ಬುಧವಾರ, ಮೇ 31, 2017

Avalakki mixture recipe in Kannada | ಅವಲಕ್ಕಿ ಕುರುಕಲು ತಿಂಡಿ ಮಾಡುವ ವಿಧಾನ

Avalakki mixture recipe in Kannada

Avalakki mixture recipe in Kannada | ಅವಲಕ್ಕಿ ಕುರುಕಲು ತಿಂಡಿ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ತೆಳು ಅವಲಕ್ಕಿ
  2. 1/4 ಕಪ್ ನೆಲಗಡಲೆ ಅಥವಾ ಶೇಂಗಾ
  3. 2 ಟೇಬಲ್ ಚಮಚ ಹುರಿಗಡಲೆ ಅಥವಾ ಕಡಲೆಪಪ್ಪು
  4. 10 - 12 ಗೋಡಂಬಿ
  5. 1/2 ಕಪ್ ತೆಳ್ಳಗೆ ಹೆಚ್ಚಿದ ಒಣಕೊಬ್ಬರಿ
  6. 2 ಒಣ ಮೆಣಸಿನಕಾಯಿ
  7. 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ) 
  8. 2 ದೊಡ್ಡ ಚಿಟಿಕೆ ಅರಿಶಿನ ಪುಡಿ 
  9. 2 ದೊಡ್ಡ ಚಿಟಿಕೆ ಇಂಗು 
  10. 5 - 6 ಕರಿಬೇವಿನ ಎಲೆ 
  11. 4 ಟೀಸ್ಪೂನ್ ಎಣ್ಣೆ
  12. 1 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  13. 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಅವಲಕ್ಕಿ ಕುರುಕಲು ತಿಂಡಿ ಮಾಡುವ ವಿಧಾನ:

  1. ಅವಲಕ್ಕಿಯನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಒಂದು ಬಾಣಲೆಯಲ್ಲಿ ಗರಿ ಗರಿಯಾಗುವವರೆಗೆ ಹುರಿಯಿರಿ. 
  2. ನಂತರ ಬಾಣಲೆಯಲ್ಲಿ 4 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ ನೆಲಗಡಲೆಯನ್ನು ಹುರಿಯಿರಿ. 
  3. ಅದಕ್ಕೆ ಸಾಸಿವೆ ಮತ್ತು ಜೀರಿಗೆ ಸೇರಿಸಿ ಹುರಿಯಿರಿ. 
  4. ಸಾಸಿವೆ ಸಿಡಿದ ಮೇಲೆ ಒಣಮೆಣಸಿನ ಚೂರು, ಗೋಡಂಬಿ ಮತ್ತು ಹುರಿಗಡಲೆ ಹಾಕಿ ಹುರಿಯಿರಿ. 
  5. ನಂತರ ಹೆಚ್ಚಿದ ಕೊಬ್ಬರಿ ಮತ್ತು ಕರಿಬೇವನ್ನು ಸೇರಿಸಿ ಹುರಿಯಿರಿ.
  6. ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಿಶಿನ, ಉಪ್ಪು, ಸಕ್ಕರೆ ಮತ್ತು ಇಂಗು ಹಾಕಿ. 
  7. ನಂತರ ಒಣಗಿಸಿದ ಅಥವಾ ಹುರಿದ ಅವಲಕ್ಕಿ  ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಗುಚಿ. ಬಿಸಿ ಬಿಸಿ ಚಹಾದೊಂದಿಗೆ ಸವಿಯಿರಿ.

ಶುಕ್ರವಾರ, ಮೇ 26, 2017

Mavina hannu - kayi haalu ice candy in Kannada | ಮಾವಿನ ಹಣ್ಣು- ಕಾಯಿ ಹಾಲು ಐಸ್ ಕ್ಯಾಂಡಿ ಮಾಡುವ ವಿಧಾನ

Mavina hannu - kayi haalu ice candy in Kannada

Mavina hannu - kayi haalu ice candy in Kannada | ಮಾವಿನ ಹಣ್ಣು- ಕಾಯಿ ಹಾಲು ಐಸ್ ಕ್ಯಾಂಡಿ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕತ್ತರಿಸಿದ ಮಾವಿನ ಹಣ್ಣು 
  2. 1 ಕಪ್ ಕಾಯಿ ಹಾಲು 
  3. 5 ಚಮಚ ಸಕ್ಕರೆ (ಅಥವಾ ರುಚಿಗೆ ತಕ್ಕಷ್ಟು)
  4. ಐಸ್ ಕ್ಯಾಂಡಿ ಅಚ್ಚು ಅಥವಾ ಲೋಟ

ಮಾವಿನ ಹಣ್ಣು- ಕಾಯಿ ಹಾಲು ಐಸ್ ಕ್ಯಾಂಡಿ ಮಾಡುವ ವಿಧಾನ:

  1. ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ಒಂದು ಕಪ್ ತೆಂಗಿನ ತುರಿ ಉಪಯೋಗಿಸಿ ಕಾಯಿ ಹಾಲು ತೆಗೆದಿಟ್ಟುಕೊಳ್ಳಿ. 
  2. ಕತ್ತರಿಸಿದ ಮಾವಿನ ಹಣ್ಣಿಗೆ ೪ - ೫ ಚಮಚ ಕಾಯಿಹಾಲು ಹಾಕಿ, ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ ಅರೆಯಿರಿ. 
  3. ಕಾಯಿಹಾಲಿಗೂ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿಟ್ಟುಕೊಳ್ಳಿ. 
  4. ಈಗ ಐಸ್ ಕ್ಯಾಂಡಿ ಅಚ್ಚಿಗೆ ಮೊದಲು ಸ್ವಲ್ಪ ಸ್ವಲ್ಪ ಮಾವಿನ ಹಣ್ಣಿನ ಪೇಸ್ಟ್ ಹಾಕಿ ೧೫ ನಿಮಿಷ ಫ್ರೀಜರ್ ನಲ್ಲಿಡಿ. 
  5. ನಂತರ ಮುಕ್ಕಾಲು ಭಾಗದಷ್ಟು ಕಾಯಿಹಾಲು ಹಾಕಿ ೩೦ ನಿಮಿಷ ಫ್ರೀಜರ್ ನಲ್ಲಿಡಿ. 
  6. ನಂತರ ಉಳಿದ ಮಾವಿನಹಣ್ಣಿನ ಪೇಸ್ಟ್ ಹಾಕಿ ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ. ಸುಮಾರು ೪ - ೫ ಘಂಟೆ ಬೇಕಾಗಬಹುದು. ನನ್ನ ರಾತ್ರೆಯಿಡೀ ಇಟ್ಟಿದ್ದೆ.
  7. ಐಸ್ ಕ್ಯಾಂಡಿ ಅಚ್ಚು ಇಲ್ಲದಿದ್ದಲ್ಲಿ ಸಣ್ಣ ಪೇಪರ್ ಕಪ್ ಅಥವಾ ಸ್ಟೀಲ್ ಲೋಟಕ್ಕೆ ಹಾಕಿ, ಐಸ್ ಕ್ಯಾಂಡಿ ಕಡ್ಡಿಯನ್ನು ಇಟ್ಟು, ನಂತರ ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ. 
  8. ಗಟ್ಟಿಯಾದ ನಂತರ, ಅಚ್ಚು ಅಥವಾ ಲೋಟವನ್ನು ಕೆಲವು  ಸೆಕೆಂಡ್ ಗಳ ಕಾಲ ನೀರಿನಲ್ಲಿಡಿ ಅಥವಾ ನಲ್ಲಿ(ಟ್ಯಾಪ್) ನೀರಿನಡಿ ಹಿಡಿಯಿರಿ. ಆಮೇಲೆ ಐಸ್ ಕ್ಯಾಂಡಿಯನ್ನು ಜಾಗ್ರತೆಯಿಂದ ಹೊರ ತೆಗೆದು ಸವಿಯಿರಿ. 

ಗುರುವಾರ, ಮೇ 25, 2017

Halasina hannina mulka recipe in Kannada | ಹಲಸಿನ ಹಣ್ಣಿನ ಮುಳುಕ ಮಾಡುವ ವಿಧಾನ

Halasina hannina mulka recipe in Kannada

Halasina hannina mulka recipe in Kannada |  ಹಲಸಿನ ಹಣ್ಣಿನ ಮುಳುಕ ಮಾಡುವ ವಿಧಾನ

ಮುಳ್ಕ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಅಥವಾ ಅಕ್ಕಿ ಹಿಟ್ಟು
  2. 2 ಕಪ್ ಕತ್ತರಿಸಿದ ಹಲಸಿನ ಹಣ್ಣು
  3. 1/2 ಕಪ್ ತೆಂಗಿನ ತುರಿ
  4. 1/2 ಕಪ್ ಪುಡಿ ಮಾಡಿದ ಬೆಲ್ಲ
  5. ಎಣ್ಣೆ ಕಾಯಿಸಲು
  6. ಒಂದು ಚಿಟಿಕೆ ಅಥವಾ ರುಚಿಗೆ ತಕ್ಕಷ್ಟು ಉಪ್ಪು.

ಹಲಸಿನ ಹಣ್ಣಿನ ಮುಳುಕ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು ೨ ಘಂಟೆ ನೆನೆಸಿಡಿ. 
  2. ಹಲಸಿನ ಹಣ್ಣನ್ನು ಕತ್ತರಿಸಿ, ಬೀಜ ತೆಗೆದು, ಒಂದು ಇಂಚು ಉದ್ದಕ್ಕೆ ಕತ್ತರಿಸಿ. 
  3. ಅಕ್ಕಿ ನೆನೆದ ನಂತರ ನೀರು ಬಗ್ಗಿಸಿ, ತೆಂಗಿನ ತುರಿ, ಹಲಸಿನ ಹಣ್ಣು, ಉಪ್ಪು ಮತ್ತು ಬೆಲ್ಲದೊಂದಿಗೆ ನಯವಾಗಿ ಅರೆಯಿರಿ. ಅರೆಯಲು ನೀರು ಬಳಸಬೇಡಿ. 
  4. ಅರೆಯಲು ತುಂಬ ಗಟ್ಟಿ ಮತ್ತು ಕಷ್ಟವೆನಿಸಿದಲ್ಲಿ ಒಂದೆರಡು ಟೇಬಲ್ ಚಮಚ ನೀರು ಸೇರಿಸಬಹುದು. 
  5. ಅಥವಾ ತೆಂಗಿನ ತುರಿ, ಹಲಸಿನ ಹಣ್ಣು, ಉಪ್ಪು ಮತ್ತು ಬೆಲ್ಲವನ್ನು ಅರೆದು ಅಕ್ಕಿಯ ಬದಲು ಅಕ್ಕಿ ಹಿಟ್ಟನ್ನು ಹಾಕಿ ಕಲಸಬಹುದು. ಅಕ್ಕಿ ಹಿಟ್ಟು ಹಾಕಿದಲ್ಲಿ ಚೆನ್ನಾಗಿ ಕಲಸಲು ಮರೆಯದಿರಿ. ಇಲ್ಲವಾದಲ್ಲಿ ಎಣ್ಣೆಯಲ್ಲಿ ಸಿಡಿಯಬಹುದು. 
  6. ಅರೆದ ಹಿಟ್ಟು ತಪ-ತಪನೆ ಬೀಳುವಷ್ಟು ಗಟ್ಟಿಯಾಗಿರಲಿ. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. 
  7. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ.  ಕೈಯಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದು ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. 
  8. ಗುಳ್ಳೆಗಳು ನಿಂತ ಮೇಲೆ ಅಥಾವ ಕಂದು ಬಣ್ಣಕ್ಕೆ ತಿರುಗಿದ ಮೇಲೆ ತೆಗೆಯಿರಿ. ಬಿಸಿ ಅಥಾವ ತಣ್ಣಗೆ ಸವಿದು ಆನಂದಿಸಿ. 


ಬುಧವಾರ, ಮೇ 24, 2017

Halasinakai chips recipe in Kannada | ಹಲಸಿನಕಾಯಿ ಚಿಪ್ಸ್ ಮಾಡುವ ವಿಧಾನ

Halasinakai chips recipe in Kannada

Halasinakai chips recipe in Kannada | ಹಲಸಿನಕಾಯಿ ಚಿಪ್ಸ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಹಿಡಿ ಬಿಡಿಸಿದ ಹಲಸಿನಕಾಯಿ ಅಥವಾ ನಿಮಗೆ ಬೇಕಾದಷ್ಟು
  2. 2 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ಅಥವಾ ನಿಮ್ಮ ರುಚಿ ಪ್ರಕಾರ)
  3. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  4. 1/2 ಟೀಸ್ಪೂನ್ ಸೈನದವ ಲವಣ (ಬೇಕಾದಲ್ಲಿ)
  5. 1/4 ಟೀಸ್ಪೂನ್ ಇಂಗು
  6. ಎಣ್ಣೆ ಕಾಯಿಸಲು

ಹಲಸಿನಕಾಯಿ ಚಿಪ್ಸ್ ಮಾಡುವ ವಿಧಾನ:

  1. ಹಲಸಿನಕಾಯಿಯನ್ನು ಕತ್ತರಿಸಿ, ಸೊಳೆಯನ್ನು (ತೊಳೆಯನ್ನು) ಬೇರ್ಪಡಿಸಿ. 
  2. ನಂತರ ಹಲಸಿನ ತೊಳೆಯನ್ನು ಉದ್ದುದ್ದವಾಗಿ ಸೀಳಿ ಕೊಳ್ಳಿ. 
  3. ಒಂದು ಸಣ್ಣ ಬಟ್ಟಲಿನಲ್ಲಿ ಮೆಣಸಿನ ಪುಡಿ, ಉಪ್ಪು, ಸೈನದವ ಲವಣ (ಬೇಕಾದಲ್ಲಿ) ಮತ್ತು ಇಂಗು ಹಾಕಿ ಕಲಸಿ ಮಸಾಲೆ ಪುಡಿ ಸಿದ್ಧ ಮಾಡಿಟ್ಟು ಕೊಳ್ಳಿ. 
  4. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಕತ್ತರಿಸಿದ ಹಲಸಿನಕಾಯಿಯನ್ನು ಬಿಸಿ ಎಣ್ಣೆಗೆ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ.
  5. ಸದ್ದು ಅಥವಾ ಗುಳ್ಳೆಗಳು ನಿಂತ ಮೇಲೆ ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಕಾಯಿಸುವುದನ್ನು ಮುಂದುವರೆಸಿ. 
  6. ನಂತರ ಚಿಪ್ಸ್ ತೆಗೆದು, ಮೇಲಿನಿಂದ ಮಸಾಲೆ ಹುಡಿ ಉದುರಿಸಿ. ಹಲಸಿನಕಾಯಿ ಚಿಪ್ಸ್ ನ್ನು ಈ ವಿಧಾನದಲ್ಲೂ ತಯಾರಿಸಬಹುದು. ಚಹಾ ಅಥವಾ ಕಾಫಿಯೊಂದಿಗೆ ಗರಿ-ಗರಿ ಚಿಪ್ಸ್ ಸವಿದು ಆನಂದಿಸಿ.

ಶುಕ್ರವಾರ, ಮೇ 19, 2017

Potato sagu or kurma recipe in Kannada | ಆಲೂಗಡ್ಡೆ ಸಾಗು ಅಥವಾ ಕೂರ್ಮ ಮಾಡುವ ವಿಧಾನ

Potato sagu or kurma recipe in Kannada

Potato sagu or kurma recipe in Kannada | ಆಲೂಗಡ್ಡೆ ಸಾಗು ಅಥವಾ ಕೂರ್ಮ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 4 ಟೀಸ್ಪೂನ್ ಅಡುಗೆ ಎಣ್ಣೆ 
  2. 1/2 ಟೀಸ್ಪೂನ್ ಸಾಸಿವೆ 
  3. 1/2 ಟೀಸ್ಪೂನ್ ಜೀರಿಗೆ 
  4. 1 ಟೀಸ್ಪೂನ್ ಕಡ್ಲೆಬೇಳೆ 
  5. 1 ಟೀಸ್ಪೂನ್ ಉದ್ದಿನಬೇಳೆ 
  6. 1/4 ಟೀಸ್ಪೂನ್ ಅರಿಶಿನ ಪುಡಿ 
  7. ಒಂದು ಚಿಟಿಕೆ ಇಂಗು
  8. 1 ಸೆಮೀ ಉದ್ದದ ಶುಂಠಿ
  9. 3 ಎಸಳು ಬೆಳ್ಳುಳ್ಳಿ 
  10. 4 - 5 ಕರಿಬೇವಿನ ಎಲೆ 
  11. 1 - 2 ಹಸಿರು ಮೆಣಸಿನಕಾಯಿ 
  12. 1 ದೊಡ್ಡ ಈರುಳ್ಳಿ 
  13. 1 ಸಣ್ಣ ಕ್ಯಾರಟ್ 
  14. 1 ಟೊಮೆಟೊ 
  15. 2 ಮಧ್ಯಮ ಗಾತ್ರದ ಆಲೂಗಡ್ಡೆ 
  16. 2 ಟೀಸ್ಪೂನ್ ಕಡ್ಲೆ ಹಿಟ್ಟು 
  17. 1 ಟೀಸ್ಪೂನ್ ಕೊತ್ತಂಬರಿ ಅಥವಾ ಧನಿಯಾ ಪುಡಿ 
  18. 1/2 ಟೀಸ್ಪೂನ್ ಜೀರಿಗೆ ಪುಡಿ 
  19. 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು 
  20. ನಿಮ್ಮ ರುಚಿಗೆ ತಕ್ಕಂತೆ ಉಪ್ಪು

ಆಲೂಗಡ್ಡೆ ಸಾಗು ಅಥವಾ ಕೂರ್ಮ ಮಾಡುವ ವಿಧಾನ:

  1. ಆಲೂಗಡ್ಡೆಯನ್ನು ತೊಳೆದು, ಬೇಯಿಸಿ, ಸಿಪ್ಪೆ ತೆಗೆದು ಪುಡಿಮಾಡಿಕೊಳ್ಳಿ. ಈರುಳ್ಳಿ ಮತ್ತು ಟೊಮೇಟೊ ಕತ್ತರಿಸಿ. ಕ್ಯಾರಟ್ ತುರಿಯಿರಿ. ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. 
  2. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಕಡ್ಲೆಬೇಳೆ ಮತ್ತು ಉದ್ದಿನಬೇಳೆಯ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಕೂಡಲೇ ಅರಿಶಿನ ಪುಡಿ, ಇಂಗು, ಕರಿಬೇವಿನ ಎಲೆ, ಸಣ್ಣಗೆ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ ಮತ್ತು ಸೀಳಿದ ಹಸಿರುಮೆಣಸಿನಕಾಯಿ ಹಾಕಿ ಮಗುಚಿ. 
  4. ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ.
  5. ಈರುಳ್ಳಿ ಮೆತ್ತಗಾದ ಕೂಡಲೇ ತುರಿದ ಕ್ಯಾರಟ್ ಹಾಕಿ ಹುರಿಯಿರಿ. 
  6. ನಂತರ ಟೊಮ್ಯಾಟೋ ಹಾಕಿ ಹುರಿಯಿರಿ.
  7. ಪುಡಿಮಾಡಿದ ಆಲೂಗಡ್ಡೆ ಹಾಕಿ. 
  8. ಒಂದು ಬಟ್ಟಲಿನಲ್ಲಿ ಕಡ್ಲೆಹಿಟ್ಟು, ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪನ್ನು ಒಂದು ಲೋಟ ನೀರಿನಲ್ಲಿ ಕಲಸಿ ಹಾಕಿ. 
  9. ಚೆನ್ನಾಗಿ ಮಗುಚಿ, ಐದು ನಿಮಿಷ ಕುದಿಸಿ. 
  10. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕೊತ್ತಂಬರಿ ಸೊಪ್ಪು ಉದುರಿಸಿ. ಸ್ಟವ್ ಆಫ್ ಮಾಡಿ.


ಶನಿವಾರ, ಮೇ 13, 2017

Siridhanya idli recipe in kannada | ಸಿರಿಧಾನ್ಯ ಇಡ್ಲಿ ಮಾಡುವ ವಿಧಾನ

Siridhanya idli recipe in kannada

Siridhanya idli recipe in kannada | ಸಿರಿಧಾನ್ಯ ಇಡ್ಲಿ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸಿರಿಧಾನ್ಯ (ಇಲ್ಲಿ ನವಣೆ ಉಪಯೋಗಿಸಿದೆ)
  2. 1/4 ಕಪ್ ಉದ್ದಿನ ಬೇಳೆ 
  3. 1/4 ಗಟ್ಟಿ ಅವಲಕ್ಕಿ 
  4. ಉಪ್ಪು ನಿಮ್ಮ ರುಚಿ ಪ್ರಕಾರ

ಸಿರಿಧಾನ್ಯ ಇಡ್ಲಿ ಮಾಡುವ ವಿಧಾನ:

  1. ಉದ್ದಿನಬೇಳೆಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಸಿಡಿ.
  2. ಅರೆಯುವ ಮುನ್ನ ಅವಲಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ. 
  3. ಸಿರಿಧಾನ್ಯವನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಸಿಡಿ.
  4. 4 - 5 ಗಂಟೆಗಳ ನಂತರ ಮಿಕ್ಸಿಗೆ ನೆನೆಸಿದ ಉದ್ದಿನಬೇಳೆ ಮತ್ತು ಅವಲಕ್ಕಿ ಹಾಕಿ. ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆದು ಒಂದು ಪಾತ್ರೆಗೆ ಬಗ್ಗಿಸಿ. 
  5. ನಂತರ ನೆನೆಸಿದ ಸಿರಿಧಾನ್ಯದ ನೀರು ಬಸಿದು, ತರಿ ತರಿಯಾಗಿ ಅರೆದು, ಅದೇ ಪಾತ್ರೆಗೆ ಬಗ್ಗಿಸಿ. ಅರೆಯಲು ಅಗತ್ಯವಿದ್ದಷ್ಟು ನೀರು ಸೇರಿಸಿ.
  6. ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ ಮತ್ತು 7 - 8 ಗಂಟೆಗಳ ಕಾಲ ಹುದುಗಲು ಬಿಡಿ. 
  7. ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  8. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
  9. 10 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ. ಒಂದೈದು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆಯಿರಿ.

ಗುರುವಾರ, ಮೇ 11, 2017

Huruli kalu bassaru recipe in Kannada | ಹುರುಳಿಕಾಳು ಬಸ್ಸಾರು ಮಾಡುವ ವಿಧಾನ

Huruli kalu bassaru recipe in Kannada

Huruli kalu bassaru recipe in Kannada | ಹುರುಳಿಕಾಳು ಬಸ್ಸಾರು ಮಾಡುವ ವಿಧಾನ 

ಹುರುಳಿಕಾಳು ಬಸ್ಸಾರು ವಿಡಿಯೋ

ಮುಖ್ಯ ಪದಾರ್ಥಗಳು: (ಅಳತೆ ಕಪ್ = 240ml) 

  1. 1 ಕಪ್ ಹುರುಳಿ ಕಾಳು
  2. ಚಿಟಿಕೆ ಅರಿಶಿನ ಪುಡಿ
  3. ನಿಮ್ಮ ರುಚಿ ಪ್ರಕಾರ ಉಪ್ಪು

ಹುರುಳಿಕಾಳು ಬಸ್ಸಾರಿಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)

  1. 2 - 4 ಒಣ ಮೆಣಸಿನಕಾಯಿ
  2. 2  ಟೀಸ್ಪೂನ್ ಕೊತ್ತಂಬರಿ ಬೀಜ
  3. 1 ಟೀಸ್ಪೂನ್ ಜೀರಿಗೆ 
  4. 4 - 5 ಕರಿಮೆಣಸು
  5. 1 ಕತ್ತರಿಸಿದ ಈರುಳ್ಳಿ
  6. 10 ಬೇಳೆ ಸುಲಿದು ಮತ್ತು ಕತ್ತರಿಸಿದ ಬೆಳ್ಳುಳ್ಳಿ
  7. 1 ಕತ್ತರಿಸಿದ ಟೊಮೆಟೊ
  8. 1/2 ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು 
  9. 1/4 ಕಪ್ ತೆಂಗಿನ ತುರಿ
  10. ನಿಮ್ಮ ರುಚಿ ಪ್ರಕಾರ ಉಪ್ಪು

ಬಸ್ಸಾರು ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: 

  1. 1 ಕೆಂಪು ಮೆಣಸಿನಕಾಯಿ 
  2. 5 - 6 ಕರಿಬೇವಿನ ಎಲೆ
  3. 1/2 ಚಮಚ ಸಾಸಿವೆ 
  4. 2 ಟೀಸ್ಪೂನ್ ಅಡುಗೆ ಎಣ್ಣೆ 

ಬಸ್ಸಾರು ಪಲ್ಯಕ್ಕೆ ಬೇಕಾಗುವ ಪದಾರ್ಥಗಳು: 

  1. 1 ಕೆಂಪು ಮೆಣಸಿನಕಾಯಿ 
  2. 1/2 ಚಮಚ ಸಾಸಿವೆ 
  3. 1 ಟೀಸ್ಪೂನ್ ಉದ್ದಿನ ಬೇಳೆ 
  4. 1 ಟೀಸ್ಪೂನ್ ಕಡಲೆಬೇಳೆ 
  5. 5 - 6 ಕರಿಬೇವಿನ ಎಲೆ  
  6. 1 ಕತ್ತರಿಸಿದ ಈರುಳ್ಳಿ 
  7. 1 - 2 ಹಸಿಮೆಣಸು (ಬೇಕಾದಲ್ಲಿ) 
  8. 2 ಟೇಬಲ್ ಸ್ಪೂನ್  ತೆಂಗಿನ ತುರಿ
  9. 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  10. 2 ಟೀಸ್ಪೂನ್ ಅಡುಗೆ ಎಣ್ಣೆ

ಹುರುಳಿಕಾಳು ಬಸ್ಸಾರು ಮಾಡುವ ವಿಧಾನ:

  1. ಹುರುಳಿಕಾಳನ್ನು ತೊಳೆದು, ಒಂದು ದಿನ ನೆನೆಸಿ, ಮೊಳಕೆ ಕಟ್ಟಿಸಿ ಕೊಳ್ಳಿ. ಅರಿಶಿನ ಪುಡಿ ಮತ್ತು ನೀರಿನೊಂದಿಗೆ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಕರಿ ಮೆಣಸನ್ನು ಹುರಿಯಿರಿ. 
  3. ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಿ ಹುರಿಯಿರಿ.
  4. ನಂತರ ಕತ್ತರಿಸಿದ ಟೊಮೇಟೊ ಸೇರಿಸಿ ಹುರಿಯಿರಿ.
  5. ಕೊನೆಯಲ್ಲಿ ತೆಂಗಿನ ತುರಿ ಮತ್ತು ಹುಣಿಸೆರಸ ಸೇರಿಸಿ ಹುರಿದು ಸ್ಟವ್ ಆಫ್ ಮಾಡಿ. 
  6. ಬೇಯಿಸಿದ ಹುರುಳಿ ಕಾಳಿನಿಂದ ನೀರನ್ನು ಬಸಿದು ತೆಗೆಯಿರಿ. 
  7. ಮಿಕ್ಸಿಯಲ್ಲಿ ಹುರಿದ ಎಲ್ಲ ಪದಾರ್ಥಗಳು ಮತ್ತು ಬೇಯಿಸಿದ ಹುರುಳಿಕಾಳು ೨ ದೊಡ್ಡ ಚಮಚದಷ್ಟು ಹಾಕಿ ನುಣ್ಣನೆ ಅರೆದುಕೊಳ್ಳಿ. 
  8. ಅರೆದ ಮಸಾಲೆಯನ್ನು ಬಗ್ಗಿಸಿದ ನೀರಿಗೆ ಹಾಕಿ, ಬೇಕಾದಷ್ಟು ನೀರು ಸೇರಿಸಿ, ಉಪ್ಪು ಹಾಕಿ ಕುದಿಸಿ. 
  9. ಎಣ್ಣೆ, ಒಣಮೆಣಸು, ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಬಸ್ಸಾರು ತಯಾರಾಯಿತು. 
  10. ಇನ್ನೊಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ಮಾಡಿ. 
  11. ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ. 
  12. ನೀರು ಬಸಿದು ಉಳಿದ ಹುರುಳಿಕಾಳನ್ನು ಸೇರಿಸಿ ಮಗುಚಿ. ಬೇಕಾದಲ್ಲಿ ಉಪ್ಪು ಸೇರಿಸಿ. 
  13. ತೆಂಗಿನ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ ಸ್ಟೋವ್ ಆಫ್ ಮಾಡಿ. 
  14. ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಬಸ್ಸಾರು ಮತ್ತು ಪಲ್ಯವನ್ನು ಬಡಿಸಿ. 

ಸೋಮವಾರ, ಮೇ 8, 2017

Beetroot sambar recipe in Kannada | ಬೀಟ್ರೂಟ್ ಸಾಂಬಾರ್ ಮಾಡುವ ವಿಧಾನ

Beetroot sambar recipe in Kannada

Beetroot sambar recipe in Kannada | ಬೀಟ್ರೂಟ್ ಸಾಂಬಾರ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:

  1. 2 ಮಧ್ಯಮ ಗಾತ್ರದ ಬೀಟ್ರೂಟ್
  2. 2 ಮಧ್ಯಮ ಗಾತ್ರದ ಈರುಳ್ಳಿ
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  5. 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
  6. 2 ಟೀಸ್ಪೂನ್ ಉಪ್ಪು (ನಿಮ್ಮ ರುಚಿ ಪ್ರಕಾರ)

ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 - 3/4 ಕಪ್ ತೆಂಗಿನ ತುರಿ (ಸಾಂಬಾರ್ ದಪ್ಪ ಅವಲಂಬಿಸಿ)
  2. 2 - 4 ಕೆಂಪು ಮೆಣಸಿನಕಾಯಿ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/4 ಟೀಸ್ಪೂನ್ ಜೀರಿಗೆ
  6. 1/4 ಟೀಸ್ಪೂನ್ ಇಂಗು
  7. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವಿನ ಎಲೆ
  3. 1/4 ಟೀಸ್ಪೂನ್ ಸಾಸಿವೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಬೀಟ್ರೂಟ್ ಸಾಂಬಾರ್ ಮಾಡುವ ವಿಧಾನ:

  1. ಬೀಟ್ರೂಟನ್ನು ತೊಳೆದು, ಕತ್ತರಿಸಿ. ಈರುಳ್ಳಿಯನ್ನು ಸಿಪ್ಪೆ ತೆಗೆದು ಕತ್ತರಿಸಿ.
  2. ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಬೀಟ್ರೂಟ್ ಮತ್ತು ಈರುಳ್ಳಿಯನ್ನು ತೆಗೆದುಕೊಳ್ಳಿ. ನೀರು, ಅರಶಿನ ಪುಡಿ ಮತ್ತು ಉಪ್ಪು ಹಾಕಿ ಒಂದೆರಡು ವಿಷಲ್ ಮಾಡಿ. 
  3. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ ಮತ್ತು ಜೀರಿಗೆಯನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  4. ಉದ್ದಿನಬೇಳೆ ಹೊಂಬಣ್ಣಕ್ಕೆ ತಿರುಗಿದ ಕೂಡಲೇ ಇಂಗನ್ನು ಹಾಕಿ, ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ. 
  5. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ. 
  6. ಅರೆದ ಮಸಾಲೆಯನ್ನು ಬೇಯಿಸಿದ ತರಕಾರಿ ಇರುವ ಕುಕ್ಕರ್ ಗೆ ಹಾಕಿ. 
  7. ಉಪ್ಪು, ಬೆಲ್ಲ (ಬೇಕಾದಲ್ಲಿ) ಮತ್ತು ಹುಣಿಸೆರಸ ಹಾಕಿ.
  8. ನಿಮಗೆ ಸಾಂಬಾರ್ ಎಷ್ಟು ದಪ್ಪ ಬೇಕೋ ಅಷ್ಟು ನೀರು ಸೇರಿಸಿ, ಮಗುಚಿ, ಕುದಿಸಿ. 
  9. ಕೆಂಪು ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಭಾನುವಾರ, ಮೇ 7, 2017

Sihi appa or paddu recipe in Kannada | ಸಿಹಿ ಅಪ್ಪ ಅಥವಾ ಪಡ್ದು ಮಾಡುವ ವಿಧಾನ

Sihi appa or paddu recipe in Kannada

Sihi appa or paddu recipe in Kannada | ಸಿಹಿ ಅಪ್ಪ ಅಥವಾ ಪಡ್ದು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ ಹಿಟ್ಟು
  2. 1/2 ಕಪ್ ತೆಂಗಿನ ತುರಿ
  3. 1/2 ಕಪ್ ಪುಡಿ ಮಾಡಿದ ಬೆಲ್ಲ
  4. 1/2 ಕಪ್ ಕತ್ತರಿಸಿದ ಬಾಳೆಹಣ್ಣು
  5. 1 ಏಲಕ್ಕಿ
  6. ತುಪ್ಪ ಕಾಯಿಸಲು
  7. ಉಪ್ಪು ರುಚಿಗೆ ತಕ್ಕಷ್ಟು.


ಸಿಹಿ ಅಪ್ಪ ಅಥವಾ ಪಡ್ದು ಮಾಡುವ ವಿಧಾನ:

  1. ತೆಂಗಿನ ತುರಿ, ಬಾಳೆಹಣ್ಣು ಮತ್ತು ಏಲಕ್ಕಿಯನ್ನು ಅರೆಯಿರಿ. ಅರೆಯಲು ಒಂದೆರಡು ಟೇಬಲ್ ಚಮಚ ನೀರು ಸೇರಿಸಬಹುದು. 
  2. ನಂತರ ಅದಕ್ಕೆ ಪುಡಿಮಾಡಿದ ಬೆಲ್ಲ ಹಾಕಿ ನುಣ್ಣಗೆ ಅರೆಯಿರಿ. 
  3. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ, ಗಟ್ಟಿಯಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯುವುದಾದರೆ ಹಿಟ್ಟು ಗಟ್ಟಿಯಾಗಿರಲಿ, ನೀರು ಸೇರಿಸ ಬೇಡಿ. ಅಪ್ಪ ಅಥವಾ ಪಡ್ಡು ಪ್ಯಾನ್ ನಲ್ಲಿ ಮಾಡುವುದಾದರೆ ಸ್ವಲ್ಪ ನೀರು ಸೇರಿಸಿ, ಹಿಟ್ಟನ್ನು ಸ್ವಲ್ಪ ತೆಳು ಮಾಡಿಕೊಳ್ಳಿ. 
  4. ಪಡ್ಡು ತವಾವನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಅರ್ಧ ಚಮಚದಷ್ಟು ತುಪ್ಪ ಹಾಕಿ. ಬೇಕಾದಲ್ಲಿ ಬಾಣಲೆಯಲ್ಲಿ ಎಣ್ಣೆ  ಅಥವಾ ತುಪ್ಪ ಬಿಸಿಮಾಡಿ, ಕೈಯಲ್ಲಿ ಹಿಟ್ಟು ಹಾಕಿಯೂ ಕಾಯಿಸಬಹುದು. 
  5. ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. 
  6. ೧ ನಿಮಿಷದ ನಂತರ ಮುಚ್ಚಳ ತೆರೆದು ಅಪ್ಪವನ್ನು ತಿರುಗಿಸಿ ಹಾಕಿ.  ಇನ್ನೊಂದು ಬದಿಯೂ ಬೇಯಿಸಿ. ಸವಿದು ಆನಂದಿಸಿ. 


ಸೋಮವಾರ, ಮೇ 1, 2017

Palak palle or palak dal in Kannada | ಪಾಲಕ್ ಪಲ್ಲೆ ಮಾಡುವ ವಿಧಾನ

Palak palle or palak dal in Kannada

Palak palle in Kannada | ಪಾಲಕ್ ಪಲ್ಲೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ಕಟ್ಟು ಪಾಲಕ್ ಸೊಪ್ಪು
  2. 1 ಕಪ್ ತೊಗರಿಬೇಳೆ 
  3. 1 ಟೀಸ್ಪೂನ್ ಜೀರಿಗೆ 
  4. 1 ಟೀಸ್ಪೂನ್ ಸಾಸಿವೆ
  5. 1 ಕೆಂಪು ಮೆಣಸಿನಕಾಯಿ (ಬೇಕಾದಲ್ಲಿ) 
  6. ಚಿಟಿಕೆ ಅರಿಶಿನ ಪುಡಿ
  7. ಚಿಟಿಕೆ ಇಂಗು
  8. 4 - 5 ಕರಿಬೇವಿನ ಎಲೆ
  9. 1 - 2 ಹಸಿಮೆಣಸಿನಕಾಯಿ 
  10. 4 ಎಸಳು ಬೆಳ್ಳುಳ್ಳಿ 
  11. 1ಸೆಮೀ ಉದ್ದದ ಶುಂಠಿ 
  12. 1 ಈರುಳ್ಳಿ 
  13. 1 ಟೊಮೆಟೊ (ಬೇಕಾದಲ್ಲಿ) 
  14. 1/2 ಟೀ ಚಮಚ ಜೀರಿಗೆ ಪುಡಿ (ಬೇಕಾದಲ್ಲಿ) 
  15. 1 ಟೀಸ್ಪೂನ್ ನಿಂಬೆರಸ
  16. ಉಪ್ಪು ರುಚಿಗೆ ತಕ್ಕಷ್ಟು 

ಪಾಲಕ್ ಪಲ್ಲೆ ಮಾಡುವ ವಿಧಾನ:

  1. ತೊಗರಿಬೇಳೆ ತೊಳೆದು ಕುಕ್ಕರ್ ನಲ್ಲಿ ಮೆತ್ತಗೆ ಬೇಯಿಸಿಕೊಳ್ಳಿ. 
  2. ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಒಣಮೆಣಸು ಮತ್ತು ಜೀರಿಗೆಯನ್ನು ಹಾಕಿ.
  3. ಸಾಸಿವೆ ಸಿಡಿದ ಕೂಡಲೇ ಇಂಗು, ಅರಿಶಿನ ಮತ್ತು ಕರಿಬೇವು ಸೇರಿಸಿ. 
  4. ನಂತರ ಸೀಳಿದ ಹಸಿರು ಮೆಣಸಿನಕಾಯಿ, ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿ ಹುರಿಯಿರಿ. 
  5. ಕತ್ತರಿಸಿದ ಈರುಳ್ಳಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ  ಹುರಿಯಿರಿ.
  6. ಕತ್ತರಿಸಿದ ಟೊಮ್ಯಾಟೊ ಮತ್ತು ಉಪ್ಪು ಸೇರಿಸಿ. ಟೊಮ್ಯಾಟೊ ಮೆತ್ತಗಾಗುವವರೆಗೆ ಹುರಿಯಿರಿ.
  7. ಕತ್ತರಿಸಿದ ಪಾಲಕ್ ಸೊಪ್ಪು ಸೇರಿಸಿ ಹುರಿಯಿರಿ. ಮುಚ್ಚಳ ಮುಚ್ಚಿ ಬೇಯಿಸಿ. 
  8. ನಂತರ ಬೇಯಿಸಿದ ತೊಗರಿ ಬೇಳೆಯನ್ನು ಸೇರಿಸಿ. 
  9. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. 
  10. ಕೊನೆಯಲ್ಲಿ ಜೀರಿಗೆ ಪುಡಿ ಮತ್ತು ನಿಂಬೆ ರಸ ಸೇರಿಸಿ. 
  11.  ಜೋಳದ ರೊಟ್ಟಿ ಅಥವಾ ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

Related Posts Plugin for WordPress, Blogger...