Halasina hannina mulka recipe in Kannada | ಹಲಸಿನ ಹಣ್ಣಿನ ಮುಳುಕ ಮಾಡುವ ವಿಧಾನ
ಮುಳ್ಕ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ ಅಥವಾ ಅಕ್ಕಿ ಹಿಟ್ಟು
- 2 ಕಪ್ ಕತ್ತರಿಸಿದ ಹಲಸಿನ ಹಣ್ಣು
- 1/2 ಕಪ್ ತೆಂಗಿನ ತುರಿ
- 1/2 ಕಪ್ ಪುಡಿ ಮಾಡಿದ ಬೆಲ್ಲ
- ಎಣ್ಣೆ ಕಾಯಿಸಲು
- ಒಂದು ಚಿಟಿಕೆ ಅಥವಾ ರುಚಿಗೆ ತಕ್ಕಷ್ಟು ಉಪ್ಪು.
ಹಲಸಿನ ಹಣ್ಣಿನ ಮುಳುಕ ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು ೨ ಘಂಟೆ ನೆನೆಸಿಡಿ.
- ಹಲಸಿನ ಹಣ್ಣನ್ನು ಕತ್ತರಿಸಿ, ಬೀಜ ತೆಗೆದು, ಒಂದು ಇಂಚು ಉದ್ದಕ್ಕೆ ಕತ್ತರಿಸಿ.
- ಅಕ್ಕಿ ನೆನೆದ ನಂತರ ನೀರು ಬಗ್ಗಿಸಿ, ತೆಂಗಿನ ತುರಿ, ಹಲಸಿನ ಹಣ್ಣು, ಉಪ್ಪು ಮತ್ತು ಬೆಲ್ಲದೊಂದಿಗೆ ನಯವಾಗಿ ಅರೆಯಿರಿ. ಅರೆಯಲು ನೀರು ಬಳಸಬೇಡಿ.
- ಅರೆಯಲು ತುಂಬ ಗಟ್ಟಿ ಮತ್ತು ಕಷ್ಟವೆನಿಸಿದಲ್ಲಿ ಒಂದೆರಡು ಟೇಬಲ್ ಚಮಚ ನೀರು ಸೇರಿಸಬಹುದು.
- ಅಥವಾ ತೆಂಗಿನ ತುರಿ, ಹಲಸಿನ ಹಣ್ಣು, ಉಪ್ಪು ಮತ್ತು ಬೆಲ್ಲವನ್ನು ಅರೆದು ಅಕ್ಕಿಯ ಬದಲು ಅಕ್ಕಿ ಹಿಟ್ಟನ್ನು ಹಾಕಿ ಕಲಸಬಹುದು. ಅಕ್ಕಿ ಹಿಟ್ಟು ಹಾಕಿದಲ್ಲಿ ಚೆನ್ನಾಗಿ ಕಲಸಲು ಮರೆಯದಿರಿ. ಇಲ್ಲವಾದಲ್ಲಿ ಎಣ್ಣೆಯಲ್ಲಿ ಸಿಡಿಯಬಹುದು.
- ಅರೆದ ಹಿಟ್ಟು ತಪ-ತಪನೆ ಬೀಳುವಷ್ಟು ಗಟ್ಟಿಯಾಗಿರಲಿ. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಕೈಯಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದು ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ.
- ಗುಳ್ಳೆಗಳು ನಿಂತ ಮೇಲೆ ಅಥಾವ ಕಂದು ಬಣ್ಣಕ್ಕೆ ತಿರುಗಿದ ಮೇಲೆ ತೆಗೆಯಿರಿ. ಬಿಸಿ ಅಥಾವ ತಣ್ಣಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ