ಗುರುವಾರ, ಮೇ 24, 2018

Badanekayi hasi masale huli recipe in Kannada | ಬದನೇಕಾಯಿ ಹಸಿ ಮಸಾಲೆ ಹುಳಿ ಮಾಡುವ ವಿಧಾನ

Badanekayi hasi masale huli recipe in Kannada

Badanekayi hasi masale huli recipe in Kannada | ಬದನೇಕಾಯಿ ಹಸಿ ಮಸಾಲೆ ಹುಳಿ ಮಾಡುವ ವಿಧಾನ

ಬದನೇಕಾಯಿ ಹಸಿ ಮಸಾಲೆ ಹುಳಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 - 4 ಬದನೇಕಾಯಿ (ಗಾತ್ರ ಅವಲಂಬಿಸಿ)
  2. ಒಂದು ಚಿಟಿಕೆ ಅರಶಿನ ಪುಡಿ 
  3. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಕೊತ್ತಂಬರಿ ಬೀಜ 
  2. 1/2 ಟೀಸ್ಪೂನ್ ಜೀರಿಗೆ 
  3. 1/4 ಟೀಸ್ಪೂನ್ ಸಾಸಿವೆ 
  4. 1/2 ಕಪ್ ತೆಂಗಿನ ತುರಿ 
  5. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  6. ಸ್ವಲ್ಪ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
  7. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 5 - 6 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಬದನೇಕಾಯಿ ಹಸಿ ಮಸಾಲೆ ಹುಳಿ ಮಾಡುವ ವಿಧಾನ:

  1. ಬದನೆಕಾಯಿಯನ್ನು ತೊಳೆದು ಕತ್ತರಿಸಿ. ನೀರಿನಲ್ಲಿ ಹತ್ತು ನಿಮಿಷ ಹಾಕಿಡಿ. 
  2. ನಂತ್ರ ಬದನೆಕಾಯಿಯನ್ನು ನೀರಿನಿಂದ ತೆಗೆದು, ಇನ್ನೊಂದು ಪಾತ್ರೆಗೆ ಹಾಕಿ. 
  3. ಅರಶಿನ, ಉಪ್ಪು ಮತ್ತು ನೀರು ಹಾಕಿ ಬೇಯಿಸಿ. ಬದನೇಕಾಯಿ ಬೇಗ ಬೇಯುತ್ತದೆ  ಹಾಗಾಗಿ ಪ್ರೆಷರ್ ಕುಕ್ಕರ್ ನ ಅಗತ್ಯವಿಲ್ಲ. 
  4. ಆ ಸಮಯದಲ್ಲಿ, ಮಿಕ್ಸಿಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಸಾಸಿವೆ ಮತ್ತು ತೆಂಗಿನ ತುರಿ ಹಾಕಿ ಅರೆಯಿರಿ. 
  5. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ಹಸಿರುಮೆಣಸಿನಕಾಯಿ ಹಾಕಿ ಅರೆಯಿರಿ. 
  6. ಬೇಯಿಸಿದ ಬದನೇಕಾಯಿಗೆ ಅರೆದ ಮಸಾಲೆ ಹಾಕಿ.
  7. ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ.
  8. ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ, ಆನಂದಿಸಿ !!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...