ಮಂಗಳವಾರ, ಮಾರ್ಚ್ 20, 2018

Benne murukku recipe in Kannada | ಬೆಣ್ಣೆ ಮುರುಕ್ಕು ಮಾಡುವ ವಿಧಾನ

Benne murukku recipe in Kannada

Benne murukku recipe in Kannada | ಬೆಣ್ಣೆ ಮುರುಕ್ಕು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

 1. 1 ಕಪ್ ಅಕ್ಕಿ ಹಿಟ್ಟು 
 2. 1/4 ಕಪ್ ಹುರಿಗಡಲೆ
 3. 1/4 ಕಪ್ ಕಡ್ಲೆಹಿಟ್ಟು
 4. 1 ಟೀ ಸ್ಪೂನ್ ಜೀರಿಗೆ 
 5. ದೊಡ್ಡ ಚಿಟಿಕೆ ಇಂಗು
 6. ದೊಡ್ಡ ಚಿಟಿಕೆ ಅರಿಶಿನ
 7. ಒಂದು ಲಿಂಬೆಹಣ್ಣಿನ ಗಾತ್ರದ ಬೆಣ್ಣೆ 
 8. ಉಪ್ಪು ರುಚಿಗೆ ತಕ್ಕಷ್ಟು 
 9. ಎಣ್ಣೆ ಕಾಯಿಸಲು

ಬೆಣ್ಣೆ ಮುರುಕ್ಕು ಮಾಡುವ ವಿಧಾನ:

 1. ಹುರಿಗಡಲೆಯನ್ನು ಮಿಕ್ಸಿಜಾರಿನಲ್ಲಿ ಹಾಕಿ ನುಣ್ಣನೆ ಪುಡಿಮಾಡಿ ಕೊಳ್ಳಿ. 
 2. ಒಂದು ಅಗಲವಾದ ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ. 
 3. ಅದಕ್ಕೆ ಹುರಿಗಡಲೆ ಹಿಟ್ಟು ಸೇರಿಸಿ. 
 4. ನಂತ್ರ ಕಡ್ಲೆಹಿಟ್ಟು ಸೇರಿಸಿ ಕಲಸಿ. 
 5. ಆಮೇಲೆ ಜೀರಿಗೆ, ಇಂಗು, ಅರಿಶಿನ ಮತ್ತು ಉಪ್ಪು ಹಾಕಿ. ಚೆನ್ನಾಗಿ ಕಲಸಿ. ಬೇಕಾದಲ್ಲಿ ಅಚ್ಚಖಾರದ ಪುಡಿ ಸೇರಿಸಬಹುದು. 
 6. ಬೆಣ್ಣೆ ಸೇರಿಸಿ, ಚೆನ್ನಾಗಿ ತಿಕ್ಕಿ ಕಲಸಿ. 
 7. ಸ್ವಲ್ಪ ನೀರನ್ನು ಸೇರಿಸಿ, ಗಟ್ಟಿ ಆದರೆ ಮೃದುವಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಚಕ್ಕುಲಿ ಒತ್ತಲು ಆಗುವಷ್ಟು ಮೆತ್ತಗಿದ್ದರೆ ಸಾಕು. 
 8. ಎಣ್ಣೆ ಬಿಸಿ ಮಾಡಿ. 
 9. ಚಕ್ಕುಲಿ ಅಚ್ಚನ್ನು ಉಪಯೋಗಿಸಿ ಮುರುಕ್ಕನ್ನು ನೇರವಾಗಿ ಬಿಸಿ ಎಣ್ಣೆಗೆ ಒತ್ತಿ.  ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...