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ಟೊಮೇಟೊ
  2. 1/2 ಕಪ್ ಅಕ್ಕಿ ಹಿಟ್ಟು
  3. 1/4 ಕಪ್ ರವೇ
  4. 1 ಟೇಬಲ್ ಚಮಚ ಕಡ್ಲೆಹಿಟ್ಟು
  5. 1 ಚಮಚ ಅಚ್ಚಖಾರದಪುಡಿ ಅಥವಾ ಒಣಮೆಣಸು
  6. ಸ್ವಲ್ಪ ಶುಂಠಿ
  7. 1/2 ಚಮಚ ಜೀರಿಗೆ
  8. ಸ್ವಲ್ಪ ಕೊತ್ತಂಬರಿ ಸೊಪ್ಪು
  9. ಎಣ್ಣೆ ಅಥವಾ ತುಪ್ಪ (ದೋಸೆ ಮಾಡಲು)
  10. ಉಪ್ಪು ರುಚಿಗೆ ತಕ್ಕಷ್ಟು

ದಿಢೀರ್ ಟೊಮೇಟೊ ರವೇ ದೋಸೆ ಮಾಡುವ ವಿಧಾನ:

  1. ಮಿಕ್ಸಿಯಲ್ಲಿ ಕತ್ತರಿಸಿದ ಟೊಮ್ಯಾಟೊವನ್ನು ತೆಗೆದುಕೊಳ್ಳಿ. 
  2. ಅದಕ್ಕೆ ಅಕ್ಕಿಹಿಟ್ಟು ಮತ್ತು ರವೇ ಸೇರಿಸಿ. 
  3. ಕಡ್ಲೆಹಿಟ್ಟನ್ನೂ ಸೇರಿಸಿ. 
  4. ಆಮೇಲೆ ಅಚ್ಚಖಾರದ ಪುಡಿ ಮತ್ತು ಶುಂಠಿ ಸೇರಿಸಿ. 
  5. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  6. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  7. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಸುರಿದು, ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  8. ಅಗತ್ಯವಿದ್ದಷ್ಟು ನೀರು ಸೇರಿಸಿ, ತೆಳುವಾದ ಹಿಟ್ಟು ತಯಾರಿಸಿಕೊಳ್ಳಿ. ಹಿಟ್ಟು ನೀರ್ ದೋಸೆ ಅಥವಾ ರವೇ ದೋಸೆಗಿಂತ ಸ್ವಲ್ಪ ತೆಳ್ಳಗಿರಲಿ. 
  9. ಕಬ್ಬಿಣದ ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ.
  10. ಬಿಸಿ ದೋಸೆ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. ತೆಳ್ಳಗೆ ದೋಸೆ ಮಾಡಿ.
  11. ಮುಚ್ಚಳ ಮುಚ್ಚಿ ಬೇಯಿಸಿ. 
  12. ಹತ್ತು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
  13. ನಂತರ ಉರಿಯನ್ನು ಕಡಿಮೆ ಮಾಡಿ, 5 - 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. 
  14. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...