Mavina hannu - kayi haalu ice candy in Kannada | ಮಾವಿನ ಹಣ್ಣು- ಕಾಯಿ ಹಾಲು ಐಸ್ ಕ್ಯಾಂಡಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಕತ್ತರಿಸಿದ ಮಾವಿನ ಹಣ್ಣು
- 1 ಕಪ್ ಕಾಯಿ ಹಾಲು
- 5 ಚಮಚ ಸಕ್ಕರೆ (ಅಥವಾ ರುಚಿಗೆ ತಕ್ಕಷ್ಟು)
- ಐಸ್ ಕ್ಯಾಂಡಿ ಅಚ್ಚು ಅಥವಾ ಲೋಟ
ಮಾವಿನ ಹಣ್ಣು- ಕಾಯಿ ಹಾಲು ಐಸ್ ಕ್ಯಾಂಡಿ ಮಾಡುವ ವಿಧಾನ:
- ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ಒಂದು ಕಪ್ ತೆಂಗಿನ ತುರಿ ಉಪಯೋಗಿಸಿ ಕಾಯಿ ಹಾಲು ತೆಗೆದಿಟ್ಟುಕೊಳ್ಳಿ.
- ಕತ್ತರಿಸಿದ ಮಾವಿನ ಹಣ್ಣಿಗೆ ೪ - ೫ ಚಮಚ ಕಾಯಿಹಾಲು ಹಾಕಿ, ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ ಅರೆಯಿರಿ.
- ಕಾಯಿಹಾಲಿಗೂ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿಟ್ಟುಕೊಳ್ಳಿ.
- ಈಗ ಐಸ್ ಕ್ಯಾಂಡಿ ಅಚ್ಚಿಗೆ ಮೊದಲು ಸ್ವಲ್ಪ ಸ್ವಲ್ಪ ಮಾವಿನ ಹಣ್ಣಿನ ಪೇಸ್ಟ್ ಹಾಕಿ ೧೫ ನಿಮಿಷ ಫ್ರೀಜರ್ ನಲ್ಲಿಡಿ.
- ನಂತರ ಮುಕ್ಕಾಲು ಭಾಗದಷ್ಟು ಕಾಯಿಹಾಲು ಹಾಕಿ ೩೦ ನಿಮಿಷ ಫ್ರೀಜರ್ ನಲ್ಲಿಡಿ.
- ನಂತರ ಉಳಿದ ಮಾವಿನಹಣ್ಣಿನ ಪೇಸ್ಟ್ ಹಾಕಿ ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ. ಸುಮಾರು ೪ - ೫ ಘಂಟೆ ಬೇಕಾಗಬಹುದು. ನನ್ನ ರಾತ್ರೆಯಿಡೀ ಇಟ್ಟಿದ್ದೆ.
- ಐಸ್ ಕ್ಯಾಂಡಿ ಅಚ್ಚು ಇಲ್ಲದಿದ್ದಲ್ಲಿ ಸಣ್ಣ ಪೇಪರ್ ಕಪ್ ಅಥವಾ ಸ್ಟೀಲ್ ಲೋಟಕ್ಕೆ ಹಾಕಿ, ಐಸ್ ಕ್ಯಾಂಡಿ ಕಡ್ಡಿಯನ್ನು ಇಟ್ಟು, ನಂತರ ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ.
- ಗಟ್ಟಿಯಾದ ನಂತರ, ಅಚ್ಚು ಅಥವಾ ಲೋಟವನ್ನು ಕೆಲವು ಸೆಕೆಂಡ್ ಗಳ ಕಾಲ ನೀರಿನಲ್ಲಿಡಿ ಅಥವಾ ನಲ್ಲಿ(ಟ್ಯಾಪ್) ನೀರಿನಡಿ ಹಿಡಿಯಿರಿ. ಆಮೇಲೆ ಐಸ್ ಕ್ಯಾಂಡಿಯನ್ನು ಜಾಗ್ರತೆಯಿಂದ ಹೊರ ತೆಗೆದು ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ