Sihi appa or paddu recipe in Kannada | ಸಿಹಿ ಅಪ್ಪ ಅಥವಾ ಪಡ್ದು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅಕ್ಕಿ ಹಿಟ್ಟು
- 1/2 ಕಪ್ ತೆಂಗಿನ ತುರಿ
- 1/2 ಕಪ್ ಪುಡಿ ಮಾಡಿದ ಬೆಲ್ಲ
- 1/2 ಕಪ್ ಕತ್ತರಿಸಿದ ಬಾಳೆಹಣ್ಣು
- 1 ಏಲಕ್ಕಿ
- ತುಪ್ಪ ಕಾಯಿಸಲು
- ಉಪ್ಪು ರುಚಿಗೆ ತಕ್ಕಷ್ಟು.
ಸಿಹಿ ಅಪ್ಪ ಅಥವಾ ಪಡ್ದು ಮಾಡುವ ವಿಧಾನ:
- ತೆಂಗಿನ ತುರಿ, ಬಾಳೆಹಣ್ಣು ಮತ್ತು ಏಲಕ್ಕಿಯನ್ನು ಅರೆಯಿರಿ. ಅರೆಯಲು ಒಂದೆರಡು ಟೇಬಲ್ ಚಮಚ ನೀರು ಸೇರಿಸಬಹುದು.
- ನಂತರ ಅದಕ್ಕೆ ಪುಡಿಮಾಡಿದ ಬೆಲ್ಲ ಹಾಕಿ ನುಣ್ಣಗೆ ಅರೆಯಿರಿ.
- ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ, ಗಟ್ಟಿಯಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯುವುದಾದರೆ ಹಿಟ್ಟು ಗಟ್ಟಿಯಾಗಿರಲಿ, ನೀರು ಸೇರಿಸ ಬೇಡಿ. ಅಪ್ಪ ಅಥವಾ ಪಡ್ಡು ಪ್ಯಾನ್ ನಲ್ಲಿ ಮಾಡುವುದಾದರೆ ಸ್ವಲ್ಪ ನೀರು ಸೇರಿಸಿ, ಹಿಟ್ಟನ್ನು ಸ್ವಲ್ಪ ತೆಳು ಮಾಡಿಕೊಳ್ಳಿ.
- ಪಡ್ಡು ತವಾವನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಅರ್ಧ ಚಮಚದಷ್ಟು ತುಪ್ಪ ಹಾಕಿ. ಬೇಕಾದಲ್ಲಿ ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿಮಾಡಿ, ಕೈಯಲ್ಲಿ ಹಿಟ್ಟು ಹಾಕಿಯೂ ಕಾಯಿಸಬಹುದು.
- ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ.
- ೧ ನಿಮಿಷದ ನಂತರ ಮುಚ್ಚಳ ತೆರೆದು ಅಪ್ಪವನ್ನು ತಿರುಗಿಸಿ ಹಾಕಿ. ಇನ್ನೊಂದು ಬದಿಯೂ ಬೇಯಿಸಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ