Drakshi hannina sasive recipe in kannada |ದ್ರಾಕ್ಷಿ ಹಣ್ಣಿನ ಸಾಸಿವೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 2 ಕಪ್ ದ್ರಾಕ್ಷಿಹಣ್ಣು
- 1 ಲಿಂಬೇಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- ಉಪ್ಪು ರುಚಿಗೆ ತಕ್ಕಷ್ಟು.
ಅರೆಯಲು ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 2 - 4 ಒಣಮೆಣಸಿನಕಾಯಿ
- 1/2 ಕಪ್ ತೆಂಗಿನತುರಿ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 2 ಟೀಸ್ಪೂನ್ ಅಡುಗೆ ಎಣ್ಣೆ
- 4 - 5 ಕರಿಬೇವಿನ ಎಲೆ
- 1/2 ಟೀಸ್ಪೂನ್ ಸಾಸಿವೆ
ದ್ರಾಕ್ಷಿ ಹಣ್ಣಿನ ಸಾಸಿವೆ ಮಾಡುವ ವಿಧಾನ:
- ದ್ರಾಕ್ಷಿ ಹಣ್ಣನ್ನು ಆರಿಸಿ ತೊಳೆಯಿರಿ.
- ನಂತರ 2 - 4 ಭಾಗಗಳಾಗಿ ಕತ್ತರಿಸಿ. ಬೀಜ ಇದ್ದರೆ ತೆಗೆಯಿರಿ.
- ಆಮೇಲೆ ಕತ್ತರಿಸಿದ ದ್ರಾಕ್ಷಿಯನ್ನು ಒಂದು ಪಾತ್ರೆಗೆ ಹಾಕಿ.
- ಉಪ್ಪು, ಅರಿಶಿನ ಮತ್ತು 1/4 ಕಪ್ ನೀರು ಹಾಕಿ ಬೇಯಿಸಿ. 5 - 6 ನಿಮಿಷ ಬೇಯಿಸಿದರೆ ಸಾಕು.
- ನಂತರ ರುಚಿ ನೋಡಿ, ಅಗತ್ಯವಿದ್ದಷ್ಟು ಬೆಲ್ಲ ಸೇರಿಸಿ. ಬೇಕಾದಲ್ಲಿ ಹುಣಿಸೆಹಣ್ಣನ್ನೂ ಸೇರಿಸಬಹುದು. ಸಣ್ಣ ಉರಿಯಲ್ಲಿ ಕುದಿಯುವುದನ್ನು ಮುಂದುವರೆಸಿ.
- ಅದೇ ಸಮಯದಲ್ಲಿ ಸಾಸಿವೆ, ಒಣಮೆಣಸಿನಕಾಯಿ ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ.
- ಅರೆದ ಮಿಶ್ರಣವನ್ನು ಬೇಯಿಸಿದ ದ್ರಾಕ್ಷಿ ಇರುವ ಪಾತ್ರೆಗೆ ಹಾಕಿ.
- ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಚೆನ್ನಾಗಿ ಕಲಸಿ. ಒಂದು ಕುದಿ ಬಂದ ಕೂಡಲೇ ಸ್ಟವ್ ಆಫ್ ಮಾಡಿ.
- ಎಣ್ಣೆ, ಒಣಮೆಣಸು, ಕರಿಬೇವು ಮತ್ತು ಸಾಸಿವೆ ಒಗ್ಗರಣೆ ಕೊಡಿ. ದೋಸೆ ಅಥವಾ ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ