Hesarukalu kosambari recipe in kannada | ಹೆಸರುಕಾಳು ಕೋಸಂಬರಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಮೊಳಕೆ ಕಟ್ಟಿದ ಹೆಸರುಕಾಳು
- 1/2 ಕಪ್ ತುರಿದ ಕ್ಯಾರಟ್
- 1/2 ಕಪ್ ಸಣ್ಣಗೆ ಹೆಚ್ಚಿದ ಸೌತೆಕಾಯಿ
- 1/4 ಕಪ್ ಹಸಿ ತೆಂಗಿನ ತುರಿ
- ಸ್ವಲ್ಪ ದಾಳಿಂಬೆ ಬೀಜ (ಬೇಕಾದಲ್ಲಿ)
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1/2 - 1 ಟೀಸ್ಪೂನ್ ನಿಂಬೆರಸ (ಅಥವಾ ಸಣ್ಣಗೆ ಹೆಚ್ಚಿದ ಒಂದು ಟೊಮೇಟೊ)
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಹಸಿಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- 2 ಟೀಸ್ಪೂನ್ ಅಡುಗೆ ಎಣ್ಣೆ
- ಚಿಟಿಕೆ ಇಂಗು
ಹೆಸರುಕಾಳು ಕೋಸಂಬರಿ ಮಾಡುವ ವಿಧಾನ:
- ಒಂದು ಬಟ್ಟಲಿನಲ್ಲಿ ಮೊಳಕೆ ಹೆಸರುಕಾಳು, ತುರಿದ ಕ್ಯಾರಟ್, ಕೊಚ್ಚಿದ ಸೌತೆಕಾಯಿ, ದಾಳಿಂಬೆ ಬೀಜ, ಕೊತ್ತಂಬರಿ ಸೊಪ್ಪು ಮತ್ತು ತೆಂಗಿನ ತುರಿಯನ್ನು ತೆಗೆದು ಕೊಳ್ಳಿ.
- ಸ್ವಲ್ಪ ಉಪ್ಪು ಹಾಕಿ. ಬೇಕಾದಲ್ಲಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
- ನಂತರ ಎಣ್ಣೆ, ಹಸಿರುಮೆಣಸಿನಕಾಯಿ, ಇಂಗು ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ಚೆನ್ನಾಗಿ ಕಲಸಿ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ