Punarpuli saaru recipe in Kannada | ಪುನರ್ಪುಳಿ ಸಾರು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 4 - 5 ಒಣಗಿಸಿದ ಪುನರ್ಪುಳಿ
- 1 ಸಣ್ಣ ಲಿಂಬೆಗಾತ್ರದ ಬೆಲ್ಲ
- 1 ಹಸಿರುಮೆಣಸಿನಕಾಯಿ
- 2 ಟೀಸ್ಪೂನ್ ಉಪ್ಪು ಅಥವಾ ನಿಮ್ಮ ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 1/2 ಟೀಸ್ಪೂನ್ ಸಾಸಿವೆ
- 1 /2 ಟೀಸ್ಪೂನ್ ಜೀರಿಗೆ
- 1/4 ಟೀಸ್ಪೂನ್ ಮೆಂತೆ
- 1 - 2 ಒಣಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- ಇಂಗು ಒಂದು ದೊಡ್ಡ ಚಿಟಿಕೆ
- 4 ಟೀಸ್ಪೂನ್ ಅಡುಗೆ ಎಣ್ಣೆ
ಪುನರ್ಪುಳಿ ಸಾರು ಮಾಡುವ ವಿಧಾನ:
- ಪುನರ್ಪುಳಿಯನ್ನು ತೊಳೆದು ನೀರಿನಲ್ಲಿ ಕನಿಷ್ಠ ಮೂವತ್ತು ನಿಮಿಷಗಳ ಕಾಲ ನೆನೆಸಿಡಿ.
- ಆಮೇಲೆ ಅದನ್ನು ನೀರಿನ ಸಹಿತ ಒಂದು ಪಾತ್ರೆಗೆ ಹಾಕಿ. ಉಪ್ಪು, ಬೆಲ್ಲ ಮತ್ತು ಸೀಳಿದ ಹಸಿರುಮೆಣಸಿನಕಾಯಿ ಸೇರಿಸಿ.
- ಕುದಿಯಲು ಬಿಡಿ.
- ಸಣ್ಣ ಉರಿಯಲ್ಲಿ ಹತ್ತು ನಿಮಿಷ ಕುದಿಸಿ. ಬೇಕಾದಲ್ಲಿ ರುಚಿ ನೋಡಿ, ಉಪ್ಪು ಮತ್ತು ಬೆಲ್ಲ ಹೊಂದಿಸಿಕೊಳ್ಳಿ.
- ಒಗ್ಗರಣೆಗೆ ಬೇಕಾದ ಎಲ್ಲ ಪದಾರ್ಥಗಳನ್ನು (ಎಣ್ಣೆ, ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಮೆಂತೆ, ಇಂಗು ಮತ್ತು ಕರಿಬೇವು) ಉಪಯೋಗಿಸಿ ಒಗ್ಗರಣೆ ಮಾಡಿ.
- ಕುದಿಸಿದ ಸಾರಿಗೆ ಸೇರಿಸಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ. ಅಥವಾ ಹಾಗೆಯೂ ಕುಡಿಯಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ