Mosaru avalakki recipe in Kannada | ಮೊಸರು ಅವಲಕ್ಕಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1 ಕಪ್ ಗಟ್ಟಿ ಅವಲಕ್ಕಿ
- 1 ಕಪ್ ಮೊಸರು
- 1/4 ಕಪ್ ಹಾಲು (ಮೊಸರು ಹುಳಿ ಇದ್ದರೆ ಮಾತ್ರ)
- 1/2 ಚಮಚ ಸಾಸಿವೆ
- 1 ಟೀಸ್ಪೂನ್ ಉದ್ದಿನ ಬೇಳೆ
- 5 - 6 ಗೋಡಂಬಿ
- 4 - 5 ಕರಿಬೇವಿನ ಎಲೆ
- 1 ಹಸಿರು ಮೆಣಸಿನಕಾಯಿ ಅಥವಾ ಮಜ್ಜಿಗೆ ಮೆಣಸು
- ಒಂದು ಸೆಮೀ ಉದ್ದದ ಶುಂಠಿ ಸಣ್ಣಗೆ ಕತ್ತರಿಸಿದ್ದು
- ಒಂದು ಚಿಟಿಕೆ ಇಂಗು
- 1 ಟೇಬಲ್ ಚಮಚ ಸಣ್ಣಗೆ ಕತ್ತರಿಸಿದ ಕೊತಂಬರಿ ಸೊಪ್ಪು
- 1 ಟೇಬಲ್ ಚಮಚ ತೆಂಗಿನತುರಿ
- 1/2 ಟೀ ಚಮಚ ಸಕ್ಕರೆ (ನಿಮ್ಮ ರುಚಿಗನುಗುಣವಾಗಿ)
- 2 ಟೀ ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಮೊಸರು ಅವಲಕ್ಕಿ ಮಾಡುವ ವಿಧಾನ:
- ಮೊದಲಿಗೆ ಗಟ್ಟಿ ಅವಲಕ್ಕಿಯನ್ನು ತೊಳೆದು ನೆನೆಸಿಟ್ಟುಕೊಳ್ಳಿ. ತೆಳು ಅವಲಕ್ಕಿ ಆದಲ್ಲಿ ನೆನೆಸುವುದು ಬೇಡ. ಮೀಡಿಯಂ ಅವಲಕ್ಕಿ ಆದಲ್ಲಿ ಒಂದೆರಡು ನಿಮಿಷ ನೆನೆಸಿದರೆ ಸಾಕು.
- ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನ ಬೇಳೆ ಮತ್ತು ಗೋಡಂಬಿಯ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಮೇಲೆ ಕರಿಬೇವಿನ ಎಲೆ, ಹಸಿರು ಮೆಣಸಿನಕಾಯಿ (ಅಥವಾ ಮಜ್ಜಿಗೆ ಮೆಣಸು), ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಇಂಗು ಹಾಕಿ. ಅಲಂಕಾರಕ್ಕೆ ಸ್ವಲ್ಪ ಒಗ್ಗರಣೆ ತೆಗೆದಿಟ್ಟುಕೊಳ್ಳಿ.
- ನೆನೆಸಿಟ್ಟ ಅವಲಕ್ಕಿ ಹಾಕಿ ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ.
- ಉಪ್ಪು, ಸಕ್ಕರೆ ಮತ್ತು ತೆಂಗಿನ ತುರಿ ಹಾಕಿ, ಮಗುಚಿ ತಣ್ಣಗಾಗಲು ಬಿಡಿ.
- ಬಿಸಿ ಆರಿದ ಮೇಲೆ ಮೊಸರು ಹಾಕಿ. ಮೊಸರು ಹುಳಿ ಇದ್ದಲ್ಲಿ ಹಾಲನ್ನು ಸೇರಿಸಿ. ಅಗತ್ಯವಿದ್ದಲ್ಲಿ, ಸ್ವಲ್ಪ ಮಜ್ಜಿಗೆ ಅಥವಾ ನೀರು ಅಥವಾ ಇನ್ನು ಸ್ವಲ್ಪ ಮೊಸರು ಸೇರಿಸಬಹುದು.
- ಕೊತಂಬರಿ ಸೊಪ್ಪು, ತೆಗೆದಿಟ್ಟ ಒಗ್ಗರಣೆ ಮತ್ತು ದಾಳಿಂಬೆಯಿಂದ (ದಾಳಿಂಬೆ ಬೇಕಾದಲ್ಲಿ) ಅಲಂಕರಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ