Haalina ice candy recipe in Kannada | ಹಾಲಿನ ಐಸ್ ಕ್ಯಾಂಡಿ ಮಾಡುವ ವಿಧಾನ
ಹಾಲಿನ ಐಸ್ ಕ್ಯಾಂಡಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್
- 2.5 ಕಪ್ ಹಾಲು
- 2 ಟೇಬಲ್ ಚಮಚ ಗೋಧಿಹಿಟ್ಟು
- 1/4 ಕಪ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- ಐಸ್ ಕ್ಯಾಂಡಿ ಅಚ್ಚು ಅಥವಾ ಲೋಟ
ಹಾಲಿನ ಐಸ್ ಕ್ಯಾಂಡಿ ಐಸ್ ಕ್ಯಾಂಡಿ ಮಾಡುವ ವಿಧಾನ:
- ಹಾಲನ್ನು ಕುದಿಸಿ ಕೆನೆ ಎತ್ತಿಟ್ಟುಕೊಳ್ಳಿ.
- ಅರ್ಧ ಲೋಟ ಹಾಲಿಗೆ ಗೋಧಿ ಹಿಟ್ಟು ಹಾಕಿ ಕಲಸಿಟ್ಟುಕೊಳ್ಳಿ.
- ಒಂದು ಕಪ್ ಹಾಲನ್ನುಕುದಿಯಲು ಇಡಿ.
- ಕುದಿಯಲು ಶುರು ಆದ ಕೂಡಲೇ ಸಕ್ಕರೆ ಮತ್ತು ಗೋಧಿಹಿಟ್ಟು ಕಲಸಿದ ಹಾಲು ಸೇರಿಸಿ.
- ಒಂದೈದು ನಿಮಿಷ ಸಣ್ಣ ಉರಿಯಲ್ಲಿ ಮಗುಚುತ್ತಾ ಕುದಿಸಿ.
- ಬಿಸಿ ಆರಿದ ಮೇಲೆ ಮಿಕ್ಸಿಜಾರಿಗೆ ಹಾಕಿ. ಇನ್ನೊಂದು ಕಪ್ ಹಾಲು, ಎತ್ತಿಟ್ಟ ಕೆನೆ ಸೇರಿಸಿ. ಬೇಕಾದಲ್ಲಿ ಜಾಸ್ತಿ ಕೆನೆ ಅಥವಾ ಫ್ರೆಶ್ ಕ್ರೀಮ್ ಇದ್ದಲ್ಲಿ ಸ್ವಲ್ಪ ಸೇರಿಸಬಹುದು.
- ಸ್ವಲ್ಪ ಹೊತ್ತು ಮಿಕ್ಸಿ ಮಾಡಿ, ಕುಲ್ಫಿ ಅಥವಾ ಐಸ್ ಕ್ಯಾಂಡಿ ಮೌಲ್ಡ್ ಗೆ ಹಾಕಿ ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ. ಸುಮಾರು ೪ - ೫ ಘಂಟೆ ಬೇಕಾಗಬಹುದು.ನಾನು ರಾತ್ರೆಯಿಡೀ ಇಟ್ಟಿದ್ದೆ.
- ಐಸ್ ಕ್ಯಾಂಡಿ ಅಚ್ಚು ಇಲ್ಲದಿದ್ದಲ್ಲಿ ಸಣ್ಣ ಪೇಪರ್ ಕಪ್ ಅಥವಾ ಸ್ಟೀಲ್ ಲೋಟಕ್ಕೆ ಹಾಕಿ, ಐಸ್ ಕ್ಯಾಂಡಿ ಕಡ್ಡಿಯನ್ನು ಇಟ್ಟು, ನಂತರ ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ.
- ಗಟ್ಟಿಯಾದ ನಂತರ, ಅಚ್ಚು ಅಥವಾ ಲೋಟವನ್ನು ಕೆಲವು ಸೆಕೆಂಡ್ ಗಳ ಕಾಲ ನೀರಿನಲ್ಲಿಡಿ ಅಥವಾ ನಲ್ಲಿ(ಟ್ಯಾಪ್) ನೀರಿನಡಿ ಹಿಡಿಯಿರಿ. ಆಮೇಲೆ ಐಸ್ ಕ್ಯಾಂಡಿಯನ್ನು ಜಾಗ್ರತೆಯಿಂದ ಹೊರ ತೆಗೆದು ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ