Thili saaru recipe in Kannada | ತಿಳಿ ಸಾರು ಮಾಡುವ ವಿಧಾನ
ತಿಳಿ ಸಾರು ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 1/2 ಕಪ್ ತೊಗರಿಬೇಳೆ
- 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 1 ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- ಚಿಟಿಕೆ ಅರಿಶಿನ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- ಸ್ವಲ್ಪ ಕರಿಬೇವು
- 1 ಟೀಸ್ಪೂನ್ ಅಡುಗೆ ಎಣ್ಣೆ
- 4 - 5 ಕಪ್ ನೀರು
ಸಾರಿನ ಪುಡಿಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 2 ಚಮಚ ಕೊತ್ತಂಬರಿ ಬೀಜ ಅಥವಾ ಧನಿಯಾ
- 4 - 6 ಒಣಮೆಣಸಿನಕಾಯಿ
- 1/2 ಟೀಸ್ಪೂನ್ ಜೀರಿಗೆ
- 1/4 ಟೀಸ್ಪೂನ್ ಸಾಸಿವೆ
- 10 - 12 ಮೆಂತ್ಯಕಾಳು
- 1/2 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1 ಒಣಮೆಣಸಿನಕಾಯಿ
- ಇಂಗು ಒಂದು ದೊಡ್ಡ ಚಿಟಿಕೆ
- 5 - 6 ಕರಿಬೇವಿನ ಎಲೆ
- 1 ಟೇಬಲ್ ಚಮಚ ತುಪ್ಪ ಅಥವಾ ಎಣ್ಣೆ
ತಿಳಿ ಸಾರು ಮಾಡುವ ವಿಧಾನ:
- ತೊಗರಿಬೇಳೆಯನ್ನು ಚೆನ್ನಾಗಿ ತೊಳೆಯಿರಿ.
- ಬೇಳೆಯ ಎರಡು ಪಟ್ಟು ನೀರು (ಒಂದು ಕಪ್), ಅರಿಶಿನ ಮತ್ತು ಐದಾರು ಹನಿ ಎಣ್ಣೆಯೊಂದಿಗೆ ಮೆತ್ತಗೆ ಬೇಯಿಸಿಕೊಳ್ಳಿ.
- ನಂತ್ರ ಬೇಳೆಯನ್ನು ಮಸಿದು, ಉಳಿದ ನೀರನ್ನು ಹಾಕಿ ಚೆನ್ನಾಗಿ ಕುದಿಸಿ, ಕಟ್ಟು ತಯಾರಿಸಿಕೊಳ್ಳಿ.
- ಆ ಸಮಯದಲ್ಲಿ ಒಂದು ಬಾಣಲೆಯಲ್ಲಿ ಕೊತ್ತಂಬರಿ ಬೀಜ, ಸಾಸಿವೆ, ಜೀರಿಗೆ, ಮೆಂತ್ಯ ಮತ್ತು ಒಣಮೆಣಸಿನಕಾಯಿಯನ್ನು ಅರ್ಧ ಚಮಚ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ.
- ಬಿಸಿ ಆರಿದ ಮೇಲೆ ಪುಡಿ ಮಾಡಿಕೊಳ್ಳಿ.
- ಬೇಳೆಯ ಕಟ್ಟಿಗೆ ಉಪ್ಪು, ಹುಳಿ ಮತ್ತು ಬೆಲ್ಲವನ್ನು ನಿಮ್ಮ ರುಚಿಗೆ ತಕ್ಕಂತೆ ಹಾಕಿ ಕುದಿಯಲು ಇಡಿ.
- ದಪ್ಪ ಎನಿಸಿದಲ್ಲಿ ನೀರು ಸೇರಿಸಿ ಕುದಿಸಿ.
- ತಯಾರಿಸಿದ ಮಸಾಲೆ ಪುಡಿ ಹಾಕಿ ಮಗುಚಿ, ಚೆನ್ನಾಗಿ ಕುದಿಸಿ.
- ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಹಾಕಿ. ಸ್ಟವ್ ಆಫ್ ಮಾಡಿ.
- ಎಣ್ಣೆ, ಒಣಮೆಣಸಿನಕಾಯಿ, ಸಾಸಿವೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ.
- ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ