Home remedy for gantalu keretha | ಗಂಟಲು ಕೆರೆತ ಮತ್ತು ನೋವಿಗೆ ಕಾಳುಮೆಣಸಿನ ಕಷಾಯದ ಮನೆಮದ್ದು
ಕಾಳುಮೆಣಸಿನ ಕಷಾಯ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )
- 1 ಟೀಸ್ಪೂನ್ ಕಾಳುಮೆಣಸು
- 1 ಏಲಕ್ಕಿ
- 1 ನೆಲ್ಲಿಕಾಯಿ ಗಾತ್ರದ ಬೆಲ್ಲ
- 1 ಲೋಟ ನೀರು
- 1/4 ಲೋಟ ಹಾಲು
ಕಾಳುಮೆಣಸಿನ ಕಷಾಯ ಮಾಡುವ ವಿಧಾನ:
- ಕಾಳುಮೆಣಸು ಮತ್ತು ಏಲಕ್ಕಿಯನ್ನು ಜಜ್ಜಿ ಪುಡಿ ಮಾಡಿಕೊಳ್ಳಿ.
- ನಂತ್ರ ಅದನ್ನು ಒಂದು ಪಾತ್ರೆಗೆ ಹಾಕಿ. ಬೆಲ್ಲ ಮತ್ತು ನೀರು ಸೇರಿಸಿ ಕುದಿಸಿ .
- ಸುಮಾರು ಐದು ನಿಮಿಷಗಳ ಕಾಲ ಅಥವಾ ನೀರು ಮುಕ್ಕಾಲು ಕಪ್ ಆಗುವವರೆಗೆ ಕುದಿಸಿ.
- ಅದಕ್ಕೆ ಕಾಲು ಕಪ್ ಬಿಸಿ ಹಾಲು ಸೇರಿಸಿ. ಬೇಕಾದಲ್ಲಿ ಜಾಸ್ತಿ ಸೇರಿಸಬಹುದು.
- ಬಿಸಿ ಇರುವಾಗಲೇ ನಿಧಾನವಾಗಿ ಕುಡಿಯಿರಿ. ದಿನಕ್ಕೆ ಒಂದು ಬಾರಿ ಮಲಗುವ ಮುನ್ನ ಕುಡಿದರೆ ಸಾಕು. ಜೋರಿದ್ದರೆ ಎರಡು ಬಾರಿ ಕುಡಿಯಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ