Hurigadale thambittu recipe in Kannada | ಹುರಿಗಡಲೆ ತಂಬಿಟ್ಟು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಹುರಿಗಡಲೆ
- 1/2 ಕಪ್ ಕೊಬ್ಬರಿ ತುರಿ
- 1/2 - 3/4 ಕಪ್ ಬೆಲ್ಲ
- 1/3 ಕಪ್ ತುಪ್ಪ
- 1 ಟೀಸ್ಪೂನ್ ಗಸಗಸೆ
- ಎರಡು ಏಲಕ್ಕಿ ಪುಡಿ
ಹುರಿಗಡಲೆ ತಂಬಿಟ್ಟು ಮಾಡುವ ವಿಧಾನ:
- ಹುರಿಗಡಲೆ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.
- ಗಸಗಸೆಯನ್ನು ಹುರಿದಿಟ್ಟುಕೊಳ್ಳಿ.
- ಕೊಬ್ಬರಿಯನ್ನು ಹುರಿದು ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳಿ
- ಒಂದು ಬಾಣಲೆಯಲ್ಲಿ 1/4 ಕಪ್ ತುಪ್ಪ ಬಿಸಿ ಮಾಡಿ. ಅದಕ್ಕೆ ಪುಡಿಮಾಡಿದ ಬೆಲ್ಲ ಸೇರಿಸಿ.
- ಬೆಲ್ಲ ಕರಗಿ ಕುದಿಯಲು ಪ್ರಾರಂಭವಾದಾಗ ಪುಡಿ ಮಾಡಿದ ಕೊಬ್ಬರಿ ಹಾಕಿ.
- ಮತ್ತು ಗಸಗಸೆ ಹಾಕಿ ಒಮ್ಮೆ ಮಗುಚಿ.
- ಪುಡಿಮಾಡಿದ ಹುರಿಗಡಲೆ ಸೇರಿಸಿ, ಸ್ಟವ್ ಆಫ್ ಮಾಡಿ.
- ಚೆನ್ನಾಗಿ ಕಲಸಿ.
- ಬಿಸಿ ಆರಿದ ಮೇಲೆ ಉಂಡೆ ಮಾಡಿ. ತುಂಬಾ ಪುಡಿ ಪುಡಿ ಎನಿಸಿದರೆ ಸ್ವಲ್ಪ ತುಪ್ಪ ಹಾಕಿ, ಕಲಸಿ ಉಂಡೆ ಕಟ್ಟಿ.
Its very supportive & inspirational method to me because I'm not a good cook. Thank you so much
ಪ್ರತ್ಯುತ್ತರಅಳಿಸಿ