ಶನಿವಾರ, ಮೇ 29, 2021

Soft chapati dough in 1 minute in Kannada | 1 ನಿಮಿಷದಲ್ಲಿ ಚಪಾತಿ ಹಿಟ್ಟು ಕಲಸುವ ವಿಧಾನ

 

Soft chapati dough in 1 minute in Kannada

Soft chapati dough in 1 minute in Kannada | 1 ನಿಮಿಷದಲ್ಲಿ ಚಪಾತಿ ಹಿಟ್ಟು ಕಲಸುವ ವಿಧಾನ 

1 ನಿಮಿಷದಲ್ಲಿ ಚಪಾತಿ ಹಿಟ್ಟು ಕಲಸುವ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿ ಹಿಟ್ಟು
  2. 1/2 ಕಪ್ ನೀರು
  3. 2 ಟೀಸ್ಪೂನ್ ಎಣ್ಣೆ
  4. ಉಪ್ಪು ರುಚಿಗೆ ತಕ್ಕಷ್ಟು

1 ನಿಮಿಷದಲ್ಲಿ ಚಪಾತಿ ಹಿಟ್ಟು ಕಲಸುವ ವಿಧಾನ:

  1. ಗೋಧಿ ಹಿಟ್ಟು, ಒಂದು ಚಮಚ ಎಣ್ಣೆ ಮತ್ತು ಉಪ್ಪನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. 
  2. ಅಳತೆ ಪ್ರಕಾರ ನೀರನ್ನು ಒಮ್ಮೆ ಸೇರಿಸಿ.
  3. ನಂತರ ಕೈಯನ್ನು ಮಿಕ್ಸಿ ರೀತಿ ವೃತ್ತಾಕಾರವಾಗಿ ಸ್ವಲ್ಪ ಬಲ ಹಾಕಿ ತಿರುಗಿಸಿ. ಸುಮಾರು ಮೂವತ್ತು ಸೆಕೆಂಡ್ ಗಳಲ್ಲಿ ಹಿಟ್ಟು ಕಲಸಿ ಆಗುತ್ತದೆ. ಮೇಲಿನ ವಿಡಿಯೋ ಒಮ್ಮೆ ನೋಡಿ.  
  4. ಕೊನೆಯಲ್ಲಿ ಇನ್ನೊಂದು ಚಮಚ ಎಣ್ಣೆ ಸೇರಿಸಿ ಪುನಃ ಕಲಸಿ. 
  5. ಹದಿನೈದು ನಿಮಿಷ ನೆನೆಯಲು ಬಿಡಿ. 
  6. ನಂತರ ಕಲಸಿಟ್ಟ ಚಪಾತಿ ಹಿಟ್ಟಿನಿಂದ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಲಟ್ಟಿಸಿ.
  7. ಲಟ್ಟಿಸಿದ ಚಪಾತಿಯನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ.
  8. ನಿಮ್ಮಿಷ್ಟದ ಗೊಜ್ಜಿನೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...