ಮಸಾಲೆ ಮಜ್ಜಿಗೆ ಬೇಸಿಗೆ ಕಾಲದಲ್ಲಿ ಮನಸ್ಸಿಗೆ ಉಲ್ಲಾಸ ಮತ್ತು ದೇಹವನ್ನು ತಂಪಾಗಿಸುವ ರುಚಿಕರ ಪಾನೀಯವಾಗಿದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದನ್ನು ಸಾದಾ ಮೊಸರು, ಹಸಿರು ಮೆಣಸಿನಕಾಯಿ, ಕೊತ್ತುಂಬರಿ ಸೊಪ್ಪು ಮತ್ತು ಶುಂಠಿ ಸೇರಿಸಿ ಮಾಡಲಾಗುತ್ತದೆ. ನಿಮ್ಮ ರುಚಿಯನ್ನು ಅವಲಂಬಿಸಿ ಪುಡಿಮಾಡಿದ ಕಾಳುಮೆಣಸು ಅಥವಾ ಬೆಳ್ಳುಳ್ಳಿ ಸೇರಿಸಬಹುದು. ಮಸಾಲೆ ಮಜ್ಜಿಗೆ ಸಿದ್ಧಪಡಿಸುವಾಗ ಒಗ್ಗರಣೆ ಹಾಕುವುದು ಮತ್ತು ನುಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸುವುದು ಕೂಡ ಚಾಲ್ತಿಯಲ್ಲಿದೆ.
ಮಸಾಲೆ ಮಜ್ಜಿಗೆಯನ್ನು ರಾಮನವಮಿ ಹಬ್ಬದ ಸಮಯದಲ್ಲಿ ಕೋಸಂಬರಿ ಮತ್ತು ಬೆಲ್ಲದ ಪಾನಕ ದೊಂದಿಗೆ ಹಂಚುವ ಸಂಪ್ರದಾಯವಿದೆ. ಊಟವಾದ ಕೂಡಲೇ ಒಂದು ಲೋಟ ಮಸಾಲೆ ಮಜ್ಜಿಗೆ ಕೊಟ್ಟರೆ ಸಂತೋಷದಿಂದ ಬಾಯಿಚಪ್ಪರಿಸಿ ಕುಡಿಯುವ ಮಂದಿ ಅದೆಷ್ಟು ಜನರಿಲ್ಲ?
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 2 ಕಪ್
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 2 ಕಪ್
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 250 ಎಂಎಲ್ )
- 1 ಕಪ್ ಗಟ್ಟಿ ಮೊಸರು
- 2 ಕಪ್ ನೀರು
- 1/2 ಟೀಸ್ಪೂನ್ ಹೆಚ್ಚಿದ ಹಸಿ ಮೆಣಸಿನಕಾಯಿ
- 1/2 ಟೀಸ್ಪೂನ್ ಹೆಚ್ಚಿದ ಶುಂಠಿ
- 1 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು.
ಮಸಾಲೆ ಮಜ್ಜಿಗೆ ಮಾಡುವ ವಿಧಾನ
- ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಹೆಚ್ಚಿ ಕೊಂಡು, ಗುದ್ದಿ ಪುಡಿ ಮಾಡಿ ಕೊಳ್ಳಿ.
- ಒಂದು ಪಾತ್ರೆಗೆ ಮೊಸರು, ನೀರು, ಉಪ್ಪು ಮತ್ತು ಗುದ್ದಿದ ಮಸಾಲೆ ಸೇರಿಸಿ ಕಡಗೋಲಿನಿಂದ ಅಥವಾ ಒಂದು ಪಾತ್ರೆಯಿಂದ ಇನ್ನೊಂದಕ್ಕೆ ಎತ್ತಿ ಹಾಕುತ್ತಾ ಚೆನ್ನಾಗಿ ಬೆರೆಸಿ. ನಿಮಗಿಷ್ಟವಿದ್ದಲ್ಲಿ ಸೋಸಿ ಅಥವಾ ಹಾಗೇ ಕುಡಿಯಲು ಕೊಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ