Aviyal recipe in Kannada | ಅವಿಯಲ್ ಮಾಡುವ ವಿಧಾನ
ಅವಿಯಲ್ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್)
- 1/2 ಕೆಜಿ ಮಿಶ್ರ ತರಕಾರಿಗಳು (ಈ ತರಕಾರಿಗಳಲ್ಲಿ ಆರಿಸಿ - ಸುವರ್ಣಗಡ್ಡೆ, ಕ್ಯಾರೆಟ್, ಬಾಳೆಕಾಯಿ, ನುಗ್ಗೆಕಾಯಿ, ಸಾಂಬರ್ ಸೌತೆಕಾಯಿ, ಬೂದು ಕುಂಬಳಕಾಯಿ, ಬೀನ್ಸ್, ಅಲಸಂಡೆ, ತೊಂಡೆಕಾಯಿ, ಪಡವಲಕಾಯಿ, ಆಲೂಗಡ್ಡೆ)
- ಒಂದು ಚಿಟಿಕೆ ಅರಶಿನ ಪುಡಿ
- ಒಂದು ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಅರೆಯಲು ಬೇಕಾಗುವ ಪದಾರ್ಥಗಳು:
- 1 ಕಪ್ ತೆಂಗಿನ ತುರಿ
- 1 ಟೀಸ್ಪೂನ್ ಜೀರಿಗೆ
- 2 ಹಸಿರು ಮೆಣಸಿನಕಾಯಿ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1 ಕೆಂಪು ಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಅವಿಯಲ್ ಮಾಡುವ ವಿಧಾನ:
- ಬಾಳೆಕಾಯಿ ಮತ್ತು ಸುವರ್ಣಗಡ್ಡೆಯನ್ನು ಸಿಪ್ಪೆ ತೆಗೆದು ನೀರಿನಲ್ಲಿ ಹಾಕಿಡಿ.
- ಉಳಿದ ತರಕಾರಿಗಳನ್ನು ಕತ್ತರಿಸಿಟ್ಟುಕೊಳ್ಳಿ (ನಾನು ಕ್ಯಾರೆಟ್, ನುಗ್ಗೆಕಾಯಿ, ಬೀನ್ಸ್, ತೊಂಡೆಕಾಯಿ, ಪಡವಲಕಾಯಿ ಉಪಯೋಗಿಸಿದ್ದೇನೆ).
- ಜೀರಿಗೆ, ತೆಂಗಿನ ತುರಿ ಮತ್ತು ಹಸಿರುಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ಒಂದು ಪಾತ್ರೆಯಲ್ಲಿ ಒಂದು ಟೀಸ್ಪೂನ್ ಎಣ್ಣೆ ಹಾಕಿ, ಕತ್ತರಿಸಿದ ತರಕಾರಿಗಳನ್ನು ಹಾಕಿ.
- ಅರಿಶಿನ ಮತ್ತು ಉಪ್ಪು ಹಾಕಿ. ಒಮ್ಮೆ ಮಗುಚಿ. ಎಣ್ಣೆ ಹಾಕುವುದರಿಂದ ತರಕಾರಿ ಮುದ್ದೆ ಆಗುವುದಿಲ್ಲ.
- ಆಮೇಲೆ ಒಂದು ಕಪ್ ನಷ್ಟು ನೀರು ಹಾಕಿ, ತರಕಾರಿಗಳನ್ನು ಬೇಯಿಸಿ. ಆದರೆ ಮುದ್ದೆಯಾಗುವಷ್ಟು ಬೇಯಿಸಬೇಡಿ.
- ಬೇಯಿಸಿದ ತರಕಾರಿಗೆ ಅರೆದ ಮಸಾಲೆ ಹಾಕಿ. ಹೆಚ್ಚು ನೀರು ಹಾಕಬೇಡಿ. ಅವಿಯಲ್ ಸ್ವಲ್ಪ ಗಟ್ಟಿಯಾಗಿರಬೇಕು.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಒಂದೈದು ನಿಮಿಷ ಕುದಿಸಿ, ಸ್ಟವ್ ಆಫ್ ಮಾಡಿ.
- ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ.
Wow - thanks
ಪ್ರತ್ಯುತ್ತರಅಳಿಸಿ