ಬುಧವಾರ, ಮೇ 19, 2021

Kucchalakki ganji recipe in Kannada | ಕುಚ್ಚಲಕ್ಕಿ ಗಂಜಿ ಮಾಡುವ ವಿಧಾನ

 

Kucchalakki ganji recipe in Kannada

Kucchalakki ganji recipe in Kannada | ಕುಚ್ಚಲಕ್ಕಿ ಗಂಜಿ ಮಾಡುವ ವಿಧಾನ 

ಅಕ್ಕಿ ಕಡುಬು ಮತ್ತು ಸಾರು ವಿಡಿಯೋ

ಕುಚ್ಚಲಕ್ಕಿ ಗಂಜಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. ಅಗತ್ಯವಿದ್ದಷ್ಟು ಕುಚ್ಚಲಕ್ಕಿ
  2. 4 - 5 ಪಟ್ಟು ನೀರು 
  3. ತುಪ್ಪ ಬಡಿಸಲು 
  4. ಉಪ್ಪಿನಕಾಯಿ ಬಡಿಸಲು
  5. ಉಪ್ಪು ಬಡಿಸಲು

ಕುಚ್ಚಲಕ್ಕಿ ಗಂಜಿ ಮಾಡುವ ವಿಧಾನ:

  1. ಕುಚ್ಚಲಕ್ಕಿಯನ್ನು ಚೆನ್ನಾಗಿ ತೊಳೆದು, ನೀರು ಬಗ್ಗಿಸಿ. 
  2. ಕನಿಷ್ಠ ಮೂರು ಬಾರಿ ತೊಳೆಯಬೇಕು. ಅಕ್ಕಿ ತೊಳೆಯುವಾಗ ಅಂಟು ಎನಿಸಿದರೆ ಒಂದು ಬಾರಿ ಬಿಸಿ ನೀರು ಹಾಕಿ ತೊಳೆಯಿರಿ.
  3. ನಂತರ ನಾಲ್ಕು ಪಟ್ಟು ನೀರು ಸೇರಿಸಿ, ಕುಕ್ಕರ್ ನಲ್ಲಿ 2 - 3 ವಿಷಲ್ ಮಾಡಿ.
  4. ಆಮೇಲೆ ಅಕ್ಕಿ ಬೆಂದಿದೆಯಾ ನೋಡಿ. ಕುಚ್ಚಲಕ್ಕಿ ಬೇಗ ಬೇಯುವುದಿಲ್ಲ. 
  5. ಹಾಗಾಗಿ ಅಗತ್ಯವಿದ್ದಲ್ಲಿ ಪುನಃ ಸ್ವಲ್ಪ ನೀರು ಸೇರಿಸಿ  ಮತ್ತೆ 2 - 3 ವಿಷಲ್ ಮಾಡಿ.
  6. ಬಿಸಿ ಬಿಸಿ ಬಡಿಸಿ. ಸಾಧಾರಣವಾಗಿ ಉಪ್ಪು, ತುಪ್ಪ ಮತ್ತು ಉಪ್ಪಿನಕಾಯಿಯೊಂದಿಗೆ ಬಡಿಸುತ್ತಾರೆ.  
  7. ನಿಮ್ಮಿಷ್ಟದಂತೆ ಉಪ್ಪಿನಕಾಯಿ-ಮೊಸರು, ಖಾರ ಚಟ್ನಿ, ಪಲ್ಯ, ಗೊಜ್ಜು ಹೀಗೆ ಬೇರೆ ಯಾವುದರ ಜೊತೆ ಬೇಕಾದರೂ ಬಡಿಸಬಹುದು. ಗಂಜಿಯ ನೀರು ಬಗ್ಗಿಸಬಾರದು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...