Choco bar recipe in Kannada | ಬಿಸ್ಕೆಟ್ ಚಾಕೋ ಬಾರ್ ಮಾಡುವ ವಿಧಾನ
ಚಾಕೋ ಬಾರ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್
- 2 ಸಣ್ಣ ಪ್ಯಾಕೆಟ್ ಚಾಕೋಚಿಪ್ ಬಿಸ್ಕತ್ (5ರೂ. ನ ಹ್ಯಾಪಿ ಹ್ಯಾಪಿ)
- 1/4 - 1/2 ಕಪ್ ಹಾಲು
- 1- 2 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
ಬಿಸ್ಕೆಟ್ ಚಾಕೋ ಬಾರ್ ಮಾಡುವ ವಿಧಾನ:
- ಹಾಲನ್ನು ಕುದಿಸಿ ಆರಿಸಿಕೊಳ್ಳಿ.
- ಬಿಸ್ಕತ್ ಪ್ಯಾಕ್ ತೆರೆದು ಬಿಸ್ಕತ್ ಅನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ.
- ರುಚಿಗೆ ತಕ್ಕಂತೆ ಸಕ್ಕರೆ ಸೇರಿಸಿ. ಸಕ್ಕರೆ ಹಾಕದೆಯೂ ಮಾಡಬಹುದು.
- ಬಿಸ್ಕತ್ಕು ಅನ್ನು ಪುಡಿಮಾಡಿಕೊಳ್ಳಿ.
- ಹಾಲು ಹಾಕಿ ಪುನಃ ಅರೆಯಿರಿ. ದಪ್ಪ ಮಿಲ್ಕ್ ಶೇಕ್ ನಂತಾಗಲಿ.
- ಈಗ ಲೋಟ ತೆಗೆದುಕೊಂಡು ಅದರಲ್ಲಿ ಖಾಲಿ ಬಿಸ್ಕತ್ ಕವರ್ ಇಡಿ.
- ಅದಕ್ಕೆ ಅರೆದ ಮಿಶ್ರಣವನ್ನು ಸುರಿಯಿರಿ. ಪೇಪರ್ ಕಪ್ ಬೇಕಾದರೂ ಬಳಸಬಹುದು.
- ಒಂದು ಚಮಚ ಅಥವಾ ಕಡ್ಡಿ ಇಟ್ಟು ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ. ಸುಮಾರು ೪ - ೫ ಘಂಟೆ ಬೇಕಾಗಬಹುದು.ನಾನು ರಾತ್ರೆಯಿಡೀ ಇಟ್ಟಿದ್ದೆ.
- ಗಟ್ಟಿಯಾದ ನಂತರ, ಬಿಸ್ಕತ್ ಕವರ್ ಅನ್ನು ಹರಿದು ತೆಗೆಯಿರಿ.
- ರುಚಿಯಾದ ಚಾಕೋ ಬಾರ್ ನ್ನು ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ