Instant idli recipe in Kannada | ದಿಢೀರ್ ಅವಲಕ್ಕಿ ಇಡ್ಲಿ ಮಾಡುವ ವಿಧಾನ
ದಿಢೀರ್ ಅವಲಕ್ಕಿ ಇಡ್ಲಿ ವೀಡಿಯೊ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅವಲಕ್ಕಿ
- 1 ಕಪ್ ಮೊಸರು (ಸ್ವಲ್ಪ ಹುಳಿ ಇರಲಿ)
- 3/4 ಕಪ್ ಇಡ್ಲಿರವೇ
- ಚಿಟಿಕೆ ಅಡುಗೆ ಸೋಡಾ (ಬೇಕಾದಲ್ಲಿ)
- ಉಪ್ಪು ನಿಮ್ಮ ರುಚಿ ಪ್ರಕಾರ
ದಿಢೀರ್ ಅವಲಕ್ಕಿ ಇಡ್ಲಿ ಮಾಡುವ ವಿಧಾನ:
- ಅವಲಕ್ಕಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
- ಒಂದು ಕಪ್ ಮೊಸರು ಹಾಕಿ ಕಲಸಿ, ಐದು ನಿಮಿಷ ನೆನೆಯಲು ಬಿಡಿ.
- ಆಮೇಲೆ ಅದನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ನುಣ್ಣನೆ ಅರೆಯಿರಿ.
- ಪಾತ್ರೆಗೆ ಬಗ್ಗಿಸಿ 3/4 ಕಪ್ ಇಡ್ಲಿರವೇ ಸೇರಿಸಿ. ಚೆನ್ನಾಗಿ ಕಲಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಅರ್ಧ ಕಪ್), ಸ್ವಲ್ಪ ಗಟ್ಟಿಯಾದ ಇಡ್ಲಿ ಹಿಟ್ಟನ್ನು ತಯಾರಿಸಿಕೊಳ್ಳಿ.
- . ಉಪ್ಪು ಮತ್ತು ಸೋಡಾ ಬೆರೆಸಿ, ಚೆನ್ನಾಗಿ ಕಲಸಿ. ಸೋಡಾ ಹಾಕಲು ಇಷ್ಟವಿಲ್ಲದಿದ್ದರೆ, ಹಿಟ್ಟು ಕಲಸಿದ ಮೇಲೆ ಹದಿನೈದು ನಿಮಿಷ ಬಿಟ್ಟು ಮತ್ತೆ ಇಡ್ಲಿ ಮಾಡಿ.
- ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
- ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ. ಒಂದೆರಡು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ