Sorekai payasa recipe in Kannada | ಸೋರೆಕಾಯಿ ಪಾಯಸ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
1 ಕಪ್ ತುರಿದ ಸೋರೆಕಾಯಿ
2 ಲಿಂಬೆಹಣ್ಣಿನ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿ ಪ್ರಕಾರ)
1/2 ಕಪ್ ತೆಂಗಿನತುರಿ
1 ಟೇಬಲ್ ಚಮಚ ತುಪ್ಪ
5-6 ಗೋಡಂಬಿ
8-10 ಒಣದ್ರಾಕ್ಷಿ
ಒಂದು ಏಲಕ್ಕಿ
ಒಂದು ಚಿಟಿಕೆ ಉಪ್ಪು
ಸೋರೆಕಾಯಿ ಪಾಯಸ ಮಾಡುವ ವಿಧಾನ:
ಸೋರೆಕಾಯಿಯನ್ನು ಸಿಪ್ಪೆ ತೆಗೆದು, ತೊಳೆದು ತುರಿದುಕೊಳ್ಳಿ.
ಸೋರೆಕಾಯಿ ತುರಿಯನ್ನು ಒಂದು ಪಾತ್ರೆಗೆ ಹಾಕಿ, ಒಂದು ಚಿಟಿಕೆ ಉಪ್ಪು ಹಾಕಿ, 1 ಕಪ್ ನೀರು ಹಾಕಿ ಕುದಿಯಲು ಇಡೀ.
ಕುದಿಯಲು ಪ್ರಾರಂಭವಾದ ಕೂಡಲೇ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ.
ಆಮೇಲೆ ಬೆಲ್ಲ ಹಾಕಿ ಬೇಯಿಸುವುದನ್ನು ಮುಂದುವರೆಸಿ.
ಆ ಸಮಯದಲ್ಲಿ ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಏಲಕ್ಕಿ ಮತ್ತು ತೊಳೆದ ಅಕ್ಕಿ ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. ಬೇಕಾದಲ್ಲಿ ಕಾಯಿಹಾಲು ತೆಗೆದು ಹಾಕಬಹುದು.
ಅದನ್ನು ಬೇಯಿಸಿದ ಸೋರೆಕಾಯಿಗೆ ಹಾಕಿ ಆಗಾಗ್ಯೆ ಮಗುಚುತ್ತಾ ಕುದಿಸಿ. ಸ್ಟವ್ ಆಫ್ ಮಾಡಿ.
ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದ ಸಮೇತ ಸೇರಿಸಿ. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.
Mosaru vade recipe in kannada | ಮೊಸರು ವಡೆ ಮಾಡುವ ವಿಧಾನ
ಮೊಸರು ವಡೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/2 ಕಪ್ ಉದ್ದಿನ ಬೇಳೆ
1/2 ಟೀಸ್ಪೂನ್ ಶುಂಠಿ ಸಣ್ಣಗೆ ಹೆಚ್ಚಿದ್ದು
1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
ಉಪ್ಪು ರುಚಿಗೆ ತಕ್ಕಷ್ಟು.
ಸಕ್ಕರೆ ರುಚಿಗೆ ತಕ್ಕಷ್ಟು.
ಸ್ವಲ್ಪ ಎಣ್ಣೆ ವಡೆ ಮಾಡಲು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/2 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ಉದ್ದಿನಬೇಳೆ
1/4 ಟೀಸ್ಪೂನ್ ಶುಂಠಿ ಸಣ್ಣಗೆ ಹೆಚ್ಚಿದ್ದು
1 - 2 ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು
4 - 5 ಕರಿಬೇವಿನ ಎಲೆ
2 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
2 ಟೀಸ್ಪೂನ್ ಅಡುಗೆ ಎಣ್ಣೆ
ಮೊಸರು ವಡೆ ಮಾಡುವ ವಿಧಾನ:
ಉದ್ದಿನ ಬೇಳೆಯನ್ನು ತೊಳೆದು ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
ನೆನೆಸಿದ ನಂತ್ರ ಉದ್ದಿನ ಬೇಳೆಯನ್ನು ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ರುಬ್ಬಿರಿ. ಅಗತ್ಯವಿದ್ದಷ್ಟು ನೀರು ಸೇರಿಸಿ. ನಾನು ಅರ್ಧ ಕಪ್ ಉದ್ದಿನಬೇಳೆಗೆ ಅರ್ಧ ಕಪ್ ನೀರು ಸೇರಿಸಿದ್ದೇನೆ.
ಅರೆದ ಹಿಟ್ಟಿಗೆ ಉಪ್ಪು, ಹೆಚ್ಚಿದ ಶುಂಠಿ ಮತ್ತು ಹೆಚ್ಚಿದ ಕರಿಬೇವಿನ ಎಲೆ ಸೇರಿಸಿ. ಚೆನ್ನಾಗಿ ಕಲಸಿ. ಹಿಟ್ಟು ದಪ್ಪ ಇಡ್ಲಿ ಹಿಟ್ಟಿನಷ್ಟು ಗಟ್ಟಿ ಇರಬೇಕು.
ಗುಳಿಯಪ್ಪದ ಕಲ್ಲನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ.
೫ - ೧೦ ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು ವಡೆಯನ್ನು ತಿರುಗಿಸಿ ಹಾಕಿ. ಇನ್ನೊಂದು ಬದಿಯೂ ಬೇಯಿಸಿ.
ಬೇಯಿಸಿದ ವಡೆಗಳನ್ನು ಬಿಸಿ ನೀರಿರುವ ಪಾತ್ರೆಗೆ ಹಾಕಿ. ಹತ್ತು ನಿಮಿಷದ ನಂತ್ರ ಹಗುರವಾಗಿ ಒತ್ತಿ, ತೆಗೆದಿಡಿ.
ಇನ್ನೊಂದು ಬಟ್ಟಲಿನಲ್ಲಿ ಮೊಸರು ತೆಗೆದು ಕೊಂಡು ಸಕ್ಕರೆ ಮತ್ತು ಉಪ್ಪು ಸೇರಿಸಿ, ಚೆನ್ನಾಗಿ ಕಲಸಿ.
ಅದಕ್ಕೆ ನೀರಿನಲ್ಲಿ ನೆನೆಸಿ ತೆಗೆದಿಟ್ಟ ವಡೆ ಹಾಕಿ.
ಮೇಲಿನಿಂದ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಸಣ್ಣಗೆ ಹೆಚ್ಚಿದ ಹಸಿರುಮೆಣಸಿನಕಾಯಿ, ಶುಂಠಿ ಮತ್ತು ಕರಿಬೇವು ಒಗ್ಗರಣೆ ಹಾಕಿ.
ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ. ಹತ್ತು ನಿಮಿಷ ಬಿಟ್ಟು ಸವಿದು ಆನಂದಿಸಿ.
ಅಗತ್ಯವಿದ್ದಷ್ಟು ನೀರು, ಸ್ವಲ್ಪ ಉಪ್ಪು ಮತ್ತು ಚಿಟಿಕೆ ಅರಿಶಿನ ಸೇರಿಸಿ ಬೇಯಿಸಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಜೀರಿಗೆ ಹಾಕಿ. ಬೇಕಾದಲ್ಲಿ ಒಣಮೆಣಸು ಮತ್ತು ಉದ್ದಿನಬೇಳೆ ಹಾಕಬಹುದು.
ಸಾಸಿವೆ ಸಿಡಿದ ಕೂಡಲೇ ಅರಶಿನ ಮತ್ತು ಇಂಗು ಸೇರಿಸಿ.
ಸೀಳಿದ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ.
ನಂತ್ರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ.
ಅದಕ್ಕೆ ಬೇಯಿಸಿದ ಹಲಸಿನಬೀಜ ಹಾಕಿ. ಹೆಚ್ಚಿನ ನೀರನ್ನು ಬಸಿದು ತೆಗೆಯಬಹುದು. ನಾನು ಸ್ವಲ್ಪ ನೀರು ಹಾಕಿದ ಕರಣ ಬಸಿಯಲಿಲ್ಲ.
ಪುಡಿ ಉಪ್ಪು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿ. ಚೆನ್ನಾಗಿ ಮಗುಚಿ.
ಕೊನೆಯಲ್ಲಿ ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಒಮ್ಮೆ ಮಗುಚಿ. ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ. ಉಪ್ಪು ಕಡಿಮೆ ಹಾಕಿದಲ್ಲಿ ಹಾಗೇ ತಿನ್ನಬಹುದು.
Mavinakai chitranna recipe in Kannada | ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ
ಮಾವಿನಕಾಯಿ ಚಿತ್ರಾನ್ನ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
1/2 ಕಪ್ ಅಕ್ಕಿ (ಸೋನಾ ಮಸೂರಿ)
1/4 ಕಪ್ ತೆಂಗಿನ ತುರಿ
1/2 ಕಪ್ ಮಾವಿನಕಾಯಿ ತುರಿ
1 - 2 ಹಸಿರು ಮೆಣಸಿನಕಾಯಿ
1/2 ಟೀಸ್ಪೂನ್ ಸಾಸಿವೆ
1/4 ಟೀಸ್ಪೂನ್ ಮೆಂತೆ
2 ಟೇಬಲ್ ಸ್ಪೂನ್ ಶೇಂಗಾ / ಕಡಲೆಕಾಯಿ
1 ಟೀಸ್ಪೂನ್ ಉದ್ದಿನ ಬೇಳೆ
1 ಟೀಸ್ಪೂನ್ ಕಡ್ಲೆಬೇಳೆ
1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
5 - 6 ಕರಿಬೇವಿನ ಎಲೆ
2 ಟೀ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
1/4 ಟೀಸ್ಪೂನ್ ಅರಿಶಿನ ಪುಡಿ
ದೊಡ್ಡ ಚಿಟಿಕೆ ಇಂಗು
4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ:
ಒಂದು ಕುಕ್ಕರ್ ನಲ್ಲಿ ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಅನ್ನ ಸ್ವಲ್ಪ ಉದುರುದುರಾಗಿರಲಿ.
ಅನ್ನ ಬೇಯುವ ಸಮಯದಲ್ಲಿ ಚಿತ್ರಾನ್ನಕ್ಕೆ ಒಗ್ಗರಣೆ ಮಾಡಿಕೊಳ್ಳೋಣ. ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಮೊದಲಿಗೆ ಶೇಂಗಾ ಅಥವಾ ಕಡಲೆಕಾಯಿಯನ್ನು ಹಾಕಿ.
ಕಡಲೆಕಾಯಿ ಸ್ವಲ್ಪ ಕಾದು ಸಿಡಿಯಲು ಪ್ರಾರಂಭಿಸಿದ ಕೂಡಲೇ ಸಾಸಿವೆ, ಮೆಂತೆ, ಕಡ್ಲೆಬೇಳೆ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ.
ಸಾಸಿವೆ ಸಿಡಿದ ಕೂಡಲೇ ಅರಿಶಿನ ಮತ್ತು ಇಂಗು ಸೇರಿಸಿ
ಹಸಿರು ಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ.
ಆಮೇಲೆ ತುರಿದ ಮಾವಿನಕಾಯಿ ಹಾಕಿ ಹುರಿಯಿರಿ.
ನಂತರ ತೆಂಗಿನ ತುರಿ ಹಾಕಿ ಚೆನ್ನಾಗಿ ಕಲಸಿ. ಹಸಿಮೆಣಸಿನಕಾಯಿ, ತೆಂಗಿನತುರಿ ಮತ್ತು ಮಾವಿನಕಾಯಿ ತುರಿಯನ್ನು ಅರ್ಧ ಚಮಚ ಸಾಸಿವೆಯೊಂದಿಗೆ ಪುಡಿಮಾಡಿಯೂ ಸೇರಿಸಬಹುದು. ನಂತರ ಸ್ಟೋವ್ ಆಫ್ ಮಾಡಿ.
ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಕಲಸಿ.
ನಂತರ ಬೇಯಿಸಿದ ಅನ್ನ ಸೇರಿಸಿ.
ಚಪ್ಪಟೆಯಾದ ಸಟ್ಟುಗ ಬಳಸಿ ಚಿತ್ರಾನ್ನವನ್ನು ಕಲಸಿ. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.
Rave payasa recipe in Kannada | ರವೇ ಪಾಯಸ ಮಾಡುವ ವಿಧಾನ
Rave payasa video
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
4 ಟೇಬಲ್ ಚಮಚ ಉಪ್ಪಿಟ್ಟು ರವೇ
2 - 2.5 ಕಪ್ ಹಾಲು
1 ಕಪ್ ನೀರು
6 ಟೇಬಲ್ ಚಮಚ ಸಕ್ಕರೆ
2 ಟೀಸ್ಪೂನ್ ತುಪ್ಪ
5-6 ಗೋಡಂಬಿ
8-10 ಒಣದ್ರಾಕ್ಷಿ
ಒಂದು ಚಿಟಿಕೆ ಏಲಕ್ಕಿ ಪುಡಿ
ರವೇ ಪಾಯಸ ಮಾಡುವ ವಿಧಾನ:
ಹಾಲನ್ನು ಒಂದು ಪಾತ್ರೆಯಲ್ಲಿ ಕುದಿಯಲು ಇಡಿ.
ಅದೇ ಸಮಯದಲ್ಲಿ ಇನ್ನೊಂದು ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು ತೆಗೆದಿಡಿ.
ನಂತರ ಅದೇ ಬಾಣಲೆಗೆ ರವೇಯನ್ನು ಹಾಕಿ ಸುವಾಸನೆ ಬರುವವರೆಗೆ ಹುರಿಯಿರಿ.
ನೀರನ್ನು ಸೇರಿಸಿ ಮಗುಚಿ.
ಕುದಿಯಲು ಪ್ರಾರಂಭವಾದ ಕೂಡಲೇ ಉರಿ ಕಡಿಮೆ ಮಾಡಿ, ಒಂದು ನಿಮಿಷ ಬೇಯಿಸಿ.
ನಂತರ ಹಾಲನ್ನು ಸೇರಿಸಿ.
ಸಕ್ಕರೆಯನ್ನೂ ಸೇರಿಸಿ.
ಏಲಕ್ಕಿ ಪುಡಿ ಮತ್ತು ಕೇಸರಿ (ಬೇಕಾದಲ್ಲಿ) ಸೇರಿಸಿ ಕುದಿಸಿ.
ನೆನಪಿಡಿ ಪಾಯಸ ತಣ್ಣಗಾದ ನಂತರ ಸ್ವಲ್ಪ ಗಟ್ಟಿಯಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು, ಬೇಕಾದಲ್ಲಿ ಹಾಲು ಅಥವಾ ನೀರು ಸೇರಿಸಬಹುದು. ಸಕ್ಕರೆ ಕರಗಿದ ಮೇಲೆ ಸ್ಟವ್ ಸ್ಟೋವ್ ಆಫ್ ಮಾಡಿ.
ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.