Oats payasa recipe in Kannada | ಓಟ್ಸ್ ಪಾಯಸ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1/2 ಕಪ್ ಓಟ್ಸ್
- 1/2 ಕಪ್ ಬೆಲ್ಲ
- 2.5 ಕಪ್ ಹಾಲು
- 1 ಕಪ್ ನೀರು
- 2 ಟೇಬಲ್ ಚಮಚ ತುಪ್ಪ
- 5-6 ಗೋಡಂಬಿ
- ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ಓಟ್ಸ್ ಪಾಯಸ ಮಾಡುವ ವಿಧಾನ:
- ಹಾಲನ್ನು ಒಂದು ಪಾತ್ರೆಯಲ್ಲಿ ಕುದಿಯಲು ಇಡಿ.
- ಅದೇ ಸಮಯದಲ್ಲಿ ಇನ್ನೊಂದು ಬಾಣಲೆಯಲ್ಲಿ ಓಟ್ಸ್ ಮತ್ತು ತುಪ್ಪ ಹಾಕಿ.
- ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
- ಒಂದು ಕಪ್ ಬಿಸಿ ಹಾಲು ಮತ್ತು ಒಂದು ಕಪ್ ನೀರನ್ನು ಸೇರಿಸಿ. ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಉರಿ ತಗ್ಗಿಸಿ, ಆಗಾಗ್ಯೆ ಮಗುಚುತ್ತಾ ಓಟ್ಸ್ ನ್ನು ಬೇಯಿಸಿ. ಬೇಗ ಬೇಯುವ ಓಟ್ಸ್ ಆದಲ್ಲಿ ಮೂರು ನಿಮಿಷ ಸಾಕು.
- ಸಣ್ಣಗೆ ಕತ್ತರಿಸಿದ ಗೋಡಂಬಿ ಸೇರಿಸಿ.
- ಪುಡಿ ಮಾಡಿದ ಬೆಲ್ಲ ಸೇರಿಸಿ.
- ಮತ್ತು ಏಲಕ್ಕಿ ಪುಡಿ ಸೇರಿಸಿ.
- ಬೆಲ್ಲ ಕರಗಿದ ಮೇಲೆ ಉಳಿದ ಹಾಲು ಹಾಕಿ, ಕುದಿಸಿ. ನೆನಪಿಡಿ ಪಾಯಸ ತಣ್ಣಗಾದ ನಂತರ ಸ್ವಲ್ಪ ಗಟ್ಟಿಯಾಗುತ್ತದೆ. ಅದನ್ನು ಗಮನದಲ್ಲಿಟ್ಟು ಬೇಕಾದಲ್ಲಿ ಹಾಲನ್ನು ಸೇರಿಸಿ. ಸ್ಟೋವ್ ಆಫ್ ಮಾಡಿ.
- ರುಚಿಕರ ಪಾಯಸವನ್ನು ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ