Broken wheat bisi bele bath Recipe in Kannada | ಗೋಧಿ ನುಚ್ಚು ಬಿಸಿ ಬೇಳೆ ಬಾತ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್)
- 1/4 ಕಪ್ ಹೆಸರುಬೇಳೆ
- 1/4 ಕಪ್ ತೊಗರಿಬೇಳೆ
- 3/4 ಕಪ್ ಗೋಧಿ ನುಚ್ಚು
- 2 ಟೇಬಲ್ ಸ್ಪೂನ್ ನೆಲಗಡಲೆ ಅಥವಾ ಶೇಂಗಾ
- 5 ಬೀನ್ಸ್
- 1 ಸಣ್ಣ ಕ್ಯಾರೆಟ್
- 1 ಸಣ್ಣ ಆಲೂಗಡ್ಡೆ
- 1 ಸಣ್ಣ ಟೊಮೇಟೊ
- 2 ಟೇಬಲ್ ಸ್ಪೂನ್ ಹಸಿ ಅಥವಾ ನೆನೆಸಿದ ಬಟಾಣಿ
- 1 ಟೊಮ್ಯಾಟೋ
- 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೆ ಹಣ್ಣು
- 1 ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
- ದೊಡ್ಡ ಚಿಟಿಕೆ ಅರಿಶಿನ ಪುಡಿ
- 2 ಟೇಬಲ್ ಸ್ಪೂನ್ ಬಿಸಿಬೇಳೆ ಬಾತ್ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಕಡ್ಲೆ ಬೇಳೆ
- 2 ಟೀಸ್ಪೂನ್ ಉದ್ದಿನ ಬೇಳೆ
- 8-10 ಗೋಡಂಬಿ
- 7 - 8 ಕರಿಬೇವಿನ ಎಲೆ
- ದೊಡ್ಡ ಚಿಟಿಕೆ ಇಂಗು
- ದೊಡ್ಡ ಚಿಟಿಕೆ ಅರಿಶಿನ
- 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ / ತುಪ್ಪ
ಗೋಧಿ ನುಚ್ಚು ಬಿಸಿ ಬೇಳೆ ಬಾತ್ ಮಾಡುವ ವಿಧಾನ:
- ಬೀನ್ಸ್, ಕ್ಯಾರಟ್ ಮತ್ತು ಆಲೂಗಡ್ಡೆಯನ್ನು ಕತ್ತರಿಸಿಟ್ಟುಕೊಳ್ಳಿ.
- ಒಂದು ಪಾತ್ರೆಯಲ್ಲಿ ಹೆಸರುಬೇಳೆ, ತೊಗರಿಬೇಳೆ ಮತ್ತು ನೆಲಗಡಲೆಯನ್ನು ತೊಳೆದು ಬೇಯಿಸಿ.
- ಅದೇ ಕುಕ್ಕರ್ ಗೆ ಕತ್ತರಿಸಿದ ತರಕಾರಿ, ಕತ್ತರಿಸಿದ ಟೊಮೇಟೊ, ಹಸಿ ಬಟಾಣಿ ಮತ್ತು ಗೋಧಿ ನುಚ್ಚು ಸೇರಿಸಿ. 2 ವಿಷಲ್ ಮಾಡಿ ಬೇಯಿಸಿ.
- ಒಂದು ಬಾಣಲೆ ತೆಗೆದುಕೊಂಡು ಎಣ್ಣೆ, ಶೇಂಗಾ, ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಬಳಸಿಕೊಂಡು ಒಗ್ಗರಣೆ ಮಾಡಿ.
- ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಕರಿಬೇವಿನ ಸೊಪ್ಪು ಸೇರಿಸಿ. ಇಂಗು ಮತ್ತು ಅರಿಶಿನ ಪುಡಿ ಸೇರಿಸಿ.
- ಬೇಕಾದಲ್ಲಿ ಈರುಳ್ಳಿ ಮತ್ತು ಕಾಪ್ಸಿಕಮ್ ಹಾಕಿ ಹುರಿಯಬಹುದು. ನಾನು ಹಾಕಲಿಲ್ಲ.
- ಕೂಡಲೇ ಬಿಸಿಬೇಳೆ ಬಾತ್ ಪುಡಿ, ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ.
- ಸ್ಟೋವ್ ಆಫ್ ಮಾಡಿ.
- ನಂತರ ಬೇಯಿಸಿದ ತರಕಾರಿ, ಗೋಧಿ ನುಚ್ಚು ಮತ್ತು ಬೇಳೆಯನ್ನು ಹಾಕಿ. ಬೇಕಾದಷ್ಟು ನೀರು ಸೇರಿಸಿ, ಚೆನ್ನಾಗಿ ಮಗುಚಿ, ಒಂದು ಕುದಿ ಬರಿಸಿ. ಸ್ಟವ್ ಆಫ್ ಮಾಡಿ. ಬಿಸಿ ಬಿಸಿಯಾಗಿ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ