Halasina hannina dose recipe in Kannada | ಹಲಸಿನ ಹಣ್ಣಿನ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ಹಲಸಿನ ಹಣ್ಣು
- 1/2 ಕಪ್ ಅಕ್ಕಿ
- 1/4 ಕಪ್ ತೆಂಗಿನ ತುರಿ
- ಸ್ವಲ್ಪ ಬೆಲ್ಲ (ಬೇಕಾದಲ್ಲಿ; ನಾನು ಹಾಕಲಿಲ್ಲ)
- ಉಪ್ಪು ರುಚಿಗೆ ತಕ್ಕಷ್ಟು.
- ಎಣ್ಣೆ ದೋಸೆ ಮಾಡಲು
ಹಲಸಿನ ಹಣ್ಣಿನ ದೋಸೆ ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು ಕನಿಷ್ಟ 2 - 3 ಘಂಟೆಗಳ ಕಾಲ ನೆನೆಸಿ.
- ಹಲಸಿನ ಹಣ್ಣನ್ನು ಬಿಡಿಸಿ ಇಟ್ಟುಕೊಳ್ಳಿ. ಬಿಡಿಸಿದ ಹಣ್ಣನ್ನು ಪುನಃ ಕತ್ತರಿಸಿದಲ್ಲಿ ಅರೆಯಲು ಸುಲಭವಾಗುವುದು.
- ಮಿಕ್ಸಿಯಲ್ಲಿ ನೆನೆಸಿದ ಅಕ್ಕಿ, ಹಲಸಿನ ಹಣ್ಣು ಮತ್ತು ತೆಂಗಿನತುರಿ ಹಾಕಿ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕಲಸಿ.
- ದೋಸೆಕಲ್ಲು ಬಿಸಿ ಮಾಡಿ, ದೋಸೆ ಮಾಡಿರಿ.
- ಮುಚ್ಚಳ ಮುಚ್ಚಿ ಬೇಯಿಸಿ.
- ನಂತ್ರ ಮೇಲಿನಿಂದ ಎಣ್ಣೆ ಹಾಕಿ, ಇನ್ನೊಂದು ಬದಿ ಕಾಯಿಸಿ.
- ಬಿಸಿ ದೋಸೆಯನ್ನು ಚಟ್ನಿ ಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ