ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)
- 1/4 ಕಪ್ ರಾಗಿಹಿಟ್ಟು
- 1.5 ಕಪ್ ನೀರು (ಅರೆಯುವ ನೀರು ಸೇರಿಸಿ)
- ದೊಡ್ಡ ಚಿಟಿಕೆ ಇಂಗು
- 2 - 3 ಹಸಿರುಮೆಣಸಿನಕಾಯಿ
- 1/2 ಟೀಸ್ಪೂನ್ ಜೀರಿಗೆ
- 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
ರಾಗಿ ಸಂಡಿಗೆ ಮಾಡುವ ವಿಧಾನ:
- ರಾಗಿ ಹಿಟ್ಟು, ಉಪ್ಪು, ಹಸಿರುಮೆಣಸಿನಕಾಯಿ ಮತ್ತು ಇಂಗನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ, ಅರೆಯಿರಿ. ಒಂದರ್ಧ ಘಂಟೆ ನೆನೆಯಲು ಬಿಡಿ. ಗಮನಿಸಿ ಅರೆಯದೆಯೂ ಮಾಡಬಹುದು. ರಾಗಿ ಹಿಟ್ಟಿಗೆ ಉಪ್ಪು ಮತ್ತು ಹಸಿರುಮೆಣಸಿನಕಾಯಿಯನ್ನು ಜಜ್ಜಿ ಹಾಕಿದರಾಯಿತು.
- ಅರೆದ ರಾಗಿ ಹಿಟ್ಟನ್ನು, ಉಳಿದ ನೀರಿನೊಂದಿಗೆ ಒಂದು ಬಾಣಲೆಗೆ ಹಾಕಿ, ಕುದಿಯಲು ಇಡೀ.
- ಐದಾರು ನಿಮಿಷ ಅಥವಾ ಸ್ವಲ್ಪ ಗಟ್ಟಿಯಾಗುವವರೆಗೆ ಮಗುಚಿ.
- ಜೀರಿಗೆ ಸೇರಿಸಿ, ಸ್ಟವ್ ಆಫ್ ಮಾಡಿ.
- ಬಿಸಿ ಕಡಿಮೆ ಆದ ಮೇಲೆ, ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಎಣ್ಣೆ ಸವರಿದ ಪ್ಲೇಟ್ ನಲ್ಲಿ ಸಂಡಿಗೆ ಹಾಕಿ. ಬಿಸಿಲಿನಲ್ಲಿ ಒಣಗಲು ಇಡಿ.
- ದಿನದ ಕೊನೆಯಲ್ಲಿ ಸಂಡಿಗೆಯನ್ನು ಮಗುಚಿ ಹಾಕಿ.
- ಮತ್ತೊಂದೆರಡು ದಿವಸ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು. ಖಾಯಿಸುವಾಗ ಎಣ್ಣೆ ಬಿಸಿ ಇರಲಿ..ಆದರೆ ಬೇಗ-ಬೇಗ ಖಾಯಿಸಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ