Avalakki paddu recipe in Kannada | ಅವಲಕ್ಕಿ ಪಡ್ದು ಮಾಡುವ ವಿಧಾನ
ಅವಲಕ್ಕಿ ಪಡ್ದು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 3 ಕಪ್ ಅವಲಕ್ಕಿ
- 1/2 ಕಪ್ ರವೆ
- 1/2 ಕಪ್ ಮೊಸರು
- 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ
- 1 ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು
- 7 - 8 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
- 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
- ಎಣ್ಣೆ ಪಡ್ಡು ಮಾಡಲು
- ಉಪ್ಪು ರುಚಿಗೆ ತಕ್ಕಷ್ಟು.
ಅವಲಕ್ಕಿ ಪಡ್ದು ಮಾಡುವ ವಿಧಾನ:
- ಅವಲಕ್ಕಿಗೆ ನೀರು ಹಾಕಿ, ಕೂಡಲೇ ನೀರು ಬಗ್ಗಿಸಿ. (ಗಟ್ಟಿ ಅವಲಕ್ಕಿ ಆದಲ್ಲಿ 1.5 ಕಪ್ ಸಾಕು. ಆದರೆ ಹತ್ತು ನಿಮಿಷ ನೆನೆಸಬೇಕು).
- ರವೇ ಮತ್ತು ಮೊಸರು ಸೇರಿಸಿ.
- ಚೆನ್ನಾಗಿ ಕಲಸಿ, ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಅರ್ಧ ಕಪ್), ಇಡ್ಲಿ ಹಿಟ್ಟಿಗಿಂತ ಗಟ್ಟಿಯಾದ ಹಿಟ್ಟು ಕಲಸಿ.
- ಅದಕ್ಕೆ ಉಪ್ಪು, ಸಣ್ಣಗೆ ಹೆಚ್ಚಿದ ಶುಂಠಿ, ಹಸಿರು ಮೆಣಸಿನ ಕಾಯಿ, ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಕಲಸಿ.
- ಪಡ್ಡು ತವಾವನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
- ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. ಮಧ್ಯಮ ಉರಿಯಲ್ಲಿ ಬೇಯಿಸಿ.
- ಸುಮಾರು ಒಂದು ನಿಮಿಷದ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ.
- ಪಡ್ಡುವನ್ನು ತಿರುಗಿಸಿ ಹಾಕುತ್ತಾ, ಎಲ್ಲ ಬದಿ ಬೇಯಿಸಿ. ಚಟ್ನಿಯೊಂದಿಗೆ ಬಡಿಸಿ.