ಶುಕ್ರವಾರ, ಮಾರ್ಚ್ 2, 2018

Rave payasa recipe in Kannada | ರವೇ ಪಾಯಸ ಮಾಡುವ ವಿಧಾನ

Rave payasa recipe in Kannada

Rave payasa recipe in Kannada | ರವೇ ಪಾಯಸ ಮಾಡುವ ವಿಧಾನ 

Rave payasa video

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 4 ಟೇಬಲ್ ಚಮಚ ಉಪ್ಪಿಟ್ಟು ರವೇ
  2. 2 - 2.5 ಕಪ್ ಹಾಲು
  3. 1 ಕಪ್ ನೀರು
  4. 6 ಟೇಬಲ್ ಚಮಚ ಸಕ್ಕರೆ
  5. 2 ಟೀಸ್ಪೂನ್ ತುಪ್ಪ
  6. 5-6 ಗೋಡಂಬಿ
  7. 8-10 ಒಣದ್ರಾಕ್ಷಿ
  8. ಒಂದು ಚಿಟಿಕೆ ಏಲಕ್ಕಿ ಪುಡಿ

ರವೇ ಪಾಯಸ ಮಾಡುವ ವಿಧಾನ:

  1. ಹಾಲನ್ನು ಒಂದು ಪಾತ್ರೆಯಲ್ಲಿ ಕುದಿಯಲು ಇಡಿ. 
  2. ಅದೇ ಸಮಯದಲ್ಲಿ ಇನ್ನೊಂದು ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು ತೆಗೆದಿಡಿ. 
  3. ನಂತರ ಅದೇ ಬಾಣಲೆಗೆ ರವೇಯನ್ನು ಹಾಕಿ ಸುವಾಸನೆ ಬರುವವರೆಗೆ ಹುರಿಯಿರಿ. 
  4. ನೀರನ್ನು ಸೇರಿಸಿ ಮಗುಚಿ. 
  5. ಕುದಿಯಲು ಪ್ರಾರಂಭವಾದ ಕೂಡಲೇ ಉರಿ ಕಡಿಮೆ ಮಾಡಿ, ಒಂದು ನಿಮಿಷ ಬೇಯಿಸಿ. 
  6. ನಂತರ ಹಾಲನ್ನು ಸೇರಿಸಿ. 
  7. ಸಕ್ಕರೆಯನ್ನೂ ಸೇರಿಸಿ. 
  8. ಏಲಕ್ಕಿ ಪುಡಿ ಮತ್ತು ಕೇಸರಿ (ಬೇಕಾದಲ್ಲಿ) ಸೇರಿಸಿ ಕುದಿಸಿ. 
  9. ನೆನಪಿಡಿ ಪಾಯಸ ತಣ್ಣಗಾದ ನಂತರ ಸ್ವಲ್ಪ ಗಟ್ಟಿಯಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು, ಬೇಕಾದಲ್ಲಿ ಹಾಲು ಅಥವಾ ನೀರು ಸೇರಿಸಬಹುದು. ಸಕ್ಕರೆ ಕರಗಿದ ಮೇಲೆ ಸ್ಟವ್ ಸ್ಟೋವ್ ಆಫ್ ಮಾಡಿ.
  10. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...