Bendekai mirpudi recipe in Kannada | ಬೆಂಡೆಕಾಯಿ ಮಿರ್ಪುಡಿ ಮಾಡುವ ವಿಧಾನ
ಬೆಂಡೆಕಾಯಿ ಮಿರ್ಪುಡಿ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 1/4 kg ಬೆಂಡೆಕಾಯಿ
- 1 ಕಪ್ ಒಣಕೊಬ್ಬರಿ ತುರಿ
- 1/2 ಕಪ್ ಹುರಿಗಡಲೆ
- 1 ಟೇಬಲ್ ಚಮಚ ಅಚ್ಚಖಾರದ ಪುಡಿ (ರುಚಿಗೆ ತಕ್ಕಂತೆ ಹೊಂದಿಸಿ)
- 2 ಟೀಸ್ಪೂನ್ ಉಪ್ಪು (ರುಚಿಗೆ ತಕ್ಕಂತೆ ಹೊಂದಿಸಿ)
- 2 ಟೀಸ್ಪೂನ್ ಬೆಲ್ಲ (ರುಚಿಗೆ ತಕ್ಕಂತೆ ಹೊಂದಿಸಿ)
- ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- 1/2 ಟೀಸ್ಪೂನ್ ಜೀರಿಗೆ
- ಎಣ್ಣೆ ಬೆಂಡೆಕಾಯಿ ಕಾಯಿಸಲು
ಬೆಂಡೆಕಾಯಿ ಮಿರ್ಪುಡಿ ಮಾಡುವ ವಿಧಾನ:
- ಬೆಂಡೆಕಾಯಿಯನ್ನು ತೊಳೆದು ನೀರಾರಿಸಿ.
- ತೆಳುವಾದ ಬಿಲ್ಲೆಗಳಾಗಿ ಕತ್ತರಿಸಿಕೊಳ್ಳಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
- ಕತ್ತರಿಸಿದ ಬೆಂಡೆಕಾಯಿಯನ್ನು ಬಿಸಿ ಎಣ್ಣೆಗೆ ಹಾಕಿ.
- ಹೊಂಬಣ್ಣ ಬರುವವರೆಗೆ ಖಾಯಿಸಿ ತೆಗೆಯಿರಿ.
- ನಂತರ ನಂತ್ರ ಒಂದು ಮಿಕ್ಸಿಜಾರಿನಲ್ಲಿ ಕೊಬ್ಬರಿ ತುರಿ ತೆಗೆದುಕೊಳ್ಳಿ.
- ಅದಕ್ಕೆ ಹುರಿಗಡಲೆ, ಅಚ್ಚಖಾರದ ಪುಡಿ, ಉಪ್ಪು, ಬೆಲ್ಲ, ಹುಣಿಸೇಹಣ್ಣು ಮತ್ತು ಜೀರಿಗೆ ಸೇರಿಸಿ.
- ನುಣ್ಣಗೆ ಪುಡಿ ಮಾಡಿ.
- ಪುಡಿಯನ್ನು ಕರಿದು ತೆಗೆದ ಬೆಂಡೆಕಾಯಿಗೆ ಸೇರಿಸಿ, ಕಲಸಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 15 ದಿನಗಳ ಕಾಲ ಹಾಳಾಗುವುದಿಲ್ಲ.
- ಬಿಸಿಯಾದ ಅನ್ನ ಮತ್ತು ತುಪ್ಪದೊಂದಿಗೆ ಬಡಿಸಿ. ಚಟ್ನಿ ಪುಡಿಯಂತೆ ಕಲಸಿ ತಿನ್ನಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ