Iyengar bread toast recipe in Kannada | ಐಯಂಗಾರ್ ಬ್ರೆಡ್ ಟೋಸ್ಟ್ ಮಾಡುವ ವಿಧಾನ
ಮಸಾಲಾ ಬ್ರೆಡ್ ಟೋಸ್ಟ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 6 ಬ್ರೆಡ್
- ಎರಡು ಟೇಬಲ್ ಚಮಚ ಬೆಣ್ಣೆ
- ಒಂದು ಟೇಬಲ್ ಚಮಚ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1 ಹಸಿರುಮೆಣಸಿನಕಾಯಿ
- 1 ಈರುಳ್ಳಿ
- 1 ಕ್ಯಾರೆಟ್
- 1/2 ದೊಣ್ಣೆಮೆಣಸು
- 1 ಟೊಮೇಟೊ
- 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1/2 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/4 ಟೀಸ್ಪೂನ್ ಚಾಟ್ ಮಸಾಲಾ
- 1/4 ಟೀಸ್ಪೂನ್ ಗರಂ ಮಸಾಲಾ
- ಚಿಟಿಕೆ ಅರಿಶಿನ
- ಉಪ್ಪು ರುಚಿಗೆ ತಕ್ಕಷ್ಟು.
ಐಯಂಗಾರ್ ಬ್ರೆಡ್ ಟೋಸ್ಟ್ ಮಾಡುವ ವಿಧಾನ:
- ಮೊದಲಿಗೆ ಎಲ್ಲ ತರಕಾರಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಕ್ಯಾರಟ್ ನ್ನು ತುರಿದಿಟ್ಟುಕೊಳ್ಳಿ.
- ನಂತ್ರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿಕೊಳ್ಳಿ.
- ಸಣ್ಣಗೆ ಕತ್ತರಿಸಿದ ಹಸಿರುಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ.
- ಆಮೇಲೆ ಸಣ್ಣಗೆ ಕತ್ತರಿಸಿದ ದೊಣ್ಣೆಮೆಣಸು ಮತ್ತು ತುರಿದ ಕ್ಯಾರಟ್ ಹಾಕಿ ಹುರಿಯಿರಿ.
- ಆಮೇಲೆ ಸಣ್ಣಗೆ ಕತ್ತರಿಸಿದ ಟೊಮೇಟೊ, ಅರಿಶಿನ ಪುಡಿ ಮತ್ತು ಉಪ್ಪು ಹಾಕಿ. ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. ನೀರು ಸೇರಿಸಬೇಡಿ.
- ಕೊನೆಯಲ್ಲಿ ಅಚ್ಚಖಾರದ ಪುಡಿ, ಚಾಟ್ ಮಸಾಲಾ ಮತ್ತು ಗರಂ ಮಸಾಲಾ ಸೇರಿಸಿ, ಮಗುಚಿ.
- ನಂತ್ರ ಕೊತ್ತಂಬರಿ ಸೊಪ್ಪು ಉದುರಿಸಿ ಸ್ಟವ್ ಆಫ್ ಮಾಡಿ. ಮಸಾಲೆ ತಯಾರಾಯಿತು.
- ಬ್ರೆಡ್ ನ್ನು, ಬೆಣ್ಣೆ ಹಚ್ಚಿ, ಕಾವಲಿ ಅಥವಾ ತವಾದಲ್ಲಿ ಕಾಯಿಸಿ.
- ನಂತರ ತಯಾರಿಸಿದ ಮಸಾಲೆಯನ್ನು ಮೇಲಿನಿಂದ ಹಚ್ಚಿ, ಮಸಾಲೆ ಬ್ರೆಡ್ ಟೋಸ್ಟ್ ತಯಾರಿಸಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ