ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಸಣ್ಣ ಗಾತ್ರದ ಅನಾನಸ್
- 1 ಹಸಿರುಮೆಣಸಿನಕಾಯಿ (ಬೇಕಾದಲ್ಲಿ)
- 1 ಚಿಟಿಕೆ ಅರಿಶಿನ ಪುಡಿ
- ಬೆಲ್ಲ 2 ದೊಡ್ಡ ನಿಂಬೆಹಣ್ಣಿನ ಗಾತ್ರ
- 1 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಅರೆಯಲು ಬೇಕಾಗುವ ಪದಾರ್ಥಗಳು - ವಿಧಾನ ೧: ( ಅಳತೆ ಕಪ್ = 240 ಎಂಎಲ್ )
- 1 ಟೀಸ್ಪೂನ್ ಕೊತ್ತಂಬರಿ ಬೀಜ
- 3 - 6 ಒಣ ಮೆಣಸಿನಕಾಯಿ
- 1 ಕಪ್ ತೆಂಗಿನ ತುರಿ
- 1/4 ಟೀಸ್ಪೂನ್ ಮೆಂತ್ಯ
- 3 ಟೀಸ್ಪೂನ್ ಎಳ್ಳು
- 1 ಟೀಸ್ಪೂನ್ ಅಡುಗೆ ಎಣ್ಣೆ
ಅರೆಯಲು ಬೇಕಾಗುವ ಪದಾರ್ಥಗಳು - ವಿಧಾನ ೨: ( ಅಳತೆ ಕಪ್ = 240 ಎಂಎಲ್ )
- 1 ಟೀಸ್ಪೂನ್ ಉದ್ದಿನ ಬೇಳೆ
- 3 - 6 ಒಣ ಮೆಣಸಿನಕಾಯಿ
- 1 ಕಪ್ ತೆಂಗಿನ ತುರಿ
- 1/4 ಟೀಸ್ಪೂನ್ ಮೆಂತ್ಯ
- 3 ಟೀಸ್ಪೂನ್ ಎಳ್ಳು
- 1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1 ಒಣಮೆಣಸಿನಕಾಯಿ (ಬೇಕಾದಲ್ಲಿ)
- 4 - 5 ಕರಿಬೇವಿನ ಎಲೆ
- 4 ಟೀಸ್ಪೂನ್ ಅಡುಗೆ ಎಣ್ಣೆ
ಅನಾನಸ್ ಮೆಣಸ್ಕಾಯಿ ಮಾಡುವ ವಿಧಾನ:
- ಅನಾನಸ್ ನ್ನು ತೊಳೆದು, ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿಕೊಳ್ಳಿ.
- ಕತ್ತರಿಸಿದ ಅನಾನಸ್, ಉಪ್ಪು, ಬೆಲ್ಲ, ಅರಿಶಿನ ಮತ್ತು ಸೀಳಿದ ಹಸಿರುಮೆಣಸಿನಕಾಯಿಯನ್ನು ಕುಕ್ಕರ್ ನಲ್ಲಿ ತೆಗೆದುಕೊಂಡು, ಅನಾನಸ್ ಮೆತ್ತಗಾಗುವವರೆಗೆ ಬೇಯಿಸಿ.
- ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಎಳ್ಳನ್ನು ಹುರಿದು ತೆಗೆದಿಡಿ.
- ನಂತರ ಅದೇ ಬಾಣಲೆಗೆ 1 ಚಮಚ ಎಣ್ಣೆ ಹಾಕಿ. ನಂತರ (ಉದ್ದಿನ ಬೇಳೆ + ಮೆಂತೆ + ಒಣಮೆಣಸು) ಅಥವಾ (ಕೊತ್ತಂಬರಿ ಬೀಜ + ಮೆಂತೆ + ಒಣಮೆಣಸು) ಹಾಕಿ ಮಧ್ಯಮ ಉರಿಯಲ್ಲಿ ಹುರಿದು ತೆಗೆದಿಡಿ. ಉದ್ದಿನಬೇಳೆ ಅಥವಾ ಕೊತ್ತಂಬರಿ ಯಾವುದು ಹಾಕಿದರೂ ರುಚಿ ಅಷ್ಟು ವ್ಯತ್ಯಾಸ ಬರುವುದಿಲ್ಲ.
- ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಪದಾರ್ಥಗಳನ್ನು ಹಾಕಿ ಅರೆಯಿರಿ.
- ಬೇಯಿಸಿದ ಅನಾನಸ್ ಗೆ ಅರೆದ ಮಸಾಲೆ ಸೇರಿಸಿ. ಬೇಕಾದಲ್ಲಿ ಉಪ್ಪು ಮತ್ತು ಬೆಲ್ಲ ಹೊಂದಿಸಿ. ಬೇಕಾದಷ್ಟು ನೀರು ಸೇರಿಸಿ, ಒಂದು ಕುದಿ ಕುದಿಸಿ.
- ನಂತರ ಎಣ್ಣೆ, ಒಣಮೆಣಸು, ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಮಾಡಿ. ಅನ್ನ ಅಥವಾ ಚಪಾತಿ ಜೊತೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ