Idli recipe using idli rice in Kannada | ಇಡ್ಲಿ ಅಕ್ಕಿಯಿಂದ ಇಡ್ಲಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1.5 ಕಪ್ ಇಡ್ಲಿ ಅಕ್ಕಿ
- 1/2 ಕಪ್ ಉದ್ದಿನ ಬೇಳೆ
- 1 ಟೀಸ್ಪೂನ್ ಮೆಂತೆ
- 1/4 - 1/2 ಕಪ್ ಗಟ್ಟಿ ಅವಲಕ್ಕಿ
- ಉಪ್ಪು ನಿಮ್ಮ ರುಚಿ ಪ್ರಕಾರ
ಇಡ್ಲಿ ಅಕ್ಕಿಯಿಂದ ಇಡ್ಲಿ ಮಾಡುವ ವಿಧಾನ:
- ಉದ್ದಿನಬೇಳೆ, ಅಕ್ಕಿ ಮತ್ತು ಮೆಂತೆಯನ್ನು ಬೇರೆ ಬೇರೆ ಪಾತ್ರೆಯಲ್ಲಿ ತೆಗೆದುಕೊಳ್ಳಿ.
- ಎಲ್ಲವನ್ನು ತೊಳೆದು 5 - 6 ಗಂಟೆಗಳ ಕಾಲ ನೆನೆಸಿಡಿ.
- ಅರೆಯುವ ಮುನ್ನ ಅವಲಕ್ಕಿಯನ್ನು ತೊಳೆದು 15 ನಿಮಿಷಗಳ ಕಾಲ ನೆನೆಸಿಡಿ.
- ನಂತರ ಮೊದಲಿಗೆ ಮೆಂತೆಯನ್ನು ಸಣ್ಣ ಮಿಕ್ಸಿ ಜಾರಿನಲ್ಲಿ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆದು ಒಂದು ಪಾತ್ರೆಗೆ ಬಗ್ಗಿಸಿ. ಅರೆಯಲು ನೆನೆಸಿದ ನೀರು ಉಪಯೋಗಿಸಬಹುದು.
- ಆಮೇಲೆ ಉದ್ದಿನಬೇಳೆಯನ್ನು ದೊಡ್ಡ ಮಿಕ್ಸಿ ಜಾರಿನಲ್ಲಿ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆದು ಅದೇ ಪಾತ್ರೆಗೆ ಬಗ್ಗಿಸಿ. ಅರೆಯಲು ನೆನೆಸಿದ ನೀರು ಉಪಯೋಗಿಸಬಹುದು.
- ನಂತರ ನೆನೆಸಿದ ಅಕ್ಕಿಯ ನೀರು ಬಸಿದು, ಸ್ವಲ್ಪ ತರಿ ತರಿಯಾಗಿ ಅರೆದು, ಅದೇ ಪಾತ್ರೆಗೆ ಬಗ್ಗಿಸಿ. ಅರೆಯಲು ಅಗತ್ಯವಿದ್ದಷ್ಟು ಮಾತ್ರ ನೀರು ಸೇರಿಸಿ. ಗಮನಿಸಿ, ಹೆಚ್ಚು ನೀರು ಸೇರಿಸಬೇಡಿ ಮತ್ತು ಸ್ವಲ್ಪ ತರಿ ತರಿ ಇದ್ದರೆ ಸಾಕು.
- ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ 7 - 8 ಗಂಟೆಗಳ ಕಾಲ ಹುದುಗಲು ಬಿಡಿ.
- ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
- ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
- 10 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ. ಒಂದೈದು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆಯಿರಿ.
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿGreat thanks. This article provides me with a wealth of information about the top 10 Indian brands of rice, including sona masoori, ildli, and jeera. For more information, go to Rettaikili.in
ಪ್ರತ್ಯುತ್ತರಅಳಿಸಿ