Akki kadubu and saaru recipe in Kannada | ಅಕ್ಕಿ ಕಡುಬು ಮತ್ತು ಸಾರು ಮಾಡುವ ವಿಧಾನ
ಅಕ್ಕಿ ಕಡುಬು ಮತ್ತು ಸಾರು ವಿಡಿಯೋ
ಅಕ್ಕಿ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಸೋನಾ ಮಸೂರಿ ಅಕ್ಕಿ
- 2.5 ಕಪ್ ನೀರು
- ಉಪ್ಪು ರುಚಿಗೆ ತಕ್ಕಷ್ಟು
ಸಾರಿಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 2 ಟೊಮ್ಯಾಟೊ
- 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
- 1 ಟೀಸ್ಪೂನ್ ಬೆಲ್ಲ (ನಿಮ್ಮ ರುಚಿಗೆ ತಕ್ಕಷ್ಟು - ಆದರೆ ಹಾಕಲು ಮರೆಯದಿರಿ)
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 1 ಹಸಿರು ಮೆಣಸಿನಕಾಯಿ
- 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣಮೆಣಸಿನಕಾಯಿ
- 1/2 ಚಮಚ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- ಇಂಗು ಒಂದು ಚಿಟಿಕೆ
- 5 - 6 ಕರಿಬೇವಿನ ಎಲೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಅಕ್ಕಿ ಕಡುಬು ಮತ್ತು ಸಾರು ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಅಗಲವಾದ ಪಾತ್ರೆಯಲ್ಲಿ ಹರಡಿ ನೀರಾರಲು ಬಿಡಿ.
- ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಕಾಲ ಮಿಕ್ಸಿ ಮಾಡಿದರೆ ಸಾಕಾಗುತ್ತದೆ.
- ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ.
- ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ತರಿ ಅಥವಾ ರವೆಯನ್ನು ಹಾಕುತ್ತಾ ದೋಸೆ ಸಟ್ಟುಗ ಉಪಯೋಗಿಸಿ ಗಂಟಾಗದಂತೆ ಮಗುಚಿ.
- ಮಧ್ಯಮ ಉರಿಯಲ್ಲಿ ತೆಳು ಪೇಸ್ಟ್ ಆಗುವವವರೆಗೆ ಮಗುಚಿ. ತುಂಬ ಗಟ್ಟಿಯಾಗುವುದು ಬೇಡ. ತುಂಬ ಕಡಿಮೆ ಸಮಯ ಸಾಕಾಗುತ್ತದೆ.
- ತಟ್ಟೆ ಅಥವಾ ಪ್ಲೇಟ್ ಗೆ ತುಪ್ಪ ಹಚ್ಚಿ ಹಿಟ್ಟನ್ನು ಹಾಕಿ.
- ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ.
- ಸಾರು ಮಾಡಲು ಟೊಮ್ಯಾಟೊವನ್ನು ದೊಡ್ಡದಾಗಿ ಕತ್ತರಿಸಿ, ಮಿಕ್ಸಿಯಲ್ಲಿ ತೆಂಗಿನತುರಿಯೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಅರೆದ ಟೊಮ್ಯಾಟೊವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಅರಿಶಿನ ಪುಡಿ ಹಾಕಿ ಕುದಿಯಲು ಇಡಿ.
- ಬೆಲ್ಲ ಮತ್ತು ಹುಣಿಸೇಹಣ್ಣು ಸೇರಿಸಿ. ಕುದಿಯುವುದನ್ನು ಮುಂದುವರೆಸಿ.
- ಸೀಳಿದ ಹಸಿರುಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ಮಂದ ಉರಿಯಲ್ಲಿ ಕುದಿಯಲು ಬಿಡಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ.
- ಒಂದು ಚಮಚ ಸಾರಿನ ಪುಡಿ ಹಾಕಿ ಕುದಿಸಿ. ಸ್ಟವ್ ಆಫ್ ಮಾಡಿ
- ಎಣ್ಣೆ, ಒಣಮೆಣಸಿನಕಾಯಿ, ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವಿನ ಎಲೆಯ ಒಗ್ಗರಣೆ ಮಾಡಿ.
- ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ. ಬಿಸಿಯಾದ ಕಡುಬಿನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ