Halasinakayi huli or sambar recipe in Kannada | ಹಲಸಿನಕಾಯಿ ಹುಳಿ ಅಥವಾ ಸಾಂಬಾರ್ ಮಾಡುವ ವಿಧಾನ
ಹಲಸಿನಕಾಯಿ ಹುಳಿ ಅಥವಾ ಸಾಂಬಾರ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಎಳೆಯ ಹಲಸಿನಕಾಯಿ
- 4 ಟೇಬಲ್ ಚಮಚ ತೊಗರಿಬೇಳೆ
- ದೊಡ್ಡ ಚಿಟಿಕೆ ಅರಿಶಿನ ಪುಡಿ
- 2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
- 1 ಟೀಸ್ಪೂನ್ ಬೆಲ್ಲ
- ಗೋಲಿ ಗಾತ್ರದ ಹುಣಿಸೇಹಣ್ಣು
ಮಸಾಲೆಗೆ ಬೇಕಾಗುವ ಪದಾರ್ಥಗಳು:
- 1/2 ಕಪ್ ತೆಂಗಿನ ತುರಿ
- 4 5 ಒಣ ಮೆಣಸಿನಕಾಯಿ
- 1 ಟೀಸ್ಪೂನ್ ಉದ್ದಿನ ಬೇಳೆ
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 1/2 ಟೀಸ್ಪೂನ್ ಜೀರಿಗೆ
- 7 - 8 ಮೆಂತ್ಯ ಕಾಳು
- 1/4 ಟೀಸ್ಪೂನ್ ಸಾಸಿವೆ
- ಒಂದು ಚಿಟಿಕೆ ಇಂಗು
- ಸ್ವಲ್ಪ ಕರಿಬೇವು
- 1/2 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಕೆಂಪು ಮೆಣಸಿನಕಾಯಿ
- 5 - 6 ಕರಿಬೇವು
- 1/4 ಟೀಸ್ಪೂನ್ ಸಾಸಿವೆ
- 4 - 5 ಜಜ್ಜಿದ ಬೆಳ್ಳುಳ್ಳಿ
- 1 ಟೀಸ್ಪೂನ್ ಅಡುಗೆ ಎಣ್ಣೆ
ಹಲಸಿನಕಾಯಿ ಹುಳಿ ಅಥವಾ ಸಾಂಬಾರ್ ಮಾಡುವ ವಿಧಾನ:
- ತೊಗರಿಬೇಳೆಯನ್ನು ಬೇಗ ಬೇಯುವ ಸಲುವಾಗಿ ಹದಿನೈದು ನಿಮಿಷ ನೆನೆಸಿಡಿ.
- ಹಲಸಿನಕಾಯಿ ಹೊರಗಿನ ಸಿಪ್ಪೆ ಮತ್ತು ಒಳಗಿನ ತಿರುಳು ತೆಗೆದು ಕತ್ತರಿಸಿ ನೀರಿನಲ್ಲಿ ಹಾಕಿಡಿ.
- ನಂತ್ರ ಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಳ್ಳಿ. ನೀರಿನಲ್ಲಿ ಹಾಕಿಟ್ಟ ಹಲಸಿನಕಾಯಿ ಸೇರಿಸಿ. ಒಂದು ಚಮಚ ಉಪ್ಪು ಮತ್ತು ಚಿಟಿಕೆ ಅರಶಿನ ಪುಡಿ ಹಾಕಿ.
- ಅಗತ್ಯವಿದ್ದಷ್ಟು ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
- ಆ ಸಮಯದಲ್ಲಿ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಸಾಸಿವೆ ಮತ್ತು ಮೆಂತೆಯನ್ನು 1/2 ಟೀಸ್ಪೂನ್ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬೇಳೆಗಳು ಕಂದು ಬಣ್ಣಕ್ಕೆ ಬರುವರೆಗೆ ಹುರಿಯಿರಿ.
- ಸ್ಟವ್ ಆಫ್ ಮಾಡಿ, ಕರಿಬೇವು ಮತ್ತು ಇಂಗು ಸೇರಿಸಿ ಹುರಿಯಿರಿ.
- ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ.
- ಬೆಲ್ಲ, ಉಪ್ಪು ಮತ್ತು ಹುಣಿಸೆ ರಸ ಸೇರಿಸಿ. ನಿಮ್ಮ ರುಚಿ ಪ್ರಕಾರ ಉಪ್ಪು, ಸಿಹಿ ಮತ್ತು ಹುಳಿಯನ್ನು ಸರಿಮಾಡಿಕೊಳ್ಳಿ.
- ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ. ಸ್ಟವ್ ಆಫ್ ಮಾಡಿ.
- ಒಣ ಮೆಣಸು, ಸಾಸಿವೆ, ಜಜ್ಜಿದ ಬೆಳ್ಳುಳ್ಳಿ ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ